ಸಂಕಷ್ಟಕ್ಕೆ ಸಿಲುಕಿದ ಸಾಯಿ ಪಲ್ಲವಿ ನರ್ತಿಸಿದ 'ಸರಂಗ ದರಿಯಾ' ಹಾಡು
ಸಾಯಿ ಪಲ್ಲವಿ-ನಾಗ ಚೈತನ್ಯ ನಟಿಸಿರುವ 'ಲವ್ ಸ್ಟೋರಿ' ಸಿನಿಮಾದ 'ಸರಂಗ ದರಿಯಾ' ಹಾಡು ಸಖತ್ ವೈರಲ್ ಆಗಿದೆ. ಯೂಟ್ಯೂಬ್ ನಲ್ಲಿ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಹಲವು ಲಕ್ಷ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ.
ಆದರೆ ಈಗ 'ಸರಂಗ ದರಿಯಾ' ಹಾಡು ಸಂಕಷ್ಟಕ್ಕೆ ಸಿಲುಕಿದೆ. 'ಸರಂಗ ದರಿಯಾ' ಹಾಡಿನ ಮೂಲ ಗಾಯಕಿ ಎನ್ನಲಾಗುತ್ತಿರುವ ಕೋಮಲಿ ಅವರು ಹಾಡಿನ ಮೇಲೆ ಹಕ್ಕುಚ್ಯುತಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
ಕೋಮಲಿ ಎಂಬ ಯುವತಿ ಕೆಲವು ವರ್ಷಗಳ ಹಿಂದೆ 'ರೇಲಾ ರೇ ರೇಲಾ' ಎಂಬ ರಿಯಾಲಿಟಿ ಶೋ ನಲ್ಲಿ ಮೊದಲ ಬಾರಿಗೆ 'ಸರಂಗ ದರಿಯಾ' ಜನಪದ ಹಾಡನ್ನು ಹಾಡಿದ್ದರು. ಈಗ ಅದೇ ಬಹುತೇಕ ಅದೇ ಹಾಡನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.

ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿರುವ ಈ ಹಾಡಿನ ಸಾಹಿತ್ಯವನ್ನು ಸುದ್ದಾಲ ಅಶೋಕ್ ತೇಜ್ ರಚಿಸಿರುವುದಾಗಿ ಹೇಳಲಾಗಿದೆ. ರೇಲಾ ರೇಲಾ ರೇ ಶೋ ನಲ್ಲಿ ಕೋಮಲಿ ಈ ಹಾಡು ಹಾಡಿದಾಗ ಸುದ್ದಾಲ ಅಶೋಕ್ ತೇಜ್ ಅತಿಥಿಯಾಗಿ ಭಾಗವಹಿಸಿದ್ದರು.
'ಲವ್ ಸ್ಟೋರಿ' ಸಿನಿಮಾಕ್ಕೆ 'ಸರಂಗ ದರಿಯಾ' ಹಾಡು ಮಾಡಬೇಕಾದರೆ ಕೋಮಲಿಗೆ ಅದರ 'ಕ್ರೆಡಿಟ್' ನೀಡುವುದಾಗಿ ಅಶೋಕ್ ತೇಜ್ ಹೇಳಿದ್ದರು ಎಂಬುದು ಕೋಮಲಿ ಹೇಳಿದ್ದಾರೆ. ಆದರೆ ಹಾಡು ಬಿಡುಗಡೆ ಆದಾಗ ಕ್ರೆಡಿಟ್ ಪಟ್ಟಿಯಲ್ಲಿ ಕೋಮಲಿ ಹೆಸರಿಲ್ಲ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಕೋಮಲಿ, 'ಸರಂಗ ದರಿಯಾ' ಹಾಡನ್ನು ಮೊದಲ ಬಾರಿಗೆ ನಾನು ಹಾಡಿದ್ದೆ. ಆ ಹಾಡನ್ನು ನನ್ನ ಅಜ್ಜಿಯಿಂದ ನಾನು ಸಂಗ್ರಹಿಸಿದ್ದೆ. ನನ್ನ ಅನುಮತಿ ಇಲ್ಲದೆ ಹಾಡನ್ನು ಬಳಸಿರುವ ಕಾರಣ ಹಕ್ಕುಚ್ಯುತಿ ಪ್ರಕರಣ ದಾಖಲಿಸಿದ್ದೇನೆ ಎಂದಿದ್ದಾರೆ ಕೋಮಲಿ.
Recommended Video
ಆದರೆ ಕೋಮಲಿ ಅವರ ಆರೋಪ ತಳ್ಳಿಹಾಕಿರುವ ಅಶೋಕ್ ತೇಜ್, 'ಕೋಮಲಿ ಮೊದಲ ಬಾರಿಗೆ ಹಾಡು ಹಾಡಿದ್ದು ನಿಜ ಆದರೆ ಜನಪದ ಗೀತೆಯು ದಶಕಗಳ ಕಾಲದಿಂದ ಬಾಯಿಂದ ಬಾಯಿಗೆ ವರ್ಗಾವಣೆ ಆಗಿದೆ. ನಾನು 'ಲವ್ ಸ್ಟೋರಿ' ಸಿನಿಮಾಕ್ಕೆ ಬರೆದಿರುವ ಹಾಡಿನಲ್ಲಿ ಕೆಲವು ಪದಗಳನ್ನು ಬದಲಾವಣೆ ಮಾಡಿದ್ದೇನೆ. ಕೆಲವು ಸಾಲುಗಳನ್ನು ಮಾತ್ರವೇ ಹಾಗೆಯೇ ಉಳಿಸಿಕೊಂಡಿದ್ದೇನೆ' ಎಂದಿದ್ದಾರೆ.


Click it and Unblock the Notifications











