ಮತ್ತೆ ಮತ್ತೆ ಸೋಲು.. ಅದ್ಯಾಕೋ ಶ್ರೀಲೀಲಾ ಹಾಗೂ ಕೃತಿ ಶೆಟ್ಟಿ ನಸೀಬು ಚೆನ್ನಾಗಿಲ್ಲ

ಸ್ಟಾರ್ ನಟಿ ಆಗಿಬಿಡುವುದು ಅಷ್ಟು ಸುಲಭವಲ್ಲ. ಅವಕಾಶಗಳು ಸಿಕ್ಕರೂ ಕೆಲವರಿಗೆ ಸಕ್ಸಸ್ ಮರೀಚಿಕೆ ಆಗಿಬಿಡುತ್ತದೆ. ಒಂದೋ ಎರಡೋ ಸಿನಿಮಾ ಸೋತ್ರೆ ಪರವಾಗಿಲ್ಲ. ಸಾಲು ಸಾಲಾಗಿ ನಟಿಸಿದ ಸಿನಿಮಾಗಳೆಲ್ಲಾ ಮಕಾಡೆ ಮಲಗಿದರೆ ಹೇಗೆ? ಶ್ರೀಲೀಲಾ ಹಾಗೂ ಕೃತಿ ಶೆಟ್ಟಿ ವ್ಯಥೆ ಕೇಳೋರು ಯಾರು?

'ಉಪ್ಪೆನ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಕೃತಿ ಶೆಟ್ಟಿ ಮೋಡಿ ಮಾಡಿದ್ದರು. ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಆ ಬಳಿಕ ಅವಕಾಶಗಳ ಸುರಿಮಳೆ ಆಯಿತು. ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. ನಟಿಸಿದ ಸಿನಿಮಾಗಳೆಲ್ಲಾ ಸೋಲಿನ ಹಾದಿ ಹಿಡಿದವು. ಮೊನ್ನೆ ಮೊನ್ನೆ ಬಿಡುಗಡೆಯಾದ 'ಲವ್ ಇನ್ಶುರೆನ್ಸ್ ಕಂಪನಿ' ಸಿನಿಮಾ ಕೂಡ ನಿರಾಸೆ ಮೂಡಿಸಿದೆ.

Setbacks Continue for Krithi Shetty and Sreeleela Despite Back-to-Back Opportunities

ವಿಘ್ನೇಶ್ ಶಿವನ್ ನಿರ್ಮಿಸಿ, ನಿರ್ದೇಶಿಸಿರುವ 'ಲವ್ ಇನ್ಶುರೆನ್ಸ್ ಕಂಪನಿ' ಚಿತ್ರ ಬಹಳ ನಿರೀಕ್ಷೆ ಹುಟ್ಟಾಕ್ಕಿತ್ತು. ಕಾರಣ ಪ್ರದೀಪ್ ರಂಗನಾಥನ್ ನಟಿಸಿದ 4ನೇ ಸಿನಿಮಾ ಇದು. ಬ್ಯಾಕ್ ಟು ಬ್ಯಾಕ್ ಮೂರು 100 ಕೋಟಿ ರೂ. ಕ್ಲಬ್ ಸಿನಿಮಾಗಳನ್ನು ಕೊಟ್ಟಿದ್ದ ಪ್ರದೀಪ್ ಮತ್ತೊಂದು ಹಿಟ್ ನಿರೀಕ್ಷಿಸಿದ್ದರು. ಪ್ರದೀಪ್ ಜೊತೆ ನಟಿಸಿದ್ರೆ, ಗೆಲ್ತೀನಿ ಎಂದುಕೊಂಡಿದ್ದ ಕೃತಿ ಲೆಕ್ಕಚಾರವೂ ತಪ್ಪಿದೆ. ಸಿನಿಮಾ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸಾಫೀಸ್‌ನಲ್ಲಿ ಕುಂಟುತ್ತಿದೆ.

ಕೃತಿ ಶೆಟ್ಟಿ ಮಾತ್ರವಲ್ಲ, ಶ್ರೀಲೀಲಾ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಬೆಂಗಳೂರು ಬೆಡಗಿಯ ಯಾವುದೇ ಸಿನಿಮಾ ಗೆಲ್ತಿಲ್ಲ. ಇತ್ತೀಚೆಗೆ ಪವನ್ ಕಲ್ಯಾಣ್ ಜೊತೆ ನಟಿಸಿದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಕೂಡ ಕೈಕೊಟ್ಟಿತ್ತು. ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿ ತೆಲುಗು ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಬಹಳ ಬೇಗ ಕ್ರೇಜ್ ಸೃಷ್ಟಿಸಿಕೊಂಡರು. ಬಾಲಕೃಷ್ಣ, ಮಹೇಶ್ ಬಾಬು, ರವಿತೇಜಾ ಜೊತೆ ನಟಿಸೋ ಅವಕಾಶ ಪಡೆದುಕೊಂಡರು. ಆದರೆ ಪ್ರಯೋಜನವಾಗಲಿಲ್ಲ.

ಒಂದೆರಡು ಸಿನಿಮಾಗಳು ಗೆದ್ರು ಕ್ರೆಡಿಟ್ ಸಿಗಲಿಲ್ಲ. ಒಳ್ಳೆ ಡ್ಯಾನ್ಸರ್ ಎನ್ನುವ ಹೆಸರು ಮಾತ್ರ ಶ್ರೀಲೀಲಾ ಧಕ್ಕಿಸಿಕೊಂಡಿದ್ದಾರೆ. ತೆಲುಗು ಬಳಿಕ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ ತಮಿಳಿನ 'ಪರಾಶಕ್ತಿ' ಸಿನಿಮಾ ಕೂಡ ಕೈ ಹಿಡಿಯಲಿಲ್ಲ. ಟಾಲಿವುಡ್, ಕಾಲಿವುಡ್ ಬಳಿಕ ಈಗ ಬಾಲಿವುಡ್ ಅಂಗಳಕ್ಕೆ ಶ್ರೀಲೀಲಾ ಜಿಗಿದಿದ್ದಾರೆ.

ನಟಿಸಿದ ಒಂದೆರಡು ಸಿನಿಮಾಗಳು ಸೋತುಬಿಟ್ರೆ, ಚಿತ್ರರಂಗದಲ್ಲಿ ಐರನ್ ಲೆಗ್ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ಆದರೆ ಶ್ರೀಲೀಲಾ ಹಾಗೂ ಕೃತಿ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಒಂದೊಳ್ಳೆ ಬ್ರೇಕ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. 'ಲವ್ ಇನ್ಶುರೆನ್ಸ್ ಕಂಪನಿ' ಬಳಿಕ 'ಜಿನೀ' ಎಂಬ ಚಿತ್ರದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.

'ಪುಷ್ಪ'- 2 ಚಿತ್ರದ 'ಕಿಸ್ಸಿಕ್' ಸ್ಪೆಷಲ್ ಸಾಂಗ್ ಶ್ರೀಲೀಲಾ ಹವಾ ಹೆಚ್ಚಿಸಿತ್ತು. ಬಿಂದಾಸ್ ಡ್ಯಾನ್ಸ್ ನಂಬರ್‌ನಲ್ಲಿ ಕುಣಿದ ಚೆಲುವೆ ಬಾಲಿವುಡ್ ಫಿಲ್ಮ್ ಮೇಕರ್ಸ್ ಕಣ್ಣಿಗೆ ಬಿದ್ದಿದ್ದರು. ಸದ್ಯ ಅನುರಾಗ್ ಬಸು ನಿರ್ದೇಶನದ ಹಿಂದಿ ಚಿತ್ರದಲ್ಲಿ ಶ್ರೀ ಬಣ್ಣ ಹಚ್ಚಿದ್ದಾರೆ. ಧನುಷ್ ನಟನೆಯ ಮುಂದಿನ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ನಿತಿನ್ ಜೊತೆ 'ರಾಬಿನ್ ಹುಡ್', 'ರವಿತೇಜಾ' ಜೊತೆ 'ಮಾಸ್ ಜಾತರ', ಕಿರೀಟಿ ಜೊತೆ 'ಜ್ಯೂನಿಯರ್' ಇತ್ತೀಚೆಗೆ ಶ್ರೀಲೀಲಾ ನಟಿಸಿದ ಸಿನಿಮಾಗಳು. ಆದರೆ ಯಾವುದೇ ಸಿನಿಮಾ ಗೆಲ್ಲಲಿಲ್ಲ.

ತೆಲುಗಿನಲ್ಲಿ ಅವಕಾಶಗಳು ಹೆಚ್ಚಾದಂತೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದನ್ನು ಶ್ರೀಲೀಲಾ ನಿಲ್ಲಿಸಿಬಿಟ್ಟರು. 'ಕಿಸ್', 'ಭರಾಟೆ', 'ಬೈಟು ಲವ್' ಕನ್ನಡದಲ್ಲಿ ಆಕೆ ನಟಿಸಿದ 3 ಸಿನಿಮಾಗಳು. 'ಜೇಮ್ಸ್' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಡ್ಯಾನ್ಸ್ ಮಾಡಿದ್ದರು. ನಟನೆಯ ಜೊತೆ ಜೊತೆಗೆ ಇತ್ತೀಚೆಗೆ ಶ್ರೀಲೀಲಾ ಎಂಬಿಬಿಎಸ್ ಮುಗಿಸಿದ್ದಾರೆ.

More from Filmibeat

Read more about: krithi shetty sreeleela actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X