For Quick Alerts
  ALLOW NOTIFICATIONS  
  For Daily Alerts

  'ಸೀಟಿಮಾರ್' ಸಕ್ಸಸ್, ಮೊದಲಾಯಿತು ಚಿತ್ರಮಂದಿರಗಳ ಕಡೆಗೆ ಸಿನಿಮಾಗಳ ಪಯಣ

  By ರವೀಂದ್ರ ಕೊಟಕಿ
  |

  ಕಳೆದ ಎರಡು ವರ್ಷಗಳ ಕರೋನ ಕಾರಣದಿಂದ ಬಹುತೇಕ ಭಾರತೀಯ ಸಿನಿಮಾರಂಗ ಚಿತ್ರಮಂದಿರಗಳನ್ನು ಮರೆತು ಪೂರ್ತಿಯಾಗಿ OTT ನಲ್ಲಿಯೇ ಸಿನಿಮಾಗಳನ್ನು ಬಿಡುಗಡೆ ಮಾಡುವ ಹಂತಕ್ಕೆ ಬಂದು ತಲುಪಿದೆ. ಇದಕ್ಕೆ ಸಣ್ಣ ಚಿತ್ರ ಅಥವಾ ದೊಡ್ಡ ಚಿತ್ರವೆಂಬ ನಿರ್ಬಂಧವಿಲ್ಲದೆ ಬಹುತೇಕ ಚಿತ್ರಗಳು ಕಳೆದ ಎರಡು ವರ್ಷಗಳಿಂದ OTT ನಲ್ಲೆ ಬಿಡುಗಡೆಯಾಗುತ್ತಿವೆ.

  ಕರೋನ ಪೂರ್ತಿಯಾಗಿ ಬಿಟ್ಟು ಹೋಗುವ ಲಕ್ಷಣಗಳು ಇನ್ನೂ ಕಾಣುತ್ತಿಲ್ಲ. ಇನ್ನೊಂದೆಡೆ ಥಿಯೇಟರ್ಗಳಲ್ಲಿ ಕೂಡ 50%ರ ಸೀಟುಗಳ ನಿರ್ಬಂಧ ಕೂಡ ಮುಂದುವರೆದಿದೆ. ದೊಡ್ಡ ಬಂಡವಾಳ ಹೂಡಿದ,ಸ್ಟಾರ್ ನಟರ ಚಿತ್ರಗಳಿಗೂ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತ್ತೀಚೆಗೆ ಹಿಂದಿಯ ಬೆಲ್ ಬಾಟಮ್, ತಮಿಳಿನ ಬಹುನಿರೀಕ್ಷಿತ ತಲೈವಿ ( ಮೊನ್ನೆ ಶುಕ್ರವಾರ) ಬಿಡುಗಡೆಯಾದರೂ ನಿರೀಕ್ಷಿತ ಪ್ರಮಾಣದ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿವೆ.

  ಸ್ಟಾರ್ ನಟ ನಾನಿ ಚಿತ್ರ 'ಟಕ್ ಜಗದೀಶ್' ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವಂತೆ ವಿತರಕರು ಕೋರಿದರು ನಿರ್ಮಾಪಕರು ಮಾತ್ರ OTT ನಲ್ಲೆ ಬಿಡುಗಡೆ ಮಾಡಿದ್ದಾರೆ. ಇನ್ನು ಲೋ ಬಜೆಟ್ಟಿನ ಚಿತ್ರಗಳಿಗೆ ಥಿಯೇಟರುಗಳು ದಕ್ಕಿದರೂ ಪ್ರೇಕ್ಷಕರ ಬರದಿಂದ ಬಳಲುತ್ತಿವೆ.

  ಚಿತ್ರಮಂದಿರಗಳು ಮುಚ್ಚುವ ಭೀತಿ!

  ಚಿತ್ರಮಂದಿರಗಳು ಮುಚ್ಚುವ ಭೀತಿ!

  ಒಂದೆಡೆ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ. ಇನ್ನೊಂದೆಡೆ ಕರೋನಾದ ಸಂಕಷ್ಟ, ಜೊತೆಗೆ ಭಾರಿ ಬಜೆಟಿನ ಚಿತ್ರಗಳಲ್ಲ ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ ಮಾಡಿಕೊಂಡ ಕಾರಣ ಚಿತ್ರಮಂದಿರಗಳ ದುಸ್ಥಿತಿ ಹೇಳಲಾಗದ ಸ್ಥಿತಿಗೆ ಬಂದು ತಲುಪಿದೆ. ಕರ್ನಾಟಕವೂ ಸೇರಿದಂತೆ ದೇಶದ ಸಾಕಷ್ಟು ಚಿತ್ರಮಂದಿರಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಚಿತ್ರಮಂದಿರಗಳನ್ನು ನಡೆಸುವುದು ದುಸ್ಸಾಹಸವೇ ಸರಿ! ಎಂಬ ಭಾವನೆ ಕೂಡ ಅವರಲ್ಲಿ ಮೂಡುತ್ತಿದೆ. ಆದರೆ, ಒಂದು ಹಿಟ್ ಚಿತ್ರ ಬಿದ್ದರೆ ಸಾಕು ಸರ್ ಎಲ್ಲರೂ ವಾಪಸ್ ಚಿತ್ರಮಂದಿರದ ಕಡೆಗೆ ಬರುತ್ತಾರೆ ಎಂಬ ನಂಬಿಕೆ ಮತ್ತು ವಿಶ್ವಾಸವನ್ನು ಕೂಡ ಚಿತ್ರಮಂದಿರ ಮಾಲೀಕರು ಮತ್ತು ವಿತರಕರು ಆಶಾಭಾವದಿಂದ ವ್ಯಕ್ತಪಡಿಸುತ್ತಾರೆ. ಅವರ ಆಶಾಭಾವನೆಗೆ ಈಗ ಒಂದಷ್ಟು ಚಿಗುರು ಅರಳಿಸುವ ಮರವಾಗಿ ಸೀಟಿಮಾರ್ ಬಂದಿದೆ.

  'ಸೀಟಿಮಾರ್' ಎಲ್ಲೆಡೆ ಹೌಸ್ ಫುಲ್

  'ಸೀಟಿಮಾರ್' ಎಲ್ಲೆಡೆ ಹೌಸ್ ಫುಲ್

  ಗೋಪಿಚಂದ್- ತಮನ್ನಾ ಮುಖ್ಯಭೂಮಿಕೆಯಲ್ಲಿರುವ ಸಂಪತ್ ನಂದಿ ನಿರ್ದೇಶಿಸಿರುವ ಮಣಿರತ್ನ ಮಣಿಶರ್ಮ ಸಂಗೀತ ನೀಡಿರುವ ಈ ಚಿತ್ರದ ವಿನಾಯಕ ಚತುರ್ಥಿಯನ್ನು ಪುರಸ್ಕರಿಸಿ ಕೊಂಡು, ಕಳೆದ ಶುಕ್ರವಾರ ಆಂಧ್ರ ಮತ್ತು ತೆಲಂಗಾಣದ ಸುಮಾರು 600 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೊದಲ ದಿನವೇ ಅನೇಕ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋ ಹೌಸ್ ಫುಲ್ ಬೋರ್ಡ್ ( 50% ನಿರ್ಬಂಧದಲ್ಲಿ ಚಿತ್ರ ಬಿಡುಗಡೆಯಾಗಿರುವುದು) ಬಿದ್ದಿದೆ.

  ಟಿಕೆಟ್ ದರದಲ್ಲಿ ಇಳಿಕೆ

  ಟಿಕೆಟ್ ದರದಲ್ಲಿ ಇಳಿಕೆ

  ಕೊರೊನಾ ಕಾರಣದಿಂದ ಟಿಕೆಟ್ ದರವನ್ನು ಕೂಡಾ ಶೇಕಡಾ ಐವತ್ತರಷ್ಟು ಇಳಿಸಲಾಗಿದೆ. ಆದಾಗಿಯೂ ಚಿತ್ರ ಮೊದಲ ದಿನ ಬಂಪರ್ 3.5 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಎರಡನೇ ಕೊರೊನಾ ಅಲೆ ನಂತರ ಬಿಡುಗಡೆಯಾದ ಚಿತ್ರಗಳಲ್ಲಿ ಅತಿಹೆಚ್ಚಿನ ಮೊದಲ ದಿನದ ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಶನಿವಾರ ಕೂಡ ಅದರ ವಿಜಯ ಯಾತ್ರೆ ಮುಂದುವರೆದಿದ್ದು, ಇಂದು ಭಾನುವಾರ ಕೂಡ ಬಿ. ಸಿ. ಸೆಂಟರುಗಳಲ್ಲಿ ಹೆಚ್ಚಿನ ಕಲೆಕ್ಷನ್ ಮಾಡುವ ಅವಕಾಶಗಳಿವೆ. ಪ್ರಸ್ತುತ ಸಂದರ್ಭದಲ್ಲಿ 'ಈ ಕಲೆಕ್ಷನ್ ಅನ್ನು ಸೂಪರ್ ಹಿಟ್ ಲೆಕ್ಕದಲ್ಲೇ ಪರಿಗಣಿಸಬೇಕಾಗುತ್ತದೆ' ಎಂಬುದು ಸಿನಿ ಟ್ರೇಡ್ ಪಂಡಿತರ ವಿಶ್ಲೇಷಣೆ.

  ಇನ್ನಷ್ಟು ನಿರ್ಮಾಪಕರಿಗೆ ಪ್ರೇರಣೆ ನೀಡಬಹುದು

  ಇನ್ನಷ್ಟು ನಿರ್ಮಾಪಕರಿಗೆ ಪ್ರೇರಣೆ ನೀಡಬಹುದು

  'ಸೀಟಿಮಾರ್' ನೀಡಿರುವ ಈ ಸ್ವೀಟ್ ಸಕ್ಸಸ್ ಇಂದ ಮುಂಬರುವ ದಿನಗಳಲ್ಲಿ ಉಳಿದ ನಿರ್ಮಾಪಕರು ಕೂಡ ತಮ್ಮ ಚಿತ್ರಗಳನ್ನು ಥಿಯೇಟರುಗಳಲ್ಲಿ ಬಿಡುಗಡೆ ಮಾಡುವ ಅವಕಾಶಗಳು ಹೆಚ್ಚಾಗಿದೆ' ಅಂತ ಅವರು ಅಭಿಪ್ರಾಯಪಡುತ್ತಾರೆ ಸಿನಿ ಪಂಡಿತರು.

  English summary
  Gopichand, Tamanna Bhatia starer Seetimaarr movie released in theaters and got hit. More movies to follow Seetimaarr and releasing in theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X