SSD: ಮೊದಲ ದಿನವೇ ಬ್ರೇಕ್ ಈವನ್: 'ಸಪ್ತ ಸಾಗರಾಲು ದಾಟಿ' ಫಸ್ಟ್‌ ವೀಕೆಂಡ್ ಕಲೆಕ್ಷನ್ ಎಷ್ಟು?

ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಆಂಧ್ರ, ತೆಲಂಗಾಣದಲ್ಲಿ ಸಖತ್ ಸದ್ದು ಮಾಡ್ತಿದೆ. ಶುಕ್ರವಾರಕ್ಕಿಂತ ಶನಿವಾರ, ಶನಿವಾರಕ್ಕಿಂತ ಭಾನುವಾರ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. ಈ ವಿಚಾರವನ್ನು ಕೆಲ ಥಿಯೇಟರ್ ಮ್ಯಾನೇಜರ್‌ಗಳೇ ಒಪ್ಪಿಕೊಂಡಿದ್ದಾರೆ.

ಕನ್ನಡದಲ್ಲಿ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದ ಸಿನಿಮಾ ತೆಲುಗಿಗೆ ಡಬ್ ಆಗಿ ಕಳೆದ ವಾರ ರಿಲೀಸ್ ಆಗಿತ್ತು. 'ಸಪ್ತ ಸಾಗರಾಲು ದಾಟಿ' ಹೆಸರಿನಲ್ಲಿ ತೆರೆಕಂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಭಾನುವಾರದ ವೇಳೆಗೆ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮೊದಲ ಸಿನಿಮಾ ಬ್ರೇಕ್ ಈವನ್ ಆಗಿತ್ತು ಎಂದು ಚಿತ್ರತಂಡವೇ ಘೋಷಿಸಿದೆ. ಪ್ರೇಕ್ಷಕರಂತೂ ಸ್ಲೋ ಪಾಯ್ಸನ್ ರೀತಿ ಸಿನಿಮಾ ನೋಡುಗರಿಗೆ ಏರುತ್ತಾ ಹೋಗುತ್ತದೆ ಎನ್ನುತ್ತಿದ್ದಾರೆ.

Sapta Sagaralu Dhaati Box Office: Rakshit shetty Starrer Has A Decent First Weekend

ಸ್ಲೋ ನರೇಷನ್ ಎಂದು ಹೇಳುತ್ತಲೇ ಪ್ರೇಕ್ಷಕರು ಸಿನಿಮಾ ಮೆಚ್ಚಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಹಾಗಾಗಿ ನಿಧಾನವಾಗಿ ಸಿನಿಮಾ ತೆಲುಗು ರಾಜ್ಯಗಳಲ್ಲಿ ಸದ್ದು ಮಾಡೋಕೆ ಶುರು ಮಾಡಿದೆ. ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಚಿತ್ರಕ್ಕೆ ತೆಲುಗಿನಲ್ಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಜೊತೆಗೆ ರಕ್ಷಿತ್, ರುಕ್ಮಿಣಿ ಈ ಬಾರಿ ಚೆನ್ನಾಗಿ ಪ್ರಚಾರ ಮಾಡಿದ್ದರು. ಸೋಶಿಯಲ್‌ ಮೀಡಿಯಾದಲ್ಲೂ ಸಿನಿಮಾ ಬಗ್ಗೆ ಪಾಸಿಟಿವ್ ವೈಬ್ಸ್ ಇತ್ತು. ಹಾಗಾಗಿ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದಿದೆ.

'ಸಪ್ತ ಸಾಗರಾಲು ದಾಟಿ' ಮೌತ್‌ ಟಾಕ್‌ನಿಂದ 2 ಮತ್ತು 3 ದಿನ ಪ್ರೇಕ್ಷಕರ ಸಂಖ್ಯೆ ಹೆಚ್ಚಾಯಿತು. ಅದಕ್ಕೆ ತಕ್ಕಂತೆ ಆಂಧ್ರದಲ್ಲಿ 10, ತೆಲಂಗಾಣದಲ್ಲಿ 16 ಶೋಗಳನ್ನು ಹೆಚ್ಚಿಸಲಾಗಿತ್ತು. ಮನು- ಪ್ರಿಯಾ ಆಗಿ ರಕ್ಷಿತ್ ಹಾಗೂ ರುಕ್ಮಿಣಿ ಕೆಮೆಸ್ಟ್ರಿಗೆ ತೆಲುಗು ಪ್ರೇಕ್ಷಕರು ಬೋಲ್ಡ್ ಆಗಿದ್ದಾರೆ. ರುಕ್ಮಿಣಿ ನಟನೆಯನ್ನು ತುಸು ಹೆಚ್ಚೇ ಕೊಂಡಾಡುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರವನ್ನು ಆಂಧ್ರ, ತೆಲಂಗಾಣದಲ್ಲಿ ರಿಲೀಸ್ ಮಾಡಿತ್ತು.

Sapta Sagaralu Dhaati Box Office: Rakshit shetty Starrer Has A Decent First Weekend

ಹೇಮಂತ್ ರಾವ್ ಸ್ಟ್ರಿಪ್ಟ್ ಹಾಗೂ ನಿರ್ದೇಶನದ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಕೆಲ ಥಿಯೇಟರ್ ಮ್ಯಾನೇಜರ್‌ಗಳು 'ಸಪ್ತ ಸಾಗರಾಲು ದಾಟಿ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ ಎಂದು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಸಣ್ಣ ಸಿನಿಮಾ ಆಗಿದ್ದರೂ ಡಬ್ ಸಿನಿಮಾ ಆಗಿದ್ದರೂ ಕೂಡ ತೆಲುಗು ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿದ್ದಾರೆ. ಮುಖ್ಯವಾಗಿ ಫಸ್ಟ್‌ ಶೋ, ಸೆಕೆಂಡ್‌ ಶೋಗೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿರುವುದು ಗೊತ್ತಾಗುತ್ತಿದೆ.

ಎಲ್ಲಾ ಸಿನಿಮಾಗಳ ಹಣೆಬರಹ ನಿರ್ಧಾರ ಆಗುವುದು ಫಸ್ಟ್ ವೀಕೆಂಡ್ ಕಳೆದು ಸೋಮವಾರ ಶುರುವಾದಾಗ. 'ಸಪ್ತ ಸಾಗರಾಲು ದಾಟಿ' ಚಿತ್ರ ಮೊದಲ 3 ದಿನ ಒಳ್ಳೆ ಕಲೆಕ್ಷನ್ ಮಾಡಿದೆ. 5 ಕೋಟಿ, 10 ಕೋಟಿ ಅಲ್ಲದೇ ಇದ್ದರೂ ತೆಲುಗು ರಿಲೀಸ್‌ಗೆ ಮಾಡಿದ ಖರ್ಚಿಗೆ ಹೋಲಿಸಿದರೆ ಉತ್ತಮ ಗಳಿಕೆ ಕಂಡಿದೆ. ಕನ್ನಡದ ಡಬ್ಬಿಂಗ್ ಸಿನಿಮಾ ತೆಲುಗಿನಲ್ಲಿ ಎಷ್ಟರಮಟ್ಟಿಗೆ ಗಳಿಸಬಹುದೋ ಅಷ್ಟು ಬರ್ತಿದೆ. ಸೋಮವಾರದಿಂದ ಸಿನಿಮಾ ಭವಿಷ್ಯ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕರ್ನಾಟಕದಲ್ಲಿ ಕೆಲವರು ತೆಲುಗು ವರ್ಷನ್ ರಿಲೀಸ್ ಮಾಡುವಂತೆ ಕೇಳುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಅಂತೂ ತೆಲುಗು ವರ್ಷನ್ ಕಲೆಕ್ಷನ್, ರೆಸ್ಪಾನ್ಸ್ ಬಗ್ಗೆ ಖುಷಿಯಾಗಿದ್ದಾರೆ. ಬಾಕ್ಸಾಫೀಸ್ ಗಳಿಕೆ ಮಾಹಿತಿಯನ್ನು ಶೀಘ್ರದಲ್ಲೇ ನೀಡುವ ಸಾಧ್ಯತೆಯಿದೆ. ಇನ್ನು ಚಿತ್ರದ ಪ್ರತಿ ವಿಭಾಗದ ಬಗ್ಗೆ ತೆಲುಗು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ಚರಣ್ ರಾಜ್‌ ಸಂಗೀತಕ್ಕೆ ಮಾರು ಹೋಗಿದ್ದಾರೆ. 'ಸಪ್ತ ಸಾಗರಾಲು ದಾಟಿ' 2ನೇ ಭಾಗ ನೋಡಲು ಬಹಳ ಉತ್ಸುಕರಾಗಿದ್ದಾರೆ.

More from Filmibeat

English summary
Sapta Sagaralu Dhaati first Weekend Box Office collections.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X