For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಚಿಕ್ಕಪ್ಪ, ಹಿರಿಯ ನಟ ಕೃಷ್ಣಂರಾಜು ಆಸ್ಪತ್ರೆಗೆ ದಾಖಲು

  |

  ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟ, ಪ್ರಭಾಸ್ ಅವರ ಚಿಕ್ಕಪ್ಪ ಕೃಷ್ಣಂರಾಜು ಅವರು ಅನಾರೋಗ್ಯದ ಕಾರಣ ಕಳೆದ ರಾತ್ರಿ ಹೈದರಾಬಾದ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

  'ಸಾಹೋ' ಸೋಲಿನ ಬಳಿಕ ಬಾಲಿವುಡ್ ಗೆ ಶಾಕ್ ಕೊಟ್ಟ ಪ್ರಭಾಸ್!'ಸಾಹೋ' ಸೋಲಿನ ಬಳಿಕ ಬಾಲಿವುಡ್ ಗೆ ಶಾಕ್ ಕೊಟ್ಟ ಪ್ರಭಾಸ್!

  ಕೇಂದ್ರದ ಮಾಜಿ ಸಚಿವರಾಗಿದ್ದ ಕೃಷ್ಣಂರಾಜು ಅವರನ್ನ ಐಸಿಯುನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಮೂಲಗಳ ಪ್ರಕಾರ, ಕೃಷ್ಣಂರಾಜು ಅವರು, ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ನ್ಯೂಮೋನಿಯಾ ಜ್ವರ ಶ್ವಾಸಕೋಶಕ್ಕೆ ಸಂಬಂಧಿಸಿದ ಸಾಂಕ್ರಾಮಿಕ ಕಾಯಿಲೆಯಾಗಿರುತ್ತದೆ. ಮುಂದೆ ಓದಿ....

  ಆರೋಗ್ಯದ ಬಗ್ಗೆ ವೈದ್ಯರು ಸ್ಪಷ್ಟನೆ

  ಆರೋಗ್ಯದ ಬಗ್ಗೆ ವೈದ್ಯರು ಸ್ಪಷ್ಟನೆ

  ಸದ್ಯ ಕೃಷ್ಣಂರಾಜು ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಪ್ರಭಾಸ್ ಅಂಕಲ್ ''ಅವರ ಸ್ಥಿತಿ ಸಾಮಾನ್ಯವಾಗಿದೆ. 48 ಗಂಟೆಗಳ ಕಾಲ ಅವರನ್ನು ಐಸಿಯುದಲ್ಲೆ ಇರಿಸಿ ಗಮನಿಸಬೇಕಾಗಿದೆ. ನಂತರ ಡಿಸ್ಜಾರ್ಜ್ ಮಾಡಲಾಗುವುದು'' ಎಂದು ತಿಳಿಸಿದ್ದಾರೆ.

  'ಸಾಹೋ' ನಂತರ ಪ್ರಭಾಸ್ ಸಿನಿಮಾ ಅನೌನ್ಸ್: ಬಾಹುಬಲಿಗೆ ನಾಯಕಿಯಾದ ಕನ್ನಡತಿ'ಸಾಹೋ' ನಂತರ ಪ್ರಭಾಸ್ ಸಿನಿಮಾ ಅನೌನ್ಸ್: ಬಾಹುಬಲಿಗೆ ನಾಯಕಿಯಾದ ಕನ್ನಡತಿ

  ಮೊದಲ ಸಿನಿಮಾ ಯಾವುದು

  ಮೊದಲ ಸಿನಿಮಾ ಯಾವುದು

  1966ರಲ್ಲಿ 'ಚಿಲಕ ಗೋರಿಂಕಾ' ಸಿನಿಮಾದ ಮೂಲಕ ಟಾಲಿವುಡ್ ಪ್ರವೇಶಿಸಿದ ಕೃಷ್ಣಂರಾಜು ಸುಮಾರು 190ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೇ, ನಿರ್ಮಾಪಕನಿಗೂ ಸಿನಿಮಾಗಳನ್ನ ನಿರ್ಮಿಸಿದ್ದಾರೆ.

  ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಸ್' ಯಾರು?ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಸ್' ಯಾರು?

  ಪ್ರಮುಖ ಸಿನಿಮಾಗಳು ಯಾವುದು

  ಪ್ರಮುಖ ಸಿನಿಮಾಗಳು ಯಾವುದು

  ಕೃಷ್ಣಂರಾಜು ಅವರ ಪ್ರಮುಖ ಸಿನಿಮಾಗಳ ಪಟ್ಟಿ ನೋಡುವುದಾರೇ, ಜೀವನ ತರಂಗಾಲು, ಕೃಷ್ಣವೇಣಿ, ಭಕ್ತ ಕಣ್ಣಪ್ಪ, ಅಮರದೀಪಂ, ಸತಿ ಸಾವಿತ್ರಿ, ಕಟಕಟಾಲೋ ರುದ್ರಯ್ಯ, ಮನವೂರಿ ಪಾಂಡವಲು, ರಂಗೋನ್ ರೌಡಿ, ಶ್ರೀವಿನಾಯಕ ವಿಜಯಂ, ಸೀತಾ ರಾಮುಲು, ಟ್ಯಾಕ್ಸಿ ಡ್ರೈವರ್, ತ್ರಿಶೂಲಂ, ಧರ್ಮಾತ್ಮುಡು, ಬೊಬ್ಬಿಲಿ ಬ್ರಹ್ಮನ್ನ, ಮರಣ ಶಾಸನಂ, ಅಂತಿಮ ತೀರ್ಪು ಸೇರಿದಂತೆ ಹಲವು ಹಿಟ್ ಚಿತ್ರಗಳನ್ನ ನೀಡಿದ್ದಾರೆ.

  ಪ್ರಭಾಸ್ ಚಿತ್ರಕ್ಕೆ ಬಂಡವಾಳ!

  ಪ್ರಭಾಸ್ ಚಿತ್ರಕ್ಕೆ ಬಂಡವಾಳ!

  ಸದ್ಯ ಪ್ರಭಾಸ್ ನಟಿಸುತ್ತಿರುವ ಜಾನ್ ಸಿನಿಮಾವನ್ನ ಖುದ್ದು ಕೃಷ್ಣಂರಾಜು ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಪೂಜಾ ಹೆಗ್ದೆ ನಟಿಸುತ್ತಿದ್ದಾರಂತೆ. ಕೆಎಸ್ ರಾಧಕೃಷ್ಣಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಭಾಸ್ ಅವರನ್ನ ಚಿತ್ರರಂಗಕ್ಕೆ ಪರಿಚಿಯಿಸಿ, ಅವರ ಯಶಸ್ಸಿನ ಹಿಂದೆ ನಿಂತಿರುವ ವ್ಯಕ್ತಿ ಕೂಡ ಇವರೇ.

  English summary
  Senior Actor, Prabhas uncle Krishnam Raju has hospitalized. he was suffering from pneumonia

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X