Rashmika Mandanna: ಬಾಯ್‌ಫ್ರೆಂಡ್- ಮಾಜಿ ಬಾಯ್‌ಫ್ರೆಂಡ್ ಚಿತ್ರಗಳು ಒಂದೇ ದಿನ ರಿಲೀಸ್: ರಶ್ಮಿಕಾ ಮೊದಲ ಆಯ್ಕೆ ಯಾವ್ದು?

By ಫಿಲ್ಮಿಬೀಟ್ ಡೆಸ್ಕ್

ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಈ ವಾರ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಪೇಯ್ಡ್ ಪ್ರೀಮಿಯರ್‌ ಶೋಗಳು ಶುರುವಾಗಿದ್ದು ಸಿನಿರಸಿಕರು ಸಿನಿಮಾ ವೀಕ್ಷಿಸುತ್ತಿದ್ದಾರೆ. ಅತ್ತ ವಿಜಯ್ ದೇವರಕೊಂಡ ನಟನೆಯ 'ಖುಷಿ' ಸಿನಿಮಾ ಕೂಡ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದಾರೆ.

ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ 'ಖುಷಿ' ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ಕರ್ನಾಟಕದಲ್ಲಿ ಕೆಲವೆಡೆ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಶುರುವಾಗುತ್ತಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗದೇ ಇದ್ದರೂ ದೇಶದ ಬೇರೆ ಬೇರೆ ನಗರಗಳಲ್ಲಿ ಕೂಡ ರಿಲೀಸ್ ಆಗುತ್ತಿದೆ. ಹೈದರಾಬಾದ್‌ನಲ್ಲೂ ಸಿನಿಮಾ ಪ್ರದರ್ಶನವಾಗುತ್ತಿರುವುದು ವಿಶೇಷ. ಆದರೆ ಈ ಎರಡು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಯಾವ ಸಿನಿಮಾ ನೋಡುತ್ತಾರೆ ಎನ್ನುವ ಚರ್ಚೆ ಇದೀಗ ಟಾಲಿವುಡ್‌ನಲ್ಲಿ ಶುರುವಾಗಿದೆ.

Rashmika-mandanna-rakshit-shetty-vijay-devaraonda

ಈಗೊಂದು ಚರ್ಚೆ ಹುಟ್ಟಲು ಕಾರಣ ಕೂಡ ಇದೆ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದರು. ಬಳಿಕ ಇಬ್ಬರೂ ಪ್ರೀತಿಸಿ ಮದುವೆ ನಿಶ್ಚಯವಾಗಿತ್ತು. ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಆದರೆ ಬಳಿಕ ಏಕಾಏಕಿ ಇಬ್ಬರ ನಿಶ್ಚಿತಾರ್ಥ ಮುರಿದುಬಿದ್ದಿತ್ತು. ಇನ್ನು ರಶ್ಮಿಕಾ - ವಿಜಯ್‌ ದೇವರಕೊಂಡ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಗಿತ್ತು. ಅಭಿಮಾನಿಗಳು ಇಬ್ಬರೂ ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎಂದೇ ಭಾವಿಸಿದ್ದಾರೆ. ಪದೇ ಪದೇ ಇಬ್ಬರು ನಡುವೆ ಸಂಥಿಂಗ್ ಸಂಥಿಂಗ್ ಇದೆ ಎಂದು ಚರ್ಚೆ ನಡೀತಿರುತ್ತದೆ.

ರಕ್ಷಿತ್- ರಶ್ಮಿಕಾ ನಿಶ್ಚಿತಾರ್ಥ ಮುರಿದು ಬೀಳಲು ವಿಜಯ್ ದೇವರಕೊಂಡ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಇನ್ನು ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾಗೆ ಆತ್ಮೀಯ ಒಡನಾಟವಿದೆ. ಇಬ್ಬರು ಸ್ನೇಹಿತರು ಹಾಗೂ ಫ್ಯಾಮಿಲಿ ಜೊತೆ ಬೇರೆ ದೇಶಗಳಿಗೂ ಪ್ರವಾಸ ಹೋಗಿ ಬಂದಿದ್ದಾರೆ. ವಿಜಯ್ ಹಾಗೂ ಆತನ ಸಹೋದರನ ಸಿನಿಮಾಗಳನ್ನಯ ರಶ್ಮಿಕಾ ಮಂದಣ್ಣ ನೋಡಿ ಮೆಚ್ಚುಗೆ ಸೂಚಿಸುತ್ತಾ ಬರ್ತಿದ್ದಾರೆ. ಹಾಗಾಗಿ ರಶ್ಮಿಕಾ ಈ ಶುಕ್ರವಾರ ಮಾಜಿ ಬಾಯ್‌ಫ್ರೆಂಡ್ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡ್ತಾರಾ? ಇಲ್ಲ ರೂಮರ್ಡ್ ಬಾಯ್‌ಫ್ರೆಂಡ್ ವಿಜಯ್ -ಸ್ಯಾಮ್ ಜೋಡಿಯ 'ಖುಷಿ' ಚಿತ್ರ ನೋಡ್ತಾರಾ? ಎಂದು ಕೆಲವರು ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

Rashmika-mandanna-rakshit-shetty-vijay-devaraonda

ತೆಲುಗು- ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಹೈದರಾಬಾದ್- ಮುಂಬೈಗೆ ನಡುವೆ ಸುತ್ತಾಡುತ್ತಿರುತ್ತಾರೆ. ಎರಡೂ ಕಡೆ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ರಿಲೀಸ್ ಆಗುತ್ತಿದೆ. ಜೊತೆಗೆ 'ಖುಷಿ' ಸಿನಿಮಾ ಕೂಡ ತೆರೆಗಪ್ಪಳಿಸುತ್ತಿದೆ. ಯಾವ ಸಿನಿಮಾ ನೋಡುತ್ತಾರೆ? ಎಂದು ತೆಲುಗು ವೆಬ್‌ಸೈಟ್‌ಗಳಲ್ಲಿ ಸುದ್ದಿಯಾಗ್ತಿದೆ. ಇನ್ನು ರಶ್ಮಿಕಾಗೆ ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಡೆ ಇದೆ ಎನ್ನುವ ಚರ್ಚೆ ಕೂಡ ಆಗಾಗ್ಗೆ ನಡೀತಿರುತ್ತದೆ. ಈ ಹಿಂದೆ ರಶ್ಮಿಕಾ 'ಕಾಂತಾರ' ಸಿನಿಮಾ ನೋಡಿಲ್ಲ ಎಂದಿದ್ದು ಭಾರೀ ಸುದ್ದಿಯಾಗಿತ್ತು.

ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ವಿಜೇತರಿಗೆ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸಿದ್ದರು. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ '777 ಚಾರ್ಲಿ' ಅತ್ಯುತ್ತಮ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ ಈ ಬಗ್ಗೆ ರಶ್ಮಿಕಾ ಮಾತನಾಡಲಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಇನ್ನು ರಶ್ಮಿಕಾ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಹಿಂದಿ, ತೆಲುಗು, ತಮಿಳು ಸಿನಿಮಾಗಳು ಆಕೆಯ ಕೈಯಲ್ಲಿವೆ. ಹಿಂದಿಯಲ್ಲಿ ಅನಿಮಲ್, ತೆಲುಗಿನ 'ಪುಷ್ಪ'-2 ಹಾಗೂ ತಮಿಳಿನಲ್ಲಿ ಧನುಷ್ ಜೋಡಿಯಾಗಿ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

More from Filmibeat

English summary
Sapta Sagaradaache Ello or Kushi: which one Rashmika's first choice
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X