39ವರ್ಷದ ಖ್ಯಾತ ಆಂಕರ್ ಜೊತೆ 56ನೇ ವರ್ಷದಲ್ಲಿ ಜೆಡಿ ಚಕ್ರವರ್ತಿ 2ನೇ ಮದುವೆ ? ಹೇಳಿದ್ದೇನು ರಾಮ್ ಗೋಪಾಲ್ ವರ್ಮಾ ಶಿಷ್ಯ?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್‌ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು.

ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ.

She Calls Me Guru Garu JD Chakravarthy Blasts Marriage Rumors with Vishnupriya

ಹೀಗಾಗಿ ಇವರ ವ್ಯೆಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಯಾರದಾದರೂ ಜೊತೆ ಚೂರು ಆತ್ಮೀಯವಾಗಿ ವರ್ತಿಸಿದರೆ ಸಾಕು, ಸಂಬಂಧ ಕಲ್ಪಿಸಿ ಬಿಡುತ್ತಾರೆ. ಉದಾಹರಣೆಗೆ ಜೆಡಿ ಚಕ್ರವರ್ತಿ ಮತ್ತು ವಿಷ್ಣುಪ್ರಿಯಾ ಭೀಮನೇನಿ ಅವರ ವಿಚಾರವನ್ನೇ ತೆಗೆದುಕೊಳ್ಳಿ.

ಹೌದು, ಜೆಡಿ ಚಕ್ರವರ್ತಿ ಅಲಿಯಾಸ್ ಜಗಪತಿ ಧರ್ಮ ಚಕ್ರವರ್ತಿ. ವಿಕ್ಷಿಪ್ತ ವಿಲಕ್ಷಣ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ನೆಚ್ಚಿನ ಶಿಷ್ಯ. ''ಶಿವ'' ಚಿತ್ರದ ಮೂಲಕ 1989ರಲ್ಲಿ ಚಿತ್ರರಂಗಕ್ಕೆ ಬಂದ ಜೆಡಿ ಚಕ್ರವರ್ತಿ ಇಲ್ಲಿಯವರೆಗೆ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ.

ಆದರೆ, ಇವತ್ತು ಕೂಡ ಇವರನ್ನು ಜನ ಗುರುತಿಸುವುದೇ ರಾಮ್ ಗೋಪಾಲ್ ವರ್ಮಾ ಅವರ ಮತ್ತೊಂದು ಕ್ಲಾಸಿಕ್ ''ಸತ್ಯ'' ಚಿತ್ರದ ಮೂಲಕವೇ. ''ಗುಲಾಬಿ''.. ''ಅನಗನಗ ಒಕ ರೋಜು''.. ''ಪ್ರೇಮ ಕಥಾ''.. ''ಮನಿ'' ಮುಂತಾದವು ಇವರ ಕೆಲ ಖ್ಯಾತ ಸಿನಿಮಾಗಳು.

ಇನ್ನು ಜೆಡಿ ಚಕ್ರವರ್ತಿ ಕೇವಲ ನಾಯಕ ಮಾತ್ರ ಅಲ್ಲ. ನಿರ್ದೇಶಕ-ನಿರ್ಮಾಪಕ ಮತ್ತು ಗಾಯಕ ಕೂಡ ಹೌದು. 2000ನೇ ಇಸ್ವಿಯ ಆಚೀಚೆ ನಿರ್ದೇಶನದತ್ತ ಒಲವು ಬೆಳೆಸಿಕೊಂಡ ಜೆಡಿ ಚಕ್ರವರ್ತಿ ''ದರ್ವಾಜಾ ಬಂದ್ ರಖೋ'' ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿಯ ಮೇಲೆ ಆಸೀನರಾದರು.

She Calls Me Guru Garu JD Chakravarthy Blasts Marriage Rumors with Vishnupriya

ಆ ನಂತರ ''ಡರ್ನಾ ಜರೂರಿ ಹೈ'' ಸೇರಿ 6-7 ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಇಂಥಾ ಜೆಡಿ ಚಕ್ರವರ್ತಿ 2016ರಲ್ಲಿ ಅನುಕೃತಿ ಶರ್ಮಾ ಅವರ ಜೊತೆ ಸದ್ದಿಲ್ಲದೇ ಮದುವೆಯ ಬಂಧನಕ್ಕೊಳಗಾಗಿದ್ದರು. ಸದ್ಯ ಇವರ ಈ ಮದುವೆ ಚರ್ಚೆಯಲ್ಲಿದೆ. ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿ ಪ್ರತ್ಯೇಕವಾಗಿ ಇಬ್ಬರು ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ.

ಇದೇ ಸಮಯದಲ್ಲಿ 56ರ ಹರೆಯದ ಜೆಡಿ ಚಕ್ರವರ್ತಿ 36-39 ವರ್ಷದ ತೆಲುಗಿನ ಖ್ಯಾತ ನಿರೂಪಕಿ ಮತ್ತು ''ಬಿಗ್ ಬಾಸ್'' ಸ್ಫರ್ಧಿ ವಿಷ್ಣುಪ್ರಿಯಾ ಭೀಮನೇನಿ ಅವರ ಜೊತೆ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಹೈದರಾಬಾದ್‌ನಲ್ಲಿ ತೇಲಿ ಬಿಡಲಾಗಿದೆ.

ಇನ್ನೂ ಜೆಡಿ ಚಕ್ರವರ್ತಿ ಮತ್ತು ವಿಷ್ಣುಪ್ರಿಯಾ ನಡುವೆ ಮೊದಲಿಂದ ತುಸು ಹೆಚ್ಚೇ ಆತ್ಮೀಯತೆ ಇದೆ. ಈ ಹಿಂದೆ ಹಲವು ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಇದೆ. ಈ ಹಿನ್ನೆಲೆ ಹಲವರು ಈ ಸುದ್ದಿಯನ್ನು ನಿಜಾ ಎಂದುಕೊಂಡಿದ್ಧಾರೆ. ಜೆಡಿ ಚಕ್ರವರ್ತಿಗೆ ಹೋದಲ್ಲಿ ಬಂದಲ್ಲಿ ಇದೇ ಪ್ರಶ್ನೆಯನ್ನು ಕೇಳಲು ಶುರು ಮಾಡಿದ್ದಾರೆ. ಇದೀಗ ಇದೇ ಪ್ರಶ್ನೆಗೆ ಜೆಡಿ ಚಕ್ರವರ್ತಿ ಸಮಾಧಾನದಿಂದ ಉತ್ತರ ನೀಡಿದ್ಧಾರೆ. ಸುದ್ದಿಯಲ್ಲಿ ಸತ್ಯಾಂಶ ಇಲ್ಲ ಎಂದಿದ್ದಾರೆ.

ಹೌದು, ಸದ್ಯ ಜೆಡಿ ಚಕ್ರವರ್ತಿ ಅಭಿನಯದ ''ಗಾಯಪಡ್ಡ ಸಿಂಹಂ'' ಎಂಬ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರಾರ್ಥ ಹಲವು ಸಂದರ್ಶನಗಳನ್ನು ಜೆಡಿ ಚಕ್ರವರ್ತಿ ನೀಡುತ್ತಿದ್ದಾರೆ. ಆ ಪೈಕಿ ಒಂದು ಸಂದರ್ಶನದಲ್ಲಿ ವಿಷ್ಣುಪ್ರಿಯಾ ಜೊತೆಗಿನ ತಮ್ಮ ಸಂಬಂಧದ ಕುರಿತು ಮಾತನಾಡಿದ್ಧಾರೆ.

ಈ ಕುರಿತು ಮಾತನಾಡಿರುವ ಜೆಡಿ ಚಕ್ರವರ್ತಿ ನನ್ನ ಮತ್ತು ವಿಷ್ಣುಪ್ರಿಯಾ ನಡುವೆ ಗುರು ಮತ್ತು ಶಿಷ್ಯೆಯ ಸಂಬಂಧ ಇದೆ ಎಂದು ಹೇಳಿದ್ದಾರೆ. ಅವಳು ನನಗೆ ಯಾವಾಗ ಕರೆ ಮಾಡಿದರೂ ಗುರುಗಳೇ ಎಂದೇ ಸಂಭೋಧಿಸುತ್ತಾಳೆ ಎಂದು ಹೇಳಿದ್ದಾರೆ.

ಮುಂದುವರೆದು ವಿಷ್ಣುಪ್ರಿಯಾ ಮಹಾಜ್ಞಾನಿ ಆಕೆಗೆ ನನ್ನಂತೆಯೇ ಬದುಕಿನ ಫಿಲಾಸಫಿ, ಜೀವನ ದರ್ಶನದ ಮೇಲೆ ಆಸಕ್ತಿ ಇದೆ. ನಮ್ಮ ನಡುವೆ ಚರ್ಚೆ ಅಥವಾ ಮಾತುಕತೆ ನಡೆದರೆ ಕೇವಲ ಈ ವಿಚಾರಕ್ಕೆ ಮಾತ್ರ ಸೀಮಿತವಾಗಿರುತ್ತೆ ಎಂದು ಹೇಳಿರುವ ಜೆಡಿ ಚಕ್ರವರ್ತಿ ನನ್ನ ಮತ್ತು ಅವಳ ನಡುವೆ ಪ್ರೇಮ ಸಂಬಂಧವಿದೆ ಎಂದು ಊಹಿಸುವುದು ಸಂಪೂರ್ಣ ತಪ್ಪು. ನಾನು ಆಕೆಯನ್ನು ಕೇವಲ ಒಬ್ಬ ವಿದ್ಯಾರ್ಥಿನಿಯಂತೆ ನೋಡುತ್ತೇನೆ. ಹೀಗಿರುವಾಗ ನಮ್ಮ ನಡುವೆ ಮದುವೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಇವೆಲ್ಲವೂ ರೋಚಕ ಥಂಬ್‌ನೇಲ್ ಮೂಲಕ ಪ್ರೇಕ್ಷಕರನ್ನು ತಮ್ಮ ಚಾನೆಲ್‌ನತ್ತ ಸೆಳೆಯಲು ಯೂಟ್ಯೂಬ್‌ನಲ್ಲಿ ಹೆಣೆಯಲಾಗುವ ಕಟ್ಟುಕಥೆಗಳು ಎಂದು ಹೇಳಿರುವ ಜೆಡಿ ಚಕ್ರವರ್ತಿ ಇಂತಹ ಸುದ್ದಿಗಳಿಂದ ನಾನು ವಿಚಲಿತನಾಗುವುದಿಲ್ಲ, ನನ್ನ ಮೇಲೆ ಇಂತಹ ಸುದ್ದಿಗಳು ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿದ್ದಾರೆ.

ಅಂದ್ಹಾಗೇ ವಿಷ್ಣುಪ್ರಿಯಾ ಕಳೆದ ಕೆಲ ದಿನಗಳಿಂದ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನು ಹಲವರಿಗೆ ಗೊತ್ತಿರುವಂತೆ ಇನ್‌ಸ್ಟಾಗ್ರಾಮ್ ಈಗ ಕೇವಲ ಸಾಮಾಜಿಕ ಜಾಲತಾಣ ಮಾತ್ರ ಅಲ್ಲ. ಬಿಸಿನೆಸ್ ಮಾಡೆಲ್ ಕೂಡ ಹೌದು.

399 ರೂಪಾಯಿ ಹಣ ನೀಡಿ ನೀವು ಚಂದಾದಾರರಾದರೆ ಮುಗೀತು. ಬೇರೆ ಯಾರು ನೋಡಿರದ.. ಬೇರೆ ಎಲ್ಲಿಯೂ ಸಿಗದ.. ನಿಮ್ಮ ನೆಚ್ಚಿನ ತಾರೆಯರ ಫೋಟೊಗಳನ್ನು ನೀವು ನೋಡಬಹುದು. ಸದ್ಯ ಈ ''ಸಬ್‌ಸ್ಕ್ರಿಪ್ಶನ್'' ಫೀಚರ್ ನಡಿ ವಿಷ್ಣುಪ್ರಿಯಾ ತಮ್ಮ ಅರೆಬೆತ್ತಲೆ ಫೋಟೊ ಹಂಚಿಕೊಳ್ಳುತ್ತಿದ್ಧಾರೆ ಎನ್ನುವ ಆರೋಪ ಇವರ ಮೇಲೆ ಮಾಡಲಾಗಿದೆ. ಜಯವಾಡದ ಸೂರ್ಯಾರಾವ್ ಪೇಟೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

English summary
JD Chakravarthy finally breaks his silence on marriage rumors with Vishnupriya Bhimeneni. Discover the truth behind their "Guru-Shishya" bond and why he calls the gossip "cruel."
Read more about: rumours jd chakravarthy tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X