ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗಲಿರುವ ಚಿತ್ರಗಳ ರನ್‌ಟೈಮ್ ಹಾಗೂ ಸೆನ್ಸಾರ್ ಮಾಹಿತಿ

Sankranti 2023 releasing movies runtime and censor certificate details

ಪ್ರತಿ ವರ್ಷದ ಸಂಕ್ರಾಂತಿ ಹಾಗೆ ಈ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತವೂ ಸಹ ಹಲವಾರು ಚಿತ್ರಗಳು ಬಿಡುಗಡೆಯಾಗಲಿವೆ. ತೆಲುಗಿನಲ್ಲಿ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆಯಾಗುತ್ತಿದ್ದರೆ, ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ತೆರೆಗೆ ಬರುತ್ತಿವೆ. ಇನ್ನು ಕನ್ನಡದಲ್ಲಿಯೂ ಸಹ ಆರ್ಕೆಸ್ಟ್ರಾ ಮೈಸೂರು ಹಾಗೂ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರಗಳು ತೆರೆಗೆ ಬರಲಿವೆ.

ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಕನ್ನಡದ ಯಾವ ಸ್ಟಾರ್ ನಟನ ಚಿತ್ರಗಳು ಕೂಡ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗುತ್ತಿಲ್ಲ. ಆದರೆ ತೆಲುಗು ಮತ್ತು ತಮಿಳಿನಲ್ಲಿ ಮಾತ್ರ ಈ ಬಾರಿಯೂ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿವೆ. ಇನ್ನು ಈ ಚಿತ್ರಗಳ ನಡುವೆ ಪೈಪೋಟಿ ಏರ್ಪಡಲಿದ್ದು, ಯಾವ ಚಿತ್ರ ಹೆಚ್ಚು ಕಲೆಕ್ಷನ್ ಮಾಡಿ ಸಂಕ್ರಾಂತಿ ವಿನ್ನರ್ ಎನಿಸಿಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಸದ್ಯ ಈ ಎಲ್ಲಾ ಚಿತ್ರಗಳ ಟ್ರೈಲರ್‌ಗಳೂ ಬಿಡುಗಡೆಗೊಂಡಿದ್ದು, ವಾರಿಸು ಟ್ರೈಲರ್‌ ಹೆಚ್ಚು ಟ್ರೋಲ್‌ಗೆ ಒಳಗಾದರೆ, ತುನಿವು ಚಿತ್ರದ ಟ್ರೈಲರ್ ಪರವಾಗಿಲ್ಲ ಎಂಬ ಟಾಕ್ ಪಡೆದುಕೊಂಡಿತ್ತು. ಅತ್ತ ತೆಲುಗಿನ ವೀರಸಿಂಹ ರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಎರಡೂ ಚಿತ್ರಗಳ ಟ್ರೈಲರ್ ಸಹ ಮೆಚ್ಚುಗೆ ಪಡೆದುಕೊಂಡಿದ್ದವು. ಇನ್ನು ವಾರಿಸು ಹಾಗೂ ತುನಿವು ಒಂದೇ ದಿನ ಬಿಡುಗಡೆಗೊಂಡರೆ, ತೆಲುಗಿನ ವೀರಸಿಂಹ ರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಬೇರೆ ಬೇರೆ ದಿನಗಳಲ್ಲಿ ರಿಲೀಸ್ ಆಗಲಿವೆ.

ಇನ್ನು ಈ ಎಲ್ಲಾ ಚಿತ್ರಗಳ ರನ್ ಟೈಮ್ ಎಷ್ಟು ಹಾಗೂ ಈ ಚಿತ್ರಗಳು ಯಾವ ಸೆನ್ಸಾರ್ ಸರ್ಟಫಿಕೇಟ್ ಪಡೆದುಕೊಂಡಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ತುನಿವು - ಯು/ಎ ಸರ್ಟಿಫಿಕೇಟ್ - 2 ಗಂಟೆ 25 ನಿಮಿಷ 48 ಸೆಕೆಂಡುಗಳು

ವಾರಿಸು - ಯು ಸರ್ಟಿಫಿಕೇಟ್ - 2 ಗಂಟೆ 50 ನಿಮಿಷ 30 ಸೆಂಕೆಂಡುಗಳು

ವೀರ ಸಿಂಹ ರೆಡ್ಡಿ - ಯು/ಎ ಸರ್ಟಿಫೀಕೇಟ್ - 2 ಗಂಟೆ 49 ನಿಮಿಷಗಳು

ವಾಲ್ತೇರು ವೀರಯ್ಯ - ಯು/ಎ ಸರ್ಟಿಫಿಕೇಟ್ - 2 ಗಂಟೆ 40 ನಿಮಿಷ 3 ಸೆಕೆಂಡುಗಳು

ಕಲ್ಯಾಣಂ ಕಮನೀಯಂ - ಯು ಸರ್ಟಿಫಿಕೇಟ್ - 1 ಗಂಟೆ 46 ನಿಮಿಷಗಳು

More from Filmibeat

English summary
Sankranti 2023 releasing movies runtime and censor certificate details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X