ಪ್ರಭುದೇವ ತಂದೆ ಮೇಲೆ ನಟಿ ಗಂಭೀರ ಆರೋಪ: ಸುಂದರಂ ಮಾಸ್ಟರ್ ಮಾಡಿದ್ದೇನು?
ಭಾರತ ಚಿತ್ರರಂಗದಲ್ಲಿ ಹೆಸರಾಂತ ನೃತ್ಯ ನಿರ್ದೇಶಕರಾಗಿರುವ ನೃತ್ಯ ನಿರ್ದೇಶಕ ಸುಂದರ್ ಮಾಸ್ಟರ್ ಬಗ್ಗೆ ಹೊಸದೊಂದು ಸುದ್ದಿ ಹಬ್ಬಿದೆ. ಸುಂದರಂ ಮಾಸ್ಟರ್ ಯಾರು ಎಂದು ನಿಮಗೆಲ್ಲಾ ಗೊತ್ತಿರಬಹುದು. ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಅವರ ತಂದೆ.
ನೂರಾರು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಸುಂದರಂ ಮಾಸ್ಟರ್ ಕೆಲಸ ಮಾಡಿದ್ದಾರೆ. ನಂತರ ಹಲವು ಚಿತ್ರಗಳಿಗೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. 1200 ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ಕೆಲಸ ಮಾಡಿದ್ದಾರೆ. ಹಲವು ವರ್ಷಗಳ ಬಳಿಕ ಸುಂದರಂ ಮಾಸ್ಟರ್ ಬಗ್ಗೆ ಈಗ ಹೊಸ ಆರೋಪ ಕೇಳಿ ಬಂದಿದೆ.
ಹಲವು ವರ್ಷಗಳ ಹಿಂದೆ ಸಿನಿಮಾ ಸೆಟ್‌ನಲ್ಲಿ ಆದ ಅನುಭವವನ್ನು ಸುಧಾ ಅವರು ಈಗ ನೆನಪಿಸಿಕೊಂಡಿದ್ದಾರೆ. ಜೊತೆಗೆ ಕೆಲ ವರ್ಷಗಳ ಬಳಿಕ ಸುಂದರಂ ಮಾಸ್ಟರ್ ಅವರೇ, ಸುಧಾ ಅವರ ಬಳಿ ಕ್ಷಮೆ ಕೇಳಿದ್ದಾರಂತೆ.

ಸೆಟ್‌ನಲ್ಲೇ ಕಣ್ಣೀರು ಹಾಕಿದ್ದ ನಟಿ!
ಹಿರಿಯ ನಟಿ ಸುಧಾ ಅವರು ನೃತ್ಯ ನಿರ್ದೇಶಕರು ತನ್ನನ್ನು ಕೆಟ್ಟದಾಗಿ ಅವಮಾನಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆಕೆ ಸಿನಿಮಾವೊಂದರ ಚಿತ್ರೀಕರಣದ ವೇಳೆ ಡ್ಯಾನ್ಸ್ ಕಲಿಯದೇ ಇದ್ದ ಕಾರಣ ನಟಿ ಸುಧಾರನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಇದರಿಂದ ಸಿನಿಮಾ ಸೆಟ್‌ನಲ್ಲಿಯೇ ಬಿಕ್ಕಿ, ಬಿಕ್ಕಿ ಅತ್ತಿದ್ದರಂತೆ.

ವೇಶ್ಯಾವಾಟಿಕೆಗೂ ಯೋಗ್ಯಳಲ್ಲ ಎಂದು ನಿಂದಿಸಿದ್ದ ಮಾಸ್ಟರ್!
ಸುಧಾ ಅವರು ಸಂದರ್ಶನ ಒಂದರಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. "ನನಗೆ ಸುಂದರಂ ಮಾಸ್ಟರ್ ಅವರು ಡ್ಯಾನ್ಸ್ ಹೇಳಿಕೊಡುತ್ತಿದ್ದರು. ಆದರೆ, ಅದು ನನಗೆ ಸುಲಭವಾಗಿ ಬರರಿಲ್ಲ. ನಾಲ್ಕು, ಐದು ಟೇಕ್ ಆದರೂ ಡ್ಯಾನ್ಸ್ ಬರಲಿಲ್ಲ. ಆಗ ನೀನು ವೇಶ್ಯಾವಾಟಿಕೆಗೂ ಯೋಗ್ಯಳಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ಪ್ರಭು, ಪಿ.ವಾಸು ಸೇರಿದಂತೆ ಹಲವು ದೊಡ್ಡವರು ಸೆಟ್ಟಿನಲ್ಲಿದ್ದರು. ಆಗ ನಾನು ಅಳುತ್ತಿದ್ದೆ, ಎಲ್ಲರ ಮುಂದೆ ಇಷ್ಟು ದೊಡ್ಡ ಅವಮಾನ ಮಾಡಿದರು. ಅದನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ನಾನು ಅಳುತ್ತಾ ಸೆಟ್ ನಿಂದ ಹೊರಟೆ. ಸಣ್ಣ ಕಲಾವಿದರೂ, ದೊಡ್ಡ ಕಲಾವಿದರೂ, ಹೀಗೆ ಹೇಳುವುದು ತಪ್ಪು." ಎಂದಿದ್ದಾರೆ.

6 ವರ್ಷಗಳ ಬಳಿಕ ಅವರ ಸಿನಿಮಾದಲ್ಲಿಯೇ ನಟಿಸಿದ ನಟಿ!
ಮಾತು ಮುಂದುವರೆಸಿದ ಅವರು "ನಾನು ಅಳುತ್ತಾ ಮನೆಗೆ ಹೋದೆ ಮತ್ತು ಈ ವಿಚಾರವನ್ನು ನನ್ನ ತಾಯಿಗೆ ಹೇಳಿದೆ. ಆತ ಇರುವ ಈ ಚಿತ್ರತಂಡದಲ್ಲಿ ನಾನು ಇರುವುದಿಲ್ಲ ಎಂದೆ. ಆದರೆ ನನ್ನ ತಾಯಿ ಸಮಾಧಾನಪಡಸಿ, ಇದಕ್ಕೆ ಹೆದರದೆ ನೀನು ನಟನೆಯಿಂದಲೇ ಉತ್ತರ ನೀಡಬೇಕು ಎಂದು ಧೈರ್ಯ ತುಂಬಿದರು. ಆರು ವರ್ಷಗಳ ನಂತರ, ನನ್ನ ತಾಯಿ ಹೇಳಿದಂತೆ ಅವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ತಾಯಿ ಪಾತ್ರಕ್ಕಾಗಿ ನನ್ನ ಬಳಿಗೆ ಬಂದರು. ನಾನು ಅವರನ್ನು ನೋಡಿದಾಗ, ನಾನು ಅವರ ಸಿನಿಮಾ ಮಾಡುವುದಿಲ್ಲ ಎಂದು ನನ್ನ ತಾಯಿಗೆ ಹೇಳಿದೆ.

ನಟಿ ಸುಧಾ ಬಳಿ ಕ್ಷಮೆ ಕೇಳಿದ ಸುಂದರಂ ಮಾಸ್ಟರ್!
ಆದರೆ ಅವನು ಪಶ್ಚಾತ್ತಾಪ ಪಟ್ಟಿರುವುದರಿಂದ ಅವನು ನಿನ್ನ ಬಳಿಗೆ ಬಂದಿದ್ದಾನೆ ಎಂದು ನನ್ನ ತಾಯಿ ಹೇಳಿದರು. ನಂತರ ನಾನು ಒಪ್ಪಂದಕ್ಕೆ ಸಹಿ ಹಾಕಿದೆ. ಶೂಟಿಂಗ್ ಹೋದಾಗ ಫಸ್ಟ್ ಶಾಟ್ ಓಕೆ ಆಗಿತ್ತು. ಎರಡು ಪುಟದ ಡೈಲಾಗ್ ತುಂಬಾ ಚೆನ್ನಾಗಿ ಬಂದಿದೆ ಎಂದು ಎಲ್ಲರೂ ಚಪ್ಪಾಳೆ ತಟ್ಟಿದರು. ಆ ನಂತರ ಸುಂದರಂ ಮಾಸ್ಟರ್ ನನ್ನ ಬಳಿ ಬಂದು ಕ್ಷಮೆ ಕೇಳಿದರು. ಆ ಸಿನಿಮಾದಿಂದ ನನಗೆ ಒಳ್ಳೆಯ ಹೆಸರು ಬಂತು." ಎಂದಿದ್ದಾರೆ.


Click it and Unblock the Notifications











