ಸಂಕ್ರಾಂತಿ ಬಾಕ್ಸಾಫೀಸ್ ಕದನ; ಪ್ರಭಾಸ್‌ಗಾಗಿ ಚಿರು ಸಿನಿಮಾ ಹಾಡಿನ ಸಾಹಿತ್ಯವೇ ಬದಲಾಯ್ತು!

ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಜೊತೆಗೆ ಚಿರಂಜೀವಿ ಹಾಗೂ ನಯನತಾರ ಜೋಡಿಯ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಬಿಡುಗಡೆ ಆಗ್ತಿದೆ. ಅದ್ಯಾಕೋ ಪ್ರಭಾಸ್ ನಟನೆಯ ಹಾರರ್ ಥ್ರಿಲ್ಲರ್ ಸಿನಿಮಾ ಹೈಪ್ ಕ್ರಿಯೇಟ್ ಮಾಡ್ತಿಲ್ಲ.

ಬರೀ ಆಕ್ಷನ್ ಸಿನಿಮಾಗಳಲ್ಲೇ ಪ್ರಭಾಸ್ ಅವರನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗಾಗಿ ಹಾರರ್ ಕಾಮಿಡಿ ಚಿತ್ರದಲ್ಲಿ ಅವರನ್ನು ಊಹಿಸಿಕೊಳ್ಳಲು ಕೆಲವರು ಕಷ್ಟಪಡುತ್ತಿದ್ದಾರೆ. 'ದಿ ರಾಜಾಸಾಬ್' ಚಿತ್ರಕ್ಕೆ ಮಾರುತಿ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಅನಿಲ್ ರಾವಿಪುಡಿ ನಿರ್ದೇಶನದ ಫ್ಯಾಮಿಲಿ ಕಾಮಿಡಿ ಚಿತ್ರ 'ಮನ ಶಂಕರವರಪ್ರಸಾದ್ ಗಾರು' ನಿರೀಕ್ಷೆ ಹುಟ್ಟಾಕ್ಕಿದೆ.

Sankranti Box Office Clash Chiranjeevi Venkatesh s Mana Shankaravaraprasad Garu Takes On Prabhas The Rajasaab

ಕಳೆದ ವರ್ಷ ಅನಿಲ್ ನಿರ್ದೇಶನದಲ್ಲೇ ವಿಕ್ಟರಿ ವೆಂಕಟೇಶ್ ನಟನೆಯ 'ಸಂಕ್ರಾಂತಿಗೆ ವಸ್ತುನ್ನಾಂ' ಸಿನಿಮಾ ತೆರೆಗೆ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೀಗ 'ಮನ ಶಂಕರವರಪ್ರಸಾದ್ ಗಾರು' ಚಿತ್ರದಲ್ಲಿ ಚಿರಂಜೀವಿ ಜೊತೆ ವೆಂಕಟೇಶ್ ಕೈ ಜೋಡಿಸಿದ್ದಾರೆ. ಹಾಗಾಗಿ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಬಹಳ ಸುಲಭವಾಗಿ ಈ ಸಿನಿಮಾ ಗೆಲ್ಲುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಸುಗ್ಗಿ ಹಬ್ಬದ ಸಂಭ್ರಮದಲ್ಲಿ ಫ್ಯಾಮಿಲಿ ಆಡಿಯನ್ಸ್ ದೊಡ್ಡಮಟ್ಟದಲ್ಲಿ ಸಿನಿಮಾ ನೋಡುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

'ಮನ ಶಂಕರವರಪ್ರಸಾದ್ ಗಾರು' ಚಿತ್ರದ 'ಮೆಗಾ ವಿಕ್ಟರಿ ಮಾಸ್' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿರು ಹಾಗೂ ವೆಂಕಿ ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಅಭಿಮಾನಿಗಳು ಸಾಂಗ್ ನೋಡಿ ಮೆಚ್ಚಿಕೊಂಡಿದ್ದಾರೆ. ಸ್ಟಾರ್ ನಟರಿಬ್ಬರು ಒಂದೇ ಫ್ರೇಮ್‌ನಲ್ಲಿ ಬಂದು ಅಭಿಮಾನಿಗಳಿಗೆ ಮಜಾ ಕೊಟ್ಟಿದ್ದಾರೆ. ಆದರೆ ಚಿತ್ರದ ಹಾಡಿನ ಸಾಹಿತ್ಯ ಬದಲಿಸಿರುವುದು ಗೊತ್ತಾಗುತ್ತಿದೆ. ಹಾಡಿನ ಚಿತ್ರೀಕರಣದ ಬಳಿಕ ಕೊಂಚ ಸಾಹಿತ್ಯ ಬದಲಿಸಿರುವುದು ಚಿರು, ವೆಂಕಿ ಲಿಪ್‌ಸಿಂಕ್ ನೋಡಿದರೆ ಅರ್ಥವಾಗುತ್ತದೆ.

"ಏನು ವೆಂಕಿ ಸಂಗತಿ, ನಮ್ದೇ ಅಲ್ವಾ ಸಂಕ್ರಾಂತಿ" ಎಂದು ಹಾಡನ್ನು ಮೊದಲು ಚಿತ್ರೀಕರಣ ಮಾಡಿದ್ದಾರೆ. ಬಳಿಕ "ಏನು ವೆಂಕಿ ಸಂಗತಿ, ಧೂಳೆಬ್ಬಿಸೋಣ ಸಂಕ್ರಾಂತಿ" ಎಂದು ಸಾಹಿತ್ಯ ಬದಲಿಸಿರುವುದು ಗೊತ್ತಾಗುತ್ತಿದೆ. ಪ್ರಭಾಸ್ ಸಿನಿಮಾ ಕೂಡ ಸಂಕ್ರಾಂತಿ ಸಂಭ್ರಮದಲ್ಲೇ ಬಿಡುಗಡೆ ಆಗ್ತಿದೆ. ನಮ್ದೇ ಈ ಸಂಕ್ರಾಂತಿ ಅಂದ್ರೆ, 'ದಿ ರಾಜಾಸಾಬ್' ಚಿತ್ರಕ್ಕೆ ಟಾಂಗ್ ಕೊಟ್ಟಂತೆ ಆಗುತ್ತದೆ ಎನ್ನುವ ಕಾರಣಕ್ಕೆ ಸಾಹಿತ್ಯ ಬದಲಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಈಗಾಗಲೇ 'ಮನ ಶಂಕರವರಪ್ರಸಾದ್ ಗಾರು' ಚಿತ್ರದ 'ಮೀಸಾಲ ಪಿಲ್ಲ' ಹಾಗೂ 'ಸಸಿರೇಖ' ಎಂಬ ಹಾಡುಗಳು ರಿಲೀಸ್ ಆಗಿ ಹಿಟ್ ಲಿಸ್ಟ್ ಸೇರಿದೆ. ಚಿರಂಜೀವಿ ನಟನೆಯ ಸಿನಿಮಾಗಳು ಇತ್ತೀಚೆಗೆ ಗೆಲ್ಲುತ್ತಿಲ್ಲ. ಹಾಗಾಗಿ ಸೋಲಿಲ್ಲದ ಸರದಾರ ಅನಿಲ್ ರಾವಿಪುಡಿ ಜೊತೆ ಈ ಬಾರಿ ಕೈ ಜೋಡಿಸಿದ್ದಾರೆ. ವಿಶೇಷ ಪಾತ್ರದಲ್ಲಿ ವೆಂಕಟೇಶ್ ಕೂಡ ನಟಿಸಿರುವುದು ಚಿತ್ರಕ್ಕೆ ಆನೆ ಬಲ ಬಂದಂತಾಗಿದೆ.

ಜನವರಿ 9ಕ್ಕೆ 'ದಿ ರಾಜಾಸಾಬ್' ಸಿನಿಮಾ ಬಿಡುಗಡೆ ಆಗ್ತಿದೆ. ಜನವರಿ 12ರಂದು 'ಮನ ಶಂಕರವರಪ್ರಸಾದ್ ಗಾರು' ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು ತಮಿಳಿನ 'ಜನನಾಯಗನ್' ಚಿತ್ರ ಕೂಡ ಸಂಕ್ರಾಂತಿ ರೇಸ್‌ನಲ್ಲಿದೆ. ಇದು ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ. ಹಾಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ.

More from Filmibeat

Read more about: sankranti 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X