ಸರ್ಕಾರು ವಾರಿ ಪಾಟ: ದುಬೈ ಗೆ ಬೈ-ಬೈ ಹೇಳಿದ ಮಹೇಶ್ ಬಾಬು
ಕಳೆದ ಕೆಲವು ವಾರಗಳಿಂದಲೂ ದುಬೈನಲ್ಲಿ ವಾಸ್ತವ್ಯ ಹೂಡಿದ್ದ ನಟ ಮಹೇಶ್ ಬಾಬು ಕೊನೆಗೂ ದುಬೈ ಗೆ ಬೈ-ಬೈ ಹೇಳಿದ್ದಾರೆ.
ಮಹೇಶ್ ಬಾಬು ದುಬೈನಲ್ಲಿದ್ದಿದ್ದು ಪ್ರವಾಸಕ್ಕಾಗಿ ಅಲ್ಲ ಬದಲಿಗೆ ಚಿತ್ರೀಕರಣಕ್ಕಾಗಿದೆ. ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾದ ಚಿತ್ರೀಕರಣ ದುಬೈ, ಶಾರ್ಜಾ ದ ಮರಳುಗಾಡಿಯಲ್ಲಿ ನಡೆಯುತ್ತಿತ್ತು. ಹಾಗಾಗಿ ಕೆಲವು ವಾರಗಳಿಂದಲೂ ಮಹೇಶ್ ಬಾಬು ದುಬೈ ನಲ್ಲಿದ್ದರು.
ಈಗಷ್ಟೆ ದುಬೈನಲ್ಲಿ ಚಿತ್ರೀಕರಣ ಮುಗಿಸಿರುವ 'ಸರ್ಕಾರು ವಾರಿ ಪಾಟ' ಚಿತ್ರತಂಡ, ದುಬೈನಿಂದ ಹೈದರಾಬಾದ್ ಗೆ ವಾಪಸ್ ಆಗಲಿದೆ. ಈ ವಿಷಯವನ್ನು ಚಿತ್ರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟ ಮಹೇಶ್ ಬಾಬು.

ಕೆಲವು ದಿನಗಳಿಂದಲೂ ಶಾರ್ಜಾರ ಮ್ಲೆಹ್ಯಾ ಎಂಬಲ್ಲಿ ಮರಳುಗಾಡಿನಲ್ಲಿ ಚಿತ್ರೀಕರಣ ಮಾಡಿತ್ತು ಚಿತ್ರತಂಡ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನುಭವ ಹಂಚಿಕೊಂಡಿರುವ ಮಹೇಶ್ ಬಾಬು, 'ಇಲ್ಲಿನ ಕತೆಗಳು, ಮೋಜಿನ ಆಟಗಳು, ಬೆರಗು ಮೂಡಿಸುವ ಭೂಪ್ರದೇಶ ಇವೆಲ್ಲವೂ ನನಗೆ ನೆಚ್ಚಿನ ನೆನಪುಗಳಾಗಿ ಉಳಿಯಲಿವೆ. ಇಲ್ಲಿನವರ ಅತಿಥ್ಯವನ್ನು ಮರೆಯುವಂತಿಲ್ಲ' ಎಂದಿದ್ದಾರೆ ಮಹೇಶ್ ಬಾಬು.
ಮರಳುಗಾಡಿನಲ್ಲಿ ಅದ್ಭುತವಾದ ಚೇಸ್ ದೃಶ್ಯಗಳು ಮತ್ತು ಆಕ್ಷನ್ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಿಕೊಂಡಿದೆ. ದುಬೈನಲ್ಲಿ ಕ್ಯಾಸಿನೊ ಸಂಬಂಧಿತ ದೃಶ್ಯಗಳ ಚಿತ್ರೀಕರಣ ನಡೆದಿದೆ ಎನ್ನಲಾಗುತ್ತಿದೆ.

Recommended Video
'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದದಾರೆ. ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಸಹ ಇದ್ದಾರೆ. ಸಿನಿಮಾವನ್ನು ಪರಶುರಾಮ್ ನಿರ್ದೇಶಿಸಿದ್ದಾರೆ. ದುಬೈ ಹಾಗೂ ಶಾರ್ಜಾ ನಲ್ಲಿ ಕೀರ್ತಿ ಸುರೇಶ್ ಸಹ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.


Click it and Unblock the Notifications











