For Quick Alerts
  ALLOW NOTIFICATIONS  
  For Daily Alerts

  ಕೊರೊನಾಗೆ ಬಲಿಯಾದ ಯುವ ಬರಹಗಾರ ವಂಶಿ ರಾಜೇಶ್ ಕೊಂಡವೀಟಿ

  |

  ತೆಲುಗು ಇಂಡಸ್ಟ್ರಿಯ ಯುವ ಬರಹಗಾರ ವಂಶಿ ರಾಜೇಶ್ ಕೊಂಡವೀಟಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನವೆಂಬರ್ 12 ರಂದು ರಾತ್ರಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  ಒಂದು ತಿಂಗಳ ಹಿಂದೆ ವಂಶಿ ರಾಜೇಶ್ ಕೊಂಡವೀಟಿಗೆ ಕೊರೊನಾ ಸೋಂಕು ತಗುಲಿತ್ತು. ಆಮೇಲೆ ಆಸ್ಪತ್ರೆಗೆ ಸಹ ದಾಖಲಾಗಿದ್ದರು. ಕಳೆದ ಒಂದು ವಾರದಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ದುರಾದೃಷ್ಟವಶಾತ್ ನವೆಂಬರ್ 12 ರಂದು ನಿಧನರಾಗಿದ್ದಾರೆ.

  ಅಭಿಮಾನಿ ಸಾವಿಗೆ ಸಂತಾಪ ಸೂಚಿಸಿದ ತಮಿಳು ನಟ ಧನುಶ್

  ವಂಶಿ ರಾಜೇಶ್ ಅವರ ಅಕಾಲಿಕ ಸಾವು ತೆಲುಗು ಇಂಡಸ್ಟ್ರಿಗೆ ಆಘಾತ ತಂದಿದೆ. ಕಳೆದ ಒಂದು ವಾರದಿಂದ ವೆಂಟಿಲೇಟರ್ ಮೂಲಕ ಚಿಕಿತ್ಸೆಯಲ್ಲಿದ್ದ ವಂಶಿ ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದರು ಎಂದು ವೈದ್ಯರು ತಿಳಿಸಿದ್ದಾರೆ.

  ಯಾರು ವಂಶಿ ರಾಜೇಶ್ ಕೊಂಡವೀಟಿ ?

  ವಂಶಿ ರಾಜೇಶ್ ಕೊಂಡವೀಟಿ ಬಹಳ ವರ್ಷದಿಂದ ತೆಲುಗು ಇಂಡಸ್ಟ್ರಿಯಲ್ಲಿ ಬರಹಗಾರನಾಗಿ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ತೆರೆಕಂಡಿದ್ದ 'ಮಿಸ್ಟರ್' ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದರು. ರವಿತೇಜ ನಟನೆಯ ಅಮರ್ ಅಕ್ಬರ್ ಆಂಟೋನಿ ಚಿತ್ರದಲ್ಲಿ ಕೆಲಸ ಮಾಡಿದ್ದರು.

  ರವಿ ಬೆಳಗೆರೆ ಸಹಾಯ ನೆನೆದು ಬಿಕ್ಕಿ ಬಿಕ್ಕಿ ಅತ್ತರು ಹಿರಿಯ ನಟಿ ಲೀಲಾವತಿ | Filmibeat Kannada

  ಸ್ಟಾರ್ ನಟ-ಬರಹಗಾರ ಶ್ರೀನಿ ವೈಟ್ಲಾ ಜೊತೆ ಬಹಳ ದಿನ ಕೆಲಸ ಮಾಡಿದ್ದರು. ವಂಶಿ ರಾಜೇಶ್ ನಿಧನಕ್ಕೆ ಶ್ರೀನಿ ವೈಟ್ಲಾ ಸಹ ಸಂತಾಪ ಸೂಚಿಸಿದ್ದಾರೆ. ನವೆಂಬರ್ 13 ರಂದು ವಂಶಿ ರಾಜೇಶ್ ಅವರ ಅಂತಿಮ ಸಂಸ್ಕಾರ ನಡೆದಿದೆ.

  English summary
  Telugu Movie 'Amar Akbar Antony' screenwriter Vamsi Rajesh Kondaveeti passes away due to COVID-19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X