Pushpa-2 The Rule: 'ಪುಷ್ಪ'ರಾಜ್ ಕಿರುಬೆರಳ ಉದ್ದ ಉಗುರಿನ ರಹಸ್ಯ ಬಯಲು.. ಅಬ್ಬಾ ಇಷ್ಟೆಲ್ಲಾ ಅರ್ಥ ಇದ್ಯಾ?
ಬಹುನಿರೀಕ್ಷಿತ 'ಪುಷ್ಪ'-2 ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ. ಮುಂದಿನ ವರ್ಷ ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ರಿಲೀಸ್ ಡೇಟ್ ಘೋಷಣೆ ಮಾಡಿ ರಿಲೀಸ್ ಮಾಡಿರುವ ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ. ಪೋಸ್ಟರ್‌ನಲ್ಲಿ 'ಪುಷ್ಪ'ರಾಜ್ ಮುಖ ದರ್ಶನವಾಗದಿದ್ದರೂ ಎಡಗೈ ಕಿರುಬೆರಳನ್ನು ಹೈಲೆಟ್ ಮಾಡಿದ್ದಾರೆ.
ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ಟೀಸರ್‌ನಲ್ಲೂ ಪುಷ್ಪರಾಜ್ ಕಿರುಬೆರಳು, ಉದ್ದ ಉಗುರಿಗೆ ಕೆಂಪು ಬಣ್ಣ ಹಚ್ಚಿದ್ದು ಎಲ್ಲರ ಗಮನ ಸೆಳೆದಿತ್ತು. ಎರಡು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಆಕ್ಷನ್ ಎಂಟರ್‌ಟೈನರ್ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸುಕುಮಾರ್ ನಿರ್ದೇಶನ, ಅಲ್ಲು ಅರ್ಜುನ್ ಪರ್ಫಾರ್ಮನ್ಸ್ ಸಿನಿರಸಿಕರಿಗೆ ಇಷ್ಟವಾಗಿತ್ತು. ಸಿನಿಮಾ ಸಾಂಗ್ಸ್ ಕೂಡ ಹಿಟ್ ಆಗಿ ಪ್ಲಸ್ ಆಗಿತ್ತು.

350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 'ಪುಷ್ಪ' ದಿ ರೈಸ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಮುಖ್ಯವಾಗಿ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಗಳಿಕೆ ಎಲ್ಲರ ಹುಬ್ಬೇರಿಸಿತ್ತು. ಉತ್ತರ ಭಾರತದಲ್ಲಿ 'ಪುಷ್ಪ' ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಯಿದೆ. ಬಹುಕೋಟಿ ವೆಚ್ಚದಲ್ಲಿ ಪುಷ್ಪರಾಜ್ ಮುಂದುವರೆದ ಕಥೆಯನ್ನು ತೆರೆಗೆ ತರಲಾಗುತ್ತಿದೆ. ಈಗಾಗಲೇ ಚಿತ್ರೀಕರಣ ಕೂಡ ನಡೀತಿದೆ. ಈ ವರ್ಷವೇ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇತ್ತು. ಕೊನೆಪಕ್ಷ ಮುಂದಿನ ವರ್ಷ ಸಮ್ಮರ್‌ನಲ್ಲಿ ಸಿನಿಮಾ ತೆರೆಗೆ ಬರುತ್ತೆ ಎಂದುಕೊಂಡವರಿಗೆ ಕೊಂಚ ನಿರಾಸೆಯಾಗಿದೆ.
ಒಟ್ನಲ್ಲಿ 'ಪುಷ್ಪ'-2 ದಿ ರೂಲ್ ಸಿನಿಮಾ ಮುಂದಿನ ವರ್ಷ ಆಗಸ್ಟ್ 15ಕ್ಕೆ ರಿಲೀಸ್ ಆಗುತ್ತದೆ ಎನ್ನುವ ಸುದ್ದಿ ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಇನ್ನು ಹೊಸ ಪೋಸ್ಟರ್ ಬಗ್ಗೆಯೂ ಚರ್ಚೆ ನಡೀತಿದೆ. ಕಣ್ಣಿಗೆ ಕೂಲಿಂಗ್ ಕ್ಲಾಸ್ ತೊಟ್ಟು ಬಲಗೈಲಿ ಸಿಗರೇಟ್, ಎಡಗೈಯನ್ನು ಎಡಗಾಲಿನ ಮೇಲಿಟ್ಟುಕೊಂಡು ಖಡಕ್ ಲುಕ್‌ನಲ್ಲಿ ಪುಷ್ಪ ಪೋಸ್ ಕೊಟ್ಟಿದ್ದಾನೆ. ಎಡಗೈಲಿ ಉಂಗುರುಗಳು ಕಣ್ಣು ಕುಕ್ಕುತ್ತಿವೆ. ಜೊತೆಗೆ ಕಿರುಬೆರಳಿನ ಉಗುರು ಉದ್ದವಾಗಿದ್ದು ಕೆಂಪು ಬಣ್ಣ ಹಚ್ಚಿರೋದನ್ನು ನೋಡಬಹುದು.

ಅಷ್ಟಕ್ಕೂ ಯಾಕೆ 'ಪುಷ್ಪ'ರಾಜ್ ಕಿರುಬೆರಳಿನ ಉಗುರು ಉದ್ದವಾಗಿದೆ ಎನ್ನುವ ಬಗ್ಗೆ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂದು ಹುಡುಕಾಟ ನಡೆಸಿದ್ದಾರೆ. ಏಷ್ಯಾದ ಕೆಲ ಭಾಗಗಳಲ್ಲಿ ಕಿರುಬೆರಳಿನ ಉಗುರು ಉದ್ದಕ್ಕಿರುವುದು ಶ್ರೀಮಂತಿಕೆಯ ಸಂಕೇತ ಎಂದು ನಂಬಲಾಗುತ್ತದೆ. ಹೀಗೆ ಉದ್ದ ಉಗುರಿರುವವರು ಶ್ರಮಪಡುವ ಅಗತ್ಯವಿಲ್ಲ ಹಾಗೂ ಆರಾಮವಾಗಿ ಹಣ ಎಣಿಸುವವರು ಎಂದು ಎದುರಿನವರು ಭಾವಿಸುತ್ತಾರಂತೆ. ಇನ್ನು ಇದು ಮೇಲ್ವರ್ಗದ ಜನರ ಸಂಕೇತ ಎಂದು ಹೇಳಲಾಗುತ್ತದೆ.
'ಪುಷ್ಪ' ಚಿತ್ರದಲ್ಲಿ ನಾಯಕ 'ಪುಷ್ಪ'ರಾಜ್ ಕೆಳವರ್ಗದ ಕುಟುಂಬದವರನಾಗಿರುತ್ತಾನೆ. ರಕ್ತಚಂದನ ಸ್ಮಗ್ಲರ್ ಆಗಿ ತನ್ನ ಚಾಣಾಕ್ಷತನ, ತಾಕತ್ತಿನಿಂದ ಸ್ಮಗ್ಲಿಂಗ್ ಗ್ಯಾಂಗ್ ಲೀಡರ್ ಆಗುತ್ತಾನೆ. ಮುಂದೆ ಆತನ ಆರ್ಭಟ ಹೇಗೆ ಮುಂದುವರೆಯುತ್ತದೆ ಎನ್ನುವುದನ್ನು ಸೀಕ್ವೆಲ್‌ನಲ್ಲಿ ಹೇಳಲಾಗುತ್ತಿದೆ. ಇದೀಗ 'ಪುಷ್ಪ' ಡಾನ್ ಆಗಿ ಶ್ರೀಮಂತನಾಗುತ್ತಾನೆ. ಅದನ್ನೇ ಈ ರೀತಿ ಕಿರುಬೆರಳಿನ ಉದ್ದ ಉಗುರಿನ ಮೂಲಕ ಸುಕುಮಾರ್ ಹೇಳಲು ಹೊರಟಿದ್ದಾರೆ ಎಂದು ಚರ್ಚೆ ಆಗುತ್ತಿದೆ. ಸುಕುಮಾರ್ ಡಿಟೇಲಿಂಗ್ ಬಗ್ಗೆ ತಿಳಿದು ಕೆಲವರು ಹುಬ್ಬೇರಿಸಿದ್ದಾರೆ.
'ಪುಷ್ಪ' ಚಿತ್ರದ ಈ ಹಿಂದಿನ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು, ಮೇಕಪ್ ಮಾಡಿಕೊಂಡು ಚಿನ್ನ ಹಾಗೂ ಹೂವಿನ ಆಭರಣ ಧರಿಸಿ, ಕಿವಿಯೋಲೆ, ಮೂಗುತಿ, ಬಳೆ ತೊಟ್ಟು ಗಂಗಮ್ಮ ತಲ್ಲಿ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಆ ಪೋಸ್ಟರ್‌ನಲ್ಲಿ ಸ್ಟೈಲಿಶ್ ಸ್ಟಾರ್ ಲುಕ್ ನೋಡಿದವರು ಶಾಕ್ ಆಗಿದ್ದರು. ಆ ಲುಕ್ಕಿಗೂ ಹೊಸ ಪೋಸ್ಟರ್‌ನಲ್ಲಿ 'ಪುಷ್ಪ'ರಾಜ್ ಕಿರುಬೆರಳಿನ ಉದ್ದ ಉಗುರಿಗೂ ಏನಾದರೂ ಲಿಂಕ್ ಇದ್ಯಾ? ಎಂದು ಕೂಡ ಕೆಲವರು ಹೇಳುತ್ತಿದ್ದಾರೆ.


Click it and Unblock the Notifications











