ಸಮಂತಾ ಅಂತಹ ಹುಡುಗಿ ಸಿಕ್ಕರೆ ಮದುವೆ ಆಗ್ತೀನಿ ಎಂದ ತೆಲುಗು ನಟ.!
'ಸಮಂತಾ ಅಂತಹ ಹುಡುಗಿ ಸಿಕ್ಕರೆ ಖಂಡಿತ ಮದುವೆ ಆಗ್ತೀನಿ' - ಹೀಗಂತ ಯಾರೋ ಅಭಿಮಾನಿ ಹೇಳಿಲ್ಲ. ಬದಲಾಗಿ ತೆಲುಗಿನ ನಟ ಶರ್ವಾನಂದ್ ಆಡಿರುವ ಮಾತು.!
'ಜಾನು' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಮಂತಾ ಮತ್ತು ಶರ್ವಾನಂದ್ ಬಿಜಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಈ ಮಧ್ಯೆ ''ತೆಲುಗಿನ 'ಮಜಿಲಿ' ಚಿತ್ರದಲ್ಲಿನ ಸಮಂತಾ ಅಂತಹ ಹುಡುಗಿ ಸಿಕ್ಕರೆ ಮದುವೆ ಆಗ್ತೀನಿ'' ಅಂತ ಹೇಳಿ ತೆಲುಗು ನಟ ಶರ್ವಾನಂದ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಅಸಲಿಗೆ, ಶರ್ವಾನಂದ್ ಗೆ 'ಮಜಿಲಿ' ಚಿತ್ರದಲ್ಲಿ ಸಮಂತಾ ಪೋಷಿಸಿದ್ದ ಪಾತ್ರ ಸಿಕ್ಕಾಪಟ್ಟೆ ಇಷ್ಟ. 'ಮಜಿಲಿ' ಚಿತ್ರದಲ್ಲಿ ನಾಗ ಚೈತನ್ಯ ಪತ್ನಿಯಾಗಿ ಸಮಂತಾ ನಟಿಸಿದ್ದರು. ಸಿನಿಮಾದಲ್ಲಿ ಪತಿಯನ್ನ ಖುಷಿಯಾಗಿ ಇಡಲು ಸಮಂತಾ ಮಾಡುವ ಸಾಹಸ ಒಂದೆರಡಲ್ಲ. ಅಂತಹ ಹುಡುಗಿ ತಮಗೆ ನಿಜ ಬದುಕಿನಲ್ಲಿ ಬಾಳಸಂಗಾತಿಯಾಗಿ ಸಿಗಬೇಕು ಅನ್ನೋದು ಶರ್ವಾನಂದ್ ಆಸೆ.
ಅಂದ್ಹಾಗೆ, ಶರ್ವಾನಂದ್ ಮತ್ತು ಸಮಂತಾ ಅಭಿನಯದ ಚಿತ್ರ 'ಜಾನು'. ತಮಿಳಿನ '96' ಚಿತ್ರದ ರೀಮೇಕ್ ಇದಾಗಿದ್ದು, ಚಿತ್ರಕ್ಕೆ ಸಿ.ಪ್ರೇಮ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ದಿಲ್ ರಾಜು ಬಂಡವಾಳ ಹಾಕಿದ್ದಾರೆ.

ಬಿಗ್ ಓಪನ್ನಿಂಗ್ ಪಡೆದುಕೊಳ್ಳದ 'ಜಾನು' ಬಾಕ್ಸ್ ಆಫೀಸ್ ಕಲೆಕ್ಷನ್ ತುಂಬಾ ಡಲ್ ಆಗಿದೆ. ಎಲ್ಲೆಡೆ ಪ್ರಚಾರ ಚೆನ್ನಾಗಿ ಮಾಡುತ್ತಿದ್ದರೂ, ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು 'ಜಾನು'ನ ಕಣ್ತುಂಬಿಕೊಳ್ಳಲು ಥಿಯೇಟರ್ ಕಡೆ ಮುಖ ಮಾಡುತ್ತಿಲ್ಲ.


Click it and Unblock the Notifications











