ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿದ್ದ ಈ ಚಿತ್ರಗಳಲ್ಲಿ ಕಡಿಮೆ ಕಲೆಕ್ಷನ್ ಮಾಡಿದ್ದಾರು, ಗೆದ್ದವರಾರು?
ಪ್ರತಿ ಬಾರಿಯ ಸಂಕ್ರಾಂತಿ ಹಾಗೆ ಈ ಬಾರಿಯ ಸಂಕ್ರಾಂತಿ ಪ್ರಯುಕ್ತವೂ ಸಹ ದಕ್ಷಿಣ ಭಾರತದ ಚಿತ್ರರಂಗಗಳಾದ ತೆಲುಗು ಹಾಗೂ ತಮಿಳಿನ ಹಲವಾರು ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೊಂಡವು. ಮೊದಲಿಗೆ ತಮಿಳಿನ ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ವಾರಿಸು ಬಿಡುಗಡೆಗೊಂಡಿತ್ತು. ಇದೇ ದಿನ ತಮಿಳಿನ ಮತ್ತೋರ್ವ ಸ್ಟಾರ್ ನಟ ಅಜಿತ್ ಕುಮಾರ್ ನಟನೆಯ ತುನಿವು ಬಿಡುಗಡೆಗೊಂಡಿತ್ತು.
ಈ ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಿದ್ದರಿಂದ ಎರಡೂ ಚಿತ್ರಗಳ ಪೈಕಿ ಸಂಕ್ರಾಂತಿ ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಹುಟ್ಟಿಕೊಂಡಿತ್ತು. ಇನ್ನು ಈ ಚಿತ್ರಗಳ ಬಳಿಕ ಎರಡು ದಿನಗಳ ಅಂತರದಲ್ಲಿ ತೆಲುಗಿನ ನಂದಮೂರಿ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ತೆರೆಕಂಡಿದ್ದವು ಮತ್ತು ಈ ಚಿತ್ರಗಳೂ ಸಹ ವಾರಿಸು ಹಾಗೂ ತುನಿವು ಜತೆ ಸಂಕ್ರಾಂತಿ ಬಾಕ್ಸ್ ಆಫೀಸ್ ರೇಸ್‌ಗೆ ಇಳಿದಿದ್ದವು.
ಹೀಗೆ ಬಾಕ್ಸ್ ಆಫೀಸ್ ಕದನಕ್ಕಿಳಿದಿದ್ದ ಈ ನಾಲ್ಕು ಚಿತ್ರಗಳ ಪೈಕಿ ಯಾವ ಚಿತ್ರ ಹೆಚ್ಚು ಗಳಿಸಿ ಸಂಕ್ರಾಂತಿ ವಿನ್ನರ್ ಎನಿಸಿಕೊಳ್ಳಲಿದೆ ಎಂದು ಎದ್ದಿದ್ದ ಪ್ರಶ್ನೆಗೆ ಈಗ ನಿಖರವಾದ ಉತ್ತರ ಸಿಕ್ಕಿದೆ. ಸದ್ಯ ಈ ಎಲ್ಲಾ ಚಿತ್ರಗಳು ತಮ್ಮ ಥಿಯೇಟ್ರಿಕಲ್ ಓಟವನ್ನು ನಿಲ್ಲಿಸುವ ಹಂತಕ್ಕೆ ಬಂದು ತಲುಪಿದ್ದು, ಚಿತ್ರಗಳ ಬಹುತೇಕ ಫೈನಲ್ ಕಲೆಕ್ಷನ್ ಮಾಹಿತಿ ಹೊರಬಿದ್ದಿದೆ. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಈ ಚಿತ್ರಗಳ ಬಜೆಟ್, ಕಲೆಕ್ಷನ್ ಮಾಹಿತಿ
ಈ ಮೇಲ್ಕಂಡ ನಾಲ್ಕೂ ಚಿತ್ರಗಳ ಬಜೆಟ್ ಎಷ್ಟು ಹಾಗೂ ಚಿತ್ರಗಳು ಗಳಿಸಿದ್ದೆಷ್ಟು ಎಂಬ ಮಾಹಿತಿ ಇಲ್ಲಿದೆ
* ಚಿರಂಜೀವಿ ಹಾಗೂ ರವಿತೇಜಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ವಾಲ್ತೇರು ವೀರಯ್ಯ ಚಿತ್ರ 140 ಕೋಟಿ ವೆಚ್ಚದಲ್ಲಿ ತಯಾರಾಗಿ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 224 ಕೋಟಿ ಗಳಿಸುವ ಮೂಲಕ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ.
* ನಂದಮೂರಿ ಬಾಲಕೃಷ್ಣ ಹಾಗೂ ದುನಿಯಾ ವಿಜಯ್ ನಟನೆಯ ವೀರ ಸಿಂಹ ರೆಡ್ಡಿ 110 ಕೋಟಿ ಬಜೆಟ್‌ನಲ್ಲಿ ತಯಾರಾಗಿ 134 ಕೋಟಿ ಗಳಿಕೆ ಮಾಡಿ ಹಿಟ್ ಎನಿಸಿಕೊಂಡಿತು.
* ತಲಾ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ 150 ಕೋಟಿ ಬಜೆಟ್‌ನಲ್ಲಿ ತಯಾರಾಗಿ 192 ಕೋಟಿ ಗಳಿಸಿ ಸೂಪರ್ ಹಿಟ್ ಎನಿಸಿಕೊಂಡಿತು.
* ದಳಪತಿ ವಿಜಯ್ ನಟನೆಯ ವಾರಿಸು ಚಿತ್ರ 200 ಕೋಟಿ ವೆಚ್ಚದಲ್ಲಿ ತಯಾರಾಗಿ 283 ಕೋಟಿ ಗಳಿಸಿ ಹಿಟ್ ಎನಿಸಿಕೊಂಡಿತು.

ವಿನ್ನರ್ ಯಾರು?
ಇನ್ನು ಈ ಬಾರಿಯ ಸಂಕ್ರಾಂತಿ ಪ್ರಯಕ್ತ ಬಿಡುಗಡೆಗೊಂಡ ಈ ಮೇಲ್ಕಂಡ ನಾಲ್ಕು ಚಿತ್ರಗಳ ಪೈಕಿ ವಿನ್ನರ್ ಎನಿಸಿಕೊಂಡಿದ್ದು ಚಿರಂಜೀವಿ ಹಾಗೂ ರವಿತೇಜಾ ನಟನೆಯ ವಾಲ್ತೇರು ವೀರಯ್ಯ ಚಿತ್ರ. ಥಿಯೇಟ್ರಿಕಲ್‌ನಲ್ಲಿ ಹೆಚ್ಚು ಗಳಿಕೆ ಮಾಡಿ ವಿತರಕರಿಗೂ ಲಾಭ ತಂದುಕೊಟ್ಟ ಈ ಚಿತ್ರ ಲಾಭಾಂಶದ ಲೆಕ್ಕಾಚಾರದಲ್ಲಿ ಉಳಿದ ಮೂರು ಚಿತ್ರಗಳಿಗಿಂತ ಮುಂದಿದ್ದು, ಈ ಬಾರಿಯ ಸಂಕ್ರಾಂತಿ ವಿನ್ನರ್ ಆಗಿ ಹೊರಹೊಮ್ಮಿದೆ.

ನೂರು ಕೋಟಿ ಕ್ಲಬ್ ಸೇರಿದ ಎಲ್ಲಾ ಚಿತ್ರಗಳು
ಬಾಕ್ಸ್ ಆಫೀಸ್ ರೇಸ್‌ಗೆ ಚಿತ್ರಗಳು ಇಳಿದಾಗ ಒಂದು ಚಿತ್ರ ಹೆಚ್ಚು ಕಲೆಕ್ಷನ್ ಮಾಡಿದರೆ, ಮತ್ತೊಂದು ಚಿತ್ರ ಕಳಪೆ ಕಲೆಕ್ಷನ್ ಮಾಡಿದ ಹಲವಾರು ಸನ್ನಿವೇಶಗಳನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ರೇಸ್‌ಗೆ ಇಳಿದ ಎಲ್ಲಾ ಚಿತ್ರಗಳೂ ಸಹ ಗೆಲುವು ಸಾಧಿಸಿದ್ದು ಯಾವ ಚಿತ್ರವೂ ಫ್ಲಾಪ್ ಎನಿಸಿಕೊಂಡಿಲ್ಲ. ಅದರಲ್ಲೂ ಎಲ್ಲಾ ಚಿತ್ರಗಳೂ ಸಹ ನೂರು ಕೋಟಿ ಕ್ಲಬ್ ಸೇರಿರುವುದು ವಿಶೇಷ.


Click it and Unblock the Notifications











