'ಸರ್ಕಾರು ವಾರಿ ಪಾಟ' ಭರ್ಜರಿ ಕಲೆಕ್ಷನ್: ಮತ್ತೆ ಗೆದ್ದ ಮಹೇಶ್ ಬಾಬು!
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೇ 12 ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಇಂದು ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತಾ ಸಾಗುತ್ತಿದೆ. ಎರಡೇ ದಿನದಲ್ಲಿ 100 ಕೋಟಿ ಕಲೆಕ್ಷನ್ ಮಾಡಿದ್ದ 'ಸರ್ಕಾರು ವಾರಿ ಪಾಟ' ಈಗ 200 ಕೋಟಿಯತ್ತ ದಾಪುಗಾಲು ಇಡುತ್ತಿದೆ
ಸಿನಿಮಾ ರಿಲೀಸ್ ಸಮಯದಲ್ಲಿ ವೀಕೆಂಡ್ ಇದ್ದ ಹಿನ್ನೆಲೆ ಕಲೆಕ್ಷನ್‌ನಲ್ಲಿ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೆ, ವೀಕೆಂಡ್ ಬಳಿಕವೂ ಚಿತ್ರ ಅದೇ ರೀತಿ ಮುನ್ನಗುತ್ತಿದ್ದು, ಗಳಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಂಡತಿಲ್ಲ. ಹೀಗಾಗಿ ಮಹೇಶ್ ಬಾಬು ಸಿನಿಮಾ ಹೊಸದೊಂದು ದಾಖಲೆ ಬರೆಯುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ.
ವೀಕೆಂಡ್‌ನಲ್ಲಿ ಭರ್ಜರಿ ಗಳಿಕೆ ಮಾಡಿಕೊಂಡಿದ್ದ ಸಿನಿಮಾ ಸೋಮವಾರದಲ್ಲೂ ಸಹ ಕಲೆಕ್ಷನ್ ಮಾಡಿಕೊಳ್ಳುವಲ್ಲಿ ಹಿಂದೆ ಸರಿದಿಲ್ಲ. ಹೀಗಾಗಿ ವೀಕ್ ಡೇಸ್‌ನಲ್ಲೂ ಸಿನಿಮಾ ಪಾಸ್ ಆಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಅದು ಅಲ್ಲದೆ ಸದ್ಯದ ಮಟ್ಟಿಗೆ ಯಾವುದೇ ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳು ರಿಲೀಸ್ ಆಗದೇ ಇರುವುದು ಚಿತ್ರಕ್ಕೆ ಸಹಕಾರಿಯಾಗಿದೆ.
Recommended Video


ರಿಲೀಸ್ ಆದ ಮೊದಲ ದಿನ ಮಹೇಶ್ ಬಾಬು ಚಿತ್ರಕ್ಕೆ ಮಿಶ್ರ ಪತ್ರಿಕಿಯೆ ವ್ಯಕ್ತವಾದರೂ ಸಹ ಜನ ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಸದ್ಯ ಈಗಲೂ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನೀಡುತ್ತಿದೆ. ಬಿಡುಗಡೆಯಾದ ಮೊದಲ ದಿನ ಸಿನಿಮಾ ಬರೋಬ್ಬರಿ 75 ಕೋಟಿ ರೂಪಾಯಿ ಬಾಚುವ ಮೂಲಕ ಭಾರೀ ಗಳಿಕೆ ಕಂಡಿತ್ತು. ಮೇ 13 ರಂದು ಈ ಚಿತ್ರ 27.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು, ಮೇ 14 ರಂದು 28.84 ರೂಪಾಯಿ, ಮೇ 15 ರಂದು 29.12 ಕೋಟಿ ಗಳಿಸಿ 150 ಕೋಟಿ ಗಡಿ ದಾಟಿತ್ತು. ಮೇ 16 ಸೋಮವಾರವೂ ಕೂಡ 9.38 ಕೋಟಿ ಗಳಿಕೆ ಮಾಡುವ ಮೂಲಕ ವೀಕ್ ಡೇಸ್ ಪರೀಕ್ಷೆಯಲ್ಲೂ ಸಿನಿಮಾ ಪಾಸ್ ಆಗಿ ಭರ್ಜರಿ ಪ್ರದರ್ಶನಗೊಳ್ಳುತ್ತಿದೆ. ಸದ್ಯ ಒಟ್ಟಾರೆ ಚಿತ್ರ 170.05 ಕೋಟಿ ರೂಪಾಯಿ ಗಳಿಕೆ ಮಾಡುತ್ತಾ ಮುಂದೆ ಸಾಗಿದೆ. ಈ ವಾರ ಯಾವುದೇ ಸಿನಿಮಾಗಳು ರಿಲೀಸ್ ಆಗದ ಹಿನ್ನಲೆ ಚಿತ್ರದ ಕಲೆಕ್ಷನ್‌ಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
'ಸರ್ಕಾರು ವಾರಿ ಪಾಟ' ಸಿನಿಮಾ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈವರೆಗೂ 1 ಮಿಲಿಯನ್ ಕಲೆಕ್ಷನ್ ಮಾಡಿದ್ದು, ಮಹೇಶ್ ಬಾಬು ಸಿನಿಮಾವನ್ನು ವಿದೇಶಿಗರು ಸಹ ಇಷ್ಟ ಪಟ್ಟು ನೋಡುತ್ತಿದ್ದಾರೆ. ಇನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಯೇ ಸಿನಿಮಾಗೆ ಹೆಚ್ಚು ಕೆಲಕ್ಷನ್ ಬರುತ್ತಿದ್ದು, ಆಂಧ್ರ ಹಾಗೂ ತೆಲಂಗಾಣದಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇತ್ತೀಚಿಗೆ ತೆರೆಕಂಡ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ 'ಆಚಾರ್ಯ' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಮಾಡದೇ ಹೀನಾಯವಾಗಿ ಸೋತಿತ್ತು. ಸದ್ಯ ಈ ಸೋಲೇ ಈಗ 'ಸರ್ಕಾರು ವಾರಿ ಪಾಟ' ಸಿನಿಮಾಗೆ ಸಕ್ಸಸ್ ತಂದು ಕೊಡುತ್ತಿದೆ.

ಇನ್ನು ಈ ವಾರವೆಲ್ಲಾ ಸಿನಿಮಾ ಓಡುವ ಸಾಧ್ಯತೆ ಇದೆ. ಇನ್ನು ಎರಡು ಮೂರು ದಿನಗಳಲ್ಲಿ 200 ಕ್ಲಬ್ ಸೇರುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸದ್ಯ ಈ ವಾರ ಪೂರ್ತಿ ಸಿನಿಮಾ ಪ್ರದರ್ಶನಗೊಂಡರೆ ಮಹೇಶ್ ಬಾಬು ಸಿನಿಮಾ 200 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆಯುವಂತಾಗಲಿದೆ.


Click it and Unblock the Notifications











