Pramila Rani: ಚಾನ್ಸ್ ಕೊಟ್ಟು ಗೆಸ್ಟ್ ಹೌಸ್‌ಗೆ ಕರೆದ್ರು.. ಕಹಿ ಅನುಭವ ಬಿಚ್ಚಿಟ್ಟ ಹಿರಿಯ ನಟಿ
ಚಿತ್ರರಂಗದಲ್ಲಿರುವ ಪಾತ್ರಕ್ಕಾಗಿ ಪಲ್ಲಂಗ ಎನ್ನುವ ಹೀನಾ ಸಂಸ್ಕೃತಿ ಬಗ್ಗೆ ಸಾಕಷ್ಟು ನಟಿಯರು ಇತ್ತೀಚೆಗೆ ಮಾತನಾಡುತ್ತಿದ್ದಾರೆ. ಮೀಟು ಅಭಿಯಾನದ ಅಡಿಯಲ್ಲಿ ಹಲವರು ತಮಗಾದ ಕಹಿ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ. ಇಂತಹ ಘಟನೆ ನನಗೂ ಎದುರಾಗಿತ್ತು ಎಂದು ತೆಲುಗಿನ ಹಿರಿಯ ನಟಿ ಪ್ರಮೀಳಾ ರಾಣಿ ಹೇಳಿದ್ದಾರೆ.
ತೆಲುಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಮೀಳಾ ರಾಣಿ ತಮ್ಮ ಜೀವನದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಬಾಹುಬಲಿ ಹಾಗೂ ವಕೀಲ್ ಸಾಬ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಮೀಳಾ ರಾಣಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಪ್ರಮೀಳಾ 45 ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿದ್ದಾರೆ.

ದಶಕಗಳ ಹಿಂದೆ ಪ್ರಮೀಳಾ ರಾಣಿ ಪೋಷಕ ಕಲಾವಿದೆಯಾಗಿ ಒಳ್ಳೆ ಪಾತ್ರಗಳಲ್ಲಿ ಮಿಂಚಿದ್ದರು. ಕಂಠದಾನ ಕಲಾವಿದೆಯಾಗಿ ಮಾತ್ರವಲ್ಲದೇ ಕಿರುತೆರೆಯಲ್ಲೂ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್, ಪ್ರಭಾಸ್‌ರಂತಹ ಸ್ಟಾರ್ ನಟರಿಗೆ ಅಜ್ಜಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ದಶಕಗಳ ಹಿಂದೆಯೇ ತಮಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು ಎಂದು ಪ್ರಮೀಳಾ ರಾಣಿ ಹೇಳಿದ್ದಾರೆ.
14ನೇ ವಯಸ್ಸಿನಲ್ಲೇ ಪ್ರಮೀಳಾ ರಾಣಿ ಮದುವೆ ನಡೆದಿತ್ತು. ಆದರೆ ಆಕೆಗೆ ಮಕ್ಕಳಾಗುವುದಿಲ್ಲ ಅಂತ ಗೊತ್ತಾಗಿ ಪತಿ ಬಿಟ್ಟು ಹೋಗಿಬಿಟ್ಟನಂತೆ. ಕೆಲ ದಿನಗಳ ನಂತರ 2ನೇ ಮದುವೆ ಮಾಡಿಕೊಂಡರು. ಈಕೆಗೆ 23 ವರ್ಷ ವಯಸ್ಸಾಗಿದ್ದಾಗ 2ನೇ ಪತಿ ಕೊನೆಯುಸಿರೆಳೆದಿದ್ದರು. ಬಳಿಕ ಮತ್ತೆ ಒಂಟಿಯಾಗಿಬಿಟ್ಟರು. ಅಂತಹ ಸಮಯದಲ್ಲೇ ಕುಟುಂಬ ಜವಾಬ್ದಾರಿ ಹೊರಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.
ಒಮ್ಮೆ ಒಂದು ಸಿನಿಮಾ ಅವಕಾಶ ನೀಡಿ ಬಳಿಕ ಗೆಸ್ಟ್ ಹೌಸ್‌ಗೆ ಬರೋಕೆ ಹೇಳಿದರು ಎಂದು ಹಿರಿಯ ನಟಿ ಪ್ರಮೀಳಾ ರಾಣಿ ಆ ಕಹಿ ಅನುಭವ ಹಂಚಿಕೊಂಡಿದ್ದಾರೆ. ಆಡಿಷನ್ ಕೊಟ್ಟು ಪಾತ್ರಕ್ಕೆ ಆಯ್ಕೆ ಆಗಿದ್ದೆ. ಬಳಿಕ ಮನೆಗೆ ಬಂದಮೇಲೆ ಫೋನ್ ಮಾಡಿ ಮ್ಯಾನೇಜರ್ ನೀವು ಗೆಸ್ಟ್ ಹೌಸ್‌ಗೆ ಬರಬೇಕು. ಯಾರೂ ನಿಮ್ಮನ್ನು ನೋಡಬೇಕು ಎಂದರು. ಆಗ ನಾನು "ಆಡಿಷನ್ ಆಯ್ತು. ಎಲ್ಲರೂ ನೋಡಿದ್ರಿ, ಆಯ್ಕೆ ಆಯ್ತು. 3 ದಿನ ಕಾಲ್‌ಶೀಟ್ ಫಿಕ್ಸ್ ಆಯ್ತು ಮತ್ತೆ ಯಾಕೆ ಬರಬೇಕು" ಎಂದೆ.
"ನಿರ್ದೇಶಕರು ಬರೋಕೆ ಹೇಳಿದ್ದಾರೆ, ಅಂದಾಗ ಆಕ್ಟಿಂಗ್, ಶೂಟಿಂಗ್ ಅಂದ್ರೆ ಬರ್ತೀನಿ, ಅದು ಬಿಟ್ಟು ಗೆಸ್ಟ್ ಹೌಸ್‌ಗೆ ನಾನು ಬರಲ್ಲ. ಒಂದು ವೇಳೆ ಸರಿಯಾಗಿ ನಟಿಸಲಿಲ್ಲ ಅಂದ್ರೆ ಸಿನಿಮಾದಿಂದ ತೆಗೆದು ಹಾಕಿಬಿಡಿ. ಆದರೆ ಇಂಥದ್ದಕ್ಕೆಲ್ಲ ಬರಲ್ಲ ಎಂದು ಹೇಳಿಬಿಟ್ಟೆ" ಎಂದು ಪ್ರಮೀಳಾ ರಾಣಿ ವಿವರಿಸಿದ್ದಾರೆ.
65 ವರ್ಷ ವಯಸ್ಸಿನ ಪ್ರಮೀಳಾ ದೇವಿ ಕುಡಿತ ಚಟ ಕಲಿತ್ತಿದ್ದಂರಂತೆ. ನೀವು ಬಹಳ ಸಣ್ಣ ಇದ್ದೀರಾ? ದಪ್ಪ ಆಗಬೇಕು. ಆಗ ತಾಯಿ ಪಾತ್ರಗಳು ದೊರಕುತ್ತದೆ. ಬಿಯರ್ ಕುಡಿದರೆ ದಪ್ಪ ಆಗ್ತೀರಾ ಅಂತ ಯಾರೋ ಹೇಳಿದರು. ಅವರ ಮಾತು ಕೇಳಿ ಕುಡಿಯುತ್ತಿದ್ದೆ. ಆಮೇಲೆ ಅದು ತಪ್ಪು ಎಂದು ಗೊತ್ತಾಗಿ ಬಿಟ್ಟುಬಿಟ್ಟೆ ಎಂದು ಪ್ರಮೀಳಾ ರಾಣಿ ಹೇಳಿದ್ದಾರೆ.
ಇನ್ನು ಸ್ನೇಹಿತೆ ವಿಜಯ ವಾಣಿ ಎಂಬುವವರನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡೆ. ಕೂಡಿಟ್ಟಿದ್ದ ಹಣ ಎಲ್ಲಾ ಹೋಯಿತು ಎಂದು ಅಲವತ್ತುಕೊಂಡಿದ್ದಾರೆ. ಹಿರಿಯ ನಟಿ ಪ್ರಮಿಳಾ ರಾಣಿ ಹೇಳಿಕೆ ಈಗ ವೈರಲ್ ಆಗುತ್ತಿದೆ. ಆಕೆಯ ವಯಸ್ಸು 60 ದಾಟಿದ್ದು ಇತ್ತೀಚೆಗೆ ಧಾರಾವಾಹಿಗಳಲ್ಲಿ ನಟಿಸುತ್ತಿಲ್ಲ. ಕೇವಲ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದೇನೆ ಎಂದಿದ್ದಾರೆ. ನನಗೆ ಮಕ್ಕಳಾಗುವುದಿಲ್ಲ ಎಂದು ಮೊದಲ ಪತಿ ಬಿಟ್ಟು ಹೋದರು 2 ಮದುವೆ ಆಗಿ ಮೂವರು ಮಕ್ಕಳು ಹುಟ್ಟಿದ್ದು ಎಂದು ವಿವರಿಸಿದ್ದಾರೆ.


Click it and Unblock the Notifications











