ನಟಿ ಭಾನುಪ್ರಿಯಾಗೆ ಮೆಮೊರಿ ಲಾಸ್ ಸಮಸ್ಯೆ: ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟ ಬಹುಭಾಷಾ ನಟಿ

ಹಿರಿಯ ನಟಿ ಭಾನುಪ್ರಿಯಾ ಮೆಮೊರಿ ಲಾಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದ್ಕಾಲದಲ್ಲಿ ಬಹುಭಾಷಾ ನಟಿಯಾಗಿ ಮೋಡಿ ಮಾಡಿದ ಚೆಲುವೆ ನಂತರ ಸೈಲೆಂಟ್ ಆಗಿಬಿಟ್ಟಿದ್ದರು. ತಮ್ಮ ವಿಭಿನ್ನ ನಟನೆ ಹಾಗೂ ಅದ್ಭುತ ನೃತ್ಯದಿಂದ ಕಮಾಲ್ ಮಾಡಿದ್ದರು. ಕನ್ನಡ ಸಿನಿಮಾಗಳಲ್ಲೂ ಭಾನು ಛಾಪೂ ಮೂಡಿಸಿದ್ದರು.

ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಜೋಡಿಯಾಗಿ 'ರಸಿಕ' ಚಿತ್ರದಲ್ಲಿ ಭಾನುಪ್ರಿಯಾ ನಟಿಸಿದ್ದರು. 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದರು. ಪತಿಯ ಅಗಲಿಕೆ ನಂತರ ಭಾನು ಪ್ರಿಯಾ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿತ್ತು. ಬಹಳ ದಿನಗಳ ನಂತರ ಸಂದರ್ಶನವೊಂದರಲ್ಲಿ ಮಾತನಾಡಿರುವ ಹಿರಿಯ ನಟಿ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಇನ್ನು ತಮ್ಮ ಬಗೆಗಿನ ಕೆಲ ವದಂತಿಗಳಿಗೂ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಎರಡು ಸಿನಿಮಾಗಳಲ್ಲಿ ಭಾನುಪ್ರಿಯಾ ನಟಿಸುತ್ತಿದ್ದಾರೆ. ಪೋಷಕ ನಟಿಯಾಗಿ ತಮಿಳು, ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಮೊರಿ ಲಾಸ್ ಕಾರಣಕ್ಕೆ ಡ್ಯಾನ್ಸ್ ಸ್ಕೂಲ್ ಶುರು ಮಾಡಬೇಕು ಕನಸು ಕೂಡ ನೆರವೇರುತ್ತಿಲ್ಲ ಎಂದಿದ್ದಾರೆ.

ಮೆಮೊರಿ ಲಾಸ್ ಸಮಸ್ಯೆ ಇದೆ

ಮೆಮೊರಿ ಲಾಸ್ ಸಮಸ್ಯೆ ಇದೆ

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಟಿ ಭಾನುಪ್ರಿಯಾ ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ನನಗೆ ಮೆಮೊರಿ ಲಾಸ್ ಸಮಸ್ಯೆ ಎದುರಾಗಿದೆ. ನಮ್ಮ ಪತಿ ಮರಣದ ನಂತರ ಈ ಸಮಸ್ಯೆಯಿಂದ ಬಳಲುತ್ತಿದ್ದೀನಿ. ಮುಖ್ಯವಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಮೆಮೋರಿ ಲಾಸ್ ಆಗಿದೆ. ಕಳೆದ 2 ವರ್ಷಗಳಿಂದ ಈ ಸಮಸ್ಯೆ ಎದುರಾಗಿದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲೂ ನಟಿಸ್ತಿಲ್ಲ" ಎಂದು ಭಾನುಪ್ರಿಯಾ ವಿವರಿಸಿದ್ದಾರೆ.

ಡ್ಯಾನ್ಸ್ ಸ್ಕೂಲ್ ಕನಸು ಈಡೇರುತ್ತಿಲ್ಲ

ಡ್ಯಾನ್ಸ್ ಸ್ಕೂಲ್ ಕನಸು ಈಡೇರುತ್ತಿಲ್ಲ

"ಡೈಲಾಗ್ಸ್ ನೆನಪಿನಲ್ಲಿ ಉಳಿಯುತ್ತಿಲ್ಲ. ಡ್ಯಾನ್ಸ್‌ ಪಟ್ಟುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಡ್ಯಾನ್ಸ್ ಪರ್ಫಾರ್ಮೆನ್ಸ್‌ ಮಾಡಲು ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ಡ್ಯಾನ್ಸ್ ಸ್ಕೂಲ್ ಶುರು ಮಾಡಬೇಕು ಎನ್ನುವ ಆಸೆ ಈಡೇರುತ್ತಿಲ್ಲ. ತಮಿಳು ಸಿನಿಮಾ ಶೂಟಿಂಗ್ ವೇಳೆ ಡೈಲಾಗ್ಸ್ ಎಲ್ಲಾ ಮರೆತು ಹೋಗಿ ಬ್ಲಾಂಕ್ ಆಗಿಬಿಟ್ಟಿದ್ದೆ. ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ"

ಡಿವೋರ್ಸ್ ವದಂತಿ ಸುಳ್ಳು

ಡಿವೋರ್ಸ್ ವದಂತಿ ಸುಳ್ಳು

1998ರಲ್ಲಿ ಭಾನುಪ್ರಿಯಾ ಸಿನಿಮಾಟೋಗ್ರಫರ್ ಆದರ್ಶ್ ಕೌಶಲ್ ಕೈ ಹಿಡಿದಿದ್ದರು. 2005ರಲ್ಲಿ ಡಿವೋರ್ಸ್ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಭಾನುಪ್ರಿಯಾ "ನಾನು ನನ್ನ ಪತಿ ಚೆನ್ನಾಗಿಯೇ ಇದ್ದೆವು. ನಾವು ಇಬ್ಬರು ಬೇರೆ ಬೇರೆ ಕಡೆ ವಾಸ ಮಾಡುತ್ತಿದ್ದೆವು ಅಷ್ಟೇ. ಡಿವೋರ್ಸ್ ಆಗಿತ್ತು ಎನ್ನುವುದೆಲ್ಲಾ ಸುಳ್ಳು ವದಂತಿ" ಎಂದಿದ್ದಾರೆ.

ಭಾನುಪ್ರಿಯಾ ಕನ್ನಡ ಚಿತ್ರಗಳು

ಭಾನುಪ್ರಿಯಾ ಕನ್ನಡ ಚಿತ್ರಗಳು

ಮಗಳು ಲಂಡನ್‌ನಲ್ಲಿ ಓದುತ್ತಿದ್ದಾಳೆ. ಆಕೆ ಕೂಡ ಹೆಚ್ಚು ಸಿನಿಮಾಗಳನ್ನು ನೋಡುತ್ತಾಳೆ. ಆದರೆ ಆಕೆಗೆ ಚಿತ್ರರಂಗಕ್ಕೆ ಬರುವ ಆಸೆ ಇಲ್ಲ. ಚಿತ್ರರಂಗ ನನಗೆ ಸಾಕಷ್ಟು ಕೊಟ್ಟಿದೆ. ಜನ ಇವತ್ತಿಗೂ ನನ್ನನ್ನು ಗುರುತಿಸುತ್ತಾರೆ. ನಾನು ಇತ್ತೀಚೆಗೆ ಸಿನಿಮಾಗಳಲ್ಲಿ ನಟಸ್ತಿಲ್ಲ. ಒಳ್ಳೆ ಪಾತ್ರಗಳು ಸಿಕ್ಕರೆ ನಟಿಸಬೇಕು ಎಂದುಕೊಂಡಿದ್ದೇನೆ. ಸುಮ್ನೆ ಮೂರ್ನಾಲ್ಕು ದಿನ ಶೂಟಿಂಗ್, ಸಣ್ಣದಾಗಿ ತಾಯಿ ರೋಲ್ ಅಂತ ಇದ್ದರೆ ನಟಿಸುವುದಿಲ್ಲ. ನಟನೆಗೆ ಅವಕಾಶ ಇರುವ ಪಾತ್ರ ಸಿಕ್ಕಿದರೆ ನಟಿಸ್ತಿನಿ" ಎಂದು ಭಾನುಪ್ರಿಯಾ ಹೇಳಿದ್ದಾರೆ. ಕನ್ನಡದಲ್ಲಿ 'ರಸಿಕ' ನಂತರ 'ದೇವರ ಮಗ', 'ಸಿಂಹಾದ್ರಿಯ ಸಿಂಹ', 'ಮೇಷ್ಟ್ರು' ಸಿನಿಮಾಗಳಲ್ಲಿ ನಟಿಸಿದ್ದರು. 'ಛತ್ರಪತಿ' ಕನ್ನಡದಲ್ಲಿ ಭಾನುಪ್ರಿಯ ನಟಿಸಿದ ಕೊನೆಯ ಸಿನಿಮಾ.

More from Filmibeat

English summary
Senior Actress Bhanupriya Opens Up About Her memory loss Issues. she revealed shocking secrets about her personal life in Recent Interview. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X