ಈಡೇರಲೇ ಇಲ್ಲ ಶರತ್ ಬಾಬು ಕೊನೆಯ ಆಸೆ: ಆ ಡೈರಿಯಲ್ಲಿದ್ಯಾ ಶಾಕಿಂಗ್ ವಿಚಾರಗಳು?
ಬಹುಭಾಷಾ ನಟ ಶರತ್ ಬಾಬು ಬಹು ಅಂಗಾಗ ವೈಫಲ್ಯದಿಂದ ಕಳೆದ ವಾರ ಕೊನೆಯುಸಿರೆಳೆದಿದ್ದರು. ಕನ್ನಡ ಸೇರಿದಂತೆ ದಕ್ಷಣ ಭಾರತದ ಎಲ್ಲಾ ಭಾಷೆ ಸಿನಿಮಾಗಳಲ್ಲಿ ನಟಿಸಿದ್ದ ಅವರ ನಿಧನಕ್ಕೆ ಅಭಿಮಾನಿಗಳು, ಸಿನಿ ತಾರೆಯರು ಸಂತಾಪ ಸೂಚಿಸಿದ್ದರು. ಚೆನ್ನೈನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅಗಲಿಕೆಯ ನಂತರ ಅವರ ಬಗ್ಗೆ ಸಾಕಷ್ಟು ಶಾಕಿಂಗ್ ವಿಚಾರಗಳು ಇದೀಗ ರಿವೀಲ್ ಆಗುತ್ತಿದೆ.
ಸದ್ಯ ಶರತ್ ಬಾಬು ಡೈರಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ತಮ್ಮ ಪ್ರತಿದಿನದ ಆಗುಹೋಗುಗಳ ಬಗ್ಗೆ ಡೈರಿಯಲ್ಲಿ ಬರೆಯುವ ಹವ್ಯಾಸ ಇತ್ತು ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಈಗ ಆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಮುಖ್ಯವಾಗಿ ಶರತ್ ಬಾಬು ಆಸ್ತಿ ಯಾರಿಗೆ ಎನ್ನುವ ಬಗ್ಗೆ ಸಹೋದರರಲ್ಲಿ ಕಿರಿಕ್ ಶುರುವಾಗಿದೆಯಂತೆ. ಶರತ್ ಬಾಬು 3 ಮದುವೆ ಆದರೂ, ಮಕ್ಕಳಾಗದ ಕಾರಣಕ್ಕೆ ಆಸ್ತಿ ತನ್ನ ಒಡಹುಟ್ಟಿದವರಿಗೆ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲಿ ಶರತ್ ಬಾಬು ಡೈರಿ ವಿಚಾರ ಮುನ್ನಲೆಗೆ ಬಂದಿದೆ.

ಸದ್ಯ ಶರತ್ ಬಾಬು ಡೈರೆ ಬರೆಯುತ್ತಿದ್ದರು ಎನ್ನುವ ವಿಚಾರದ ಬಗಗೆ ಊಹಾಪೋಹ ಶುರುವಾಗಿದೆ. ಅದಲ್ಲಿ ತಮ್ಮ ಸಿನಿಮಾ ಜೀವನ, ವೈಯಕ್ತಿಕ ಜೀವನದ ಬಗ್ಗೆ ಅವರು ಬರೆಯುತ್ತಿದ್ದರು ಎನ್ನಲಾಗ್ತಿದೆ. ಅಷ್ಟೇ ತಮ್ಮ ವಿಶ್ರಾಂತಿ ಜೀವನವನ್ನು ಎಲ್ಲಿ ಕಳೆಯಬೇಕು ಎನ್ನುವುದರ ಬಗ್ಗೆ ಕೂಡ ಬರೆದುಕೊಂಡಿದ್ದರು ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಆ ಆಸೆ ತೀರಲೇ ಇಲ್ಲವಂತೆ.
ಆಸೆ ಈಡೇರಲೇ ಇಲ್ಲ
ಶರತ್ ಬಾಬು ತಮ್ಮ ವಿಶ್ರಾಂತಿ ಜೀವನವನ್ನು ಹಾರ್ಸ್ಲಿ ಹಿಲ್ಸ್‌ನಲ್ಲಿ ಕಳೆಯಲು ನಿರ್ಧರಿಸಿದ್ದರಂತೆ. ಆಂಧ್ರ ಪ್ರದೇಶದ ಊಟಿ ಎಂದೇ ಕರೆಯಲಾಗುವ ಅಲ್ಲಿ ಮನೆ ಕಟ್ಟಿಕೊಂಡು ಇರಲು ಬಯಸಿದ್ದರು. ಆದರೆ ಅಲ್ಲಿ ಮನೆ ಕಟ್ಟಿಸುವ ಕೊನೆಯ ಆಸೆ ತೀರಲಿಲ್ಲ. ಅಲ್ಲಿ ಅವರಿಗೆ ಜಮೀನು ಕೂಡ ಇತ್ತು. ಆ ಜಾಗದಲ್ಲಿ 1985ರಲ್ಲಿ ಮನೆ ಕಟ್ಟಲು ಶುರು ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಕೆಲಸವನ್ನು ಅರ್ಧಕ್ಕೆ ಬಿಟ್ಟಿದ್ದರು. ಮನೆ ಪೂರ್ಣಗೊಳ್ಳಲಿಲ್ಲ. ಆಸೆ ತೀರುವ ಮುನ್ನ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಆಸ್ತಿ 13 ಭಾಗ?
8 ಜನ ಅಣ್ಣ ತಮ್ಮಂದಿರು, 5 ಜನ ಅಕ್ಕ ತಂಗಿಯರು ಸೇರಿ ಒಟ್ಟು 13 ಜನ ಪೋಷಕರು ಒಟ್ಟು 13 ಜನ ಮಕ್ಕಳು. ಶರತ್‌ಬಾಬುಗೆ ಮಕ್ಕಳಿಲ್ಲದ ಕಾರಣ ತಮ್ಮ ಆಸ್ತಿಯನ್ನು ಭಾಗಗಳಾಗಿ ಮಾಡಿ ಸಹೋದರ, ಸಹೋದರಿಯರಿಗೆ ಕೊಡಲು ತೀರ್ಮಾನಿಸಿದ್ದರಂತೆ. ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದರು. 8 ನಂದಿ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಲಭಿಸಿತ್ತು. ಕನ್ನಡದಲ್ಲಿ 'ತುಳಸಿದಳ', 'ಅಮೃತವರ್ಷಿಣಿ' ಸೇರಿದಂತೆ ಏಳೆಂಟು ಸಿನಿಮಾಗಳಲ್ಲಿ ಶರತ್ ಬಾಬು ಕಾಣಿಸಿಕೊಂಡಿದ್ದರು.
ನಮಗೆ ಗಾಡ್ ಫಾದರ್ ಆಗಿದ್ದರು
ಇತ್ತೀಚೆಗೆ ಶರತ್ ಬಾಬು ಸಹೋದರ ಮಧು ದೀಕ್ಷಿತ್ ಮಾತನಾಡುತ್ತಾ "ಚಿಕ್ಕಂದಿನಲ್ಲೇ ಪೋಷಕರನ್ನು ಕಳೆದುಕೊಂಡ ತಮ್ಮ ಕುಟುಂಬಕ್ಕೆ ಶರತ್ ಬಾಬು ದಿಕ್ಕಾಗಿದ್ದರು. ಕಷ್ಟಸುಖಗಳಲ್ಲಿ ಜೊತೆಯಾಗಿ ಇರುವುದು ಮಾತ್ರವಲ್ಲ, ತಪ್ಪು ಒಪ್ಪುಗಳನ್ನು ಹೇಳುತ್ತಿದ್ದರು. ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದರು, ಆರ್ಥಿಕವಾಗಿ ಬೆಂಬಲಕ್ಕೆ ನಿಂತಿದ್ದರು. ಅವರು ನಮಗೆ ತಮಗೆ ಬ್ರದರ್ ಮಾತ್ರವಲ್ಲ, ಒಬ್ಬ ಗಾಡ್ ಫಾದರ್ ಆಗಿದ್ದರು."
ವಿಲ್ ಪ್ರಕಾರ ನಡೆಯುತ್ತೇವೆ
"ಶರತ್ ಬಾಬು ಯಾವುದಾದರೂ ವಿಲ್ ಬರೆದು ಇಟ್ಟಿದ್ದರೆ, ಅದರ ಪ್ರಕಾರ ಆಸ್ತಿ ಹಂಚಿಕೆ ಆಗುತ್ತದೆ. ನಾವು ಯಾವಾಗಲೂ ಜಾಯಿಂಟ್ ಫ್ಯಾಮಿಲಿ ರೀತಿ ಇದ್ದೆವು, ಅವರ ಮಾತಿನಂತೆ ನಡೆಯುತ್ತೇವೆ, ವಿಲ್ ಬರೆಯದ ಪಕ್ಷದಲ್ಲಿ ಏನು ಮಾಡಬೇಕೆಂದು ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಮಾತನಾಡುತ್ತಾರೆ. ಈಗ ಎಲ್ಲರೂ ನೋವಿನಲ್ಲಿದ್ದೇವೆ. ಇದು ಆಸ್ತಿಪಾಸ್ತಿ ಬಗ್ಗೆ ಯೋಚಿಸುವ ಸಮಯವಲ್ಲ ಎಂದು ಹೇಳಿದರು. ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರ ಅದರ ಬಗ್ಗೆ ಯೋಚಿಸುತ್ತೇವೆ. ಒಡಹುಟ್ಟಿದವರಿಗೆ ಅವರಿಂದ ಏನೇ ಬಂದರೂ ಸಂತೋಷ" ಎಂದಿದ್ದರು.


Click it and Unblock the Notifications











