SSE: ಮುಂದಿನ ವಾರವೇ ತೆಲುಗಿನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ರಿಲೀಸ್ ಕನ್ಫರ್ಮ್: ಟೈಟಲ್ ಏನು ಗೊತ್ತಾ?

ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ಭಾಗ ನೋಡಿದವರು ಚಿತ್ರದ 2ನೇ ಭಾಗ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವಂತೆ ಬೇಡಿಕೆ ಬಂದಿತ್ತು. ಇದೀಗ ತೆಲುಗಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ.

ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವಾಗ ಯೂನಿವರ್ಸಲ್ ಸಬ್ಜೆಕ್ಟ್ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರವನ್ನು ಕೂಡ ಒಟ್ಟಿಗೆ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡುವಂತೆ ರಕ್ಷಿತ್ ಶೆಟ್ಟಿನ ಕೇಳಲಾಗಿತ್ತು. ಆದರೆ ಕನ್ನಡದಲ್ಲೇ ನಮ್ಮ ಕತೆಯನ್ನು ಎಲ್ಲರಿಗೂ ಹೇಳಬೇಕು ಎಂದು ಸಿಂಪಲ್ ಸ್ಟಾರ್ ಹೇಳಿದ್ದರು. 'ಕಾಂತಾರ' ಚಿತ್ರದ ಉದಾಹರಣೆ ಕೊಟ್ಟಿದ್ದರು. ಅಂದಹಾಗೆ ಏಕಕಾಲಕ್ಕೆ 4 ಭಾಷೆಗಳ ಡಬ್ಬಿಂಗ್ ಕೂಡ ಮಾಡಲಾಗಿತ್ತು. ಕೊನೆ ಪಕ್ಷ ಓಟಿಟಿಯಲ್ಲಾದರೂ ಎಲ್ಲಾ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆದಿತ್ತು.

Sapta Sagaradaache Ello Finally releasing in telugu on september 22nd

ಮುಂದಿನ ವಾರವೇ 'ಸಪ್ತ ಸಾಗರದಾಚೆ ಎಲ್ಲೋ' ತೆಲುಗು ವರ್ಷನ್ ಆಂಧ್ರ, ತೆಲಂಗಾಣ ಸೇರಿದಂತೆ ವಿದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಇದನ್ನು ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ. 2 ವಾರಕ್ಕೆ ಈ ಸಿನಿಮಾ ಕನ್ನಡದಲ್ಲಿ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಮನು- ಪ್ರಿಯಾ ಗಾಢ ಪ್ರೇಮಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕೆಲ ತೆಲುಗು ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತೆಲುಗಿಗೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವಂತೆ ಆಗ್ರಹಿಸಿದ್ದರು.

'ಸಪ್ತ ಸಾಗರಾಲು ದಾಟಿ' ಟೈಟಲ್‌ನಲ್ಲಿ ಚಿತ್ರವನ್ನು ತೆಲುಗಿನಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಕನ್ನಡ ಟೈಟಲ್‌ನ ಕೊಂಚ ಬದಲಿಸಿ ಸಪ್ತ ಸಾಗರ ದಾಟಿ ಎನ್ನುವ ಅರ್ಥ ಬರುವಂತೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗುತ್ತಿರುವುದನ್ನು ಅಲ್ಲಿನ ಪ್ರೇಕ್ಷಕರು ಸ್ವಾಗತಿಸುತ್ತಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಚಿತ್ರಕ್ಕೆ ಅಲ್ಲೂ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ.

Sapta Sagaradaache Ello Finally releasing in telugu on september 22nd

ಇತ್ತೀಚೆಗೆ ತಮಿಳು ನಟ ಉದಯನಿಧಿ ಸ್ಟಾಲಿನ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಹಾಗಾಗಿ ಸಿನಿಮಾ ತಮಿಳುನಾಡಿನಲ್ಲೂ ಥಿಯೇಟರ್‌ಗಳಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ಈಗಾಗಲೇ ತಮಿಳು ಡಬ್ಬಿಂಗ್ ವರ್ಷನ್ ಸಿನಿಮಾ ಸಿದ್ಧವಾಗಿದೆ. ಅಕ್ಟೋಬರ್ 20ಕ್ಕೆ ಚಿತ್ರದ 2ನೇ ಭಾಗ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಮೊದಲ ಭಾಗ ತೆಲುಗು, ತಮಿಳು, ಮಲಯಾಳಂನಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ.

ಸೆಪ್ಟೆಂಬರ್ 1ರಂದು ಕರ್ನಾಟಕ ಸೇರಿದಂತೆ ದೇಶದ ಕೆಲ ನಗರ ಹಾಗೂ ಓವರ್‌ಸೀಸ್‌ನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ರಿಲೀಸ್ ಆಗಿತ್ತು. ಅದಕ್ಕಿಂತ ಒಂದು ದಿನ ಮೊದ್ಲೆ 50ಕ್ಕೂ ಅಧಿಕ ಪೇಯ್ಡ್ ಪ್ರೀಮಿಯರ್‌ ಶೋಗಳು ನಡೆದು ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಫಸ್ಟ್ ವೀಕೆಂಡ್ ಮಾತ್ರವಲ್ಲ ಆ ಬಳಿಕ ಕೂಡ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ತಮ್ಮದೇ ಪರಂವಃ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ನಿರ್ಮಿಸಿ ನಟಿಸಿದ್ದರು.

ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಚರಣ್ ರಾಜ್‌ ಸಂಗೀತ ಈ ರೊಮ್ಯಾಂಟಿಕ್ ಲವ್‌ಸ್ಟೋರಿಗೆ ಪ್ಲಸ್ ಆಗಿತ್ತು. ಅಚ್ಯುತ್‌ ಕುಮಾರ್, ಶರತ್ ಲೋಹಿತಾಶ್ವ, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ಕೆಮೆಸ್ಟ್ರಿ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು.

ಇನ್ನು ಸಿನಿಮಾ ಯಾವಾಗ ಓಟಿಟಿಗೆ ಬರುತ್ತೆ ಎನ್ನುವ ಗೊಂದಲ ಕೂಡ ಇದೆ. 2ನೇ ಭಾಗ ಥಿಯೇಟರ್‌ಗೆ ಬಂದಮೇಲೆ 2 ಭಾಗ ಓಟಿಟಿಗೆ ಬರುತ್ತಾ? ಅಥವಾ 2ನೇ ಭಾಗ ಥಿಯೇಟರ್‌ಗೆ ಬರುವ ಮುನ್ನ ಮೊದಲ ಭಾಗ ಡಿಜಿಟಲ್‌ ಫ್ಲಾಟ್‌ಪಾರ್ಮ್‌ನಲ್ಲಿ ಕಾಣಿಸಿಕೊಳ್ಳುತ್ತಾ? ನಿರೀಕ್ಷೆಯಿದೆ.

More from Filmibeat

English summary
Sapta Sagaradaache Ello is titled Saptha Sagaralu Dhaati in Telugu, releasing on September 22;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X