ಆ ದಿನ ಬಸ್‌ನಲ್ಲಿ ಹೋಗ್ತಿದ್ದೇ, ನನಗಾಗ 15 ವರ್ಷ ; ಆ ವ್ಯಕ್ತಿ..! ಕರಾಳ ಅನುಭವ-ಕಣ್ಣೀರಾದ ಖ್ಯಾತ ನಟಿ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಕೆಲವರು ಮುಂದೆ ಬಂದು ತಮ್ಮ ಮೇಲಾದ ದೌರ್ಜನ್ಯದ ವಿರುದ್ದ ಹೋರಾಡುತ್ತಾರೆ, ಇನ್ನು ಕೆಲವರು ವ್ಯವಸ್ಥೆಯ ವಿರುದ್ದ ಹೋರಾಡಲು ಆ ಕ್ಷಣಕ್ಕೆ ...
ಸಾಧ್ಯವಾಗದೇ ಸುಮ್ಮನಾಗುತ್ತಾರೆ. ಕೇವಲ ಸಾಮಾನ್ಯ ಜನ ಮಾತ್ರವಲ್ಲ. ಈ ಕಾ*ಮುಕರ ಕೈಗೆ ಸಿಕ್ಕಿ ಚಿತ್ರರಂಗದಲ್ಲಿರುವ ಹಲವಾರು ನಾಯಕಿಯರು, ಮಹಿಳೆಯರು ಕೂಡ ನರಳಿದ್ದಾರೆ. ಉದಾಹರಣೆಗೆ ಲಕ್ಷ್ಮೀ ಮಂಚು. ಹೌದು, ಲಕ್ಷ್ಮೀ ಮಂಚು.. ಟಾಲಿವುಡ್ ನ ಬಹುಮುಖ ಪ್ರತಿಭೆ. ಖ್ಯಾತ ಸ್ಟಾರ್ ಮೋಹನ್ ಬಾಬು ಮುದ್ದಿನ ಮಗಳು.

ತನ್ನ ಅಭಿನಯ ಹಾಗೂ ಅಂದ ಚೆಂದದಿಂದನೇ ಅನೇಕರ ಹೃದಯವನ್ನ ಗೆದ್ದ ಲಕ್ಷ್ಮೀ ಮಂಚು ಕೆಲ ದಿನಗಳಿಂದ ಚಿತ್ರರಂಗದಿಂದ ದೂರ ಇದ್ದರು. ಸಮಾಜ ಸೇವೆಯಲ್ಲಿ ತಲ್ಲೀನರಾಗಿದ್ದರು. ''ಟೀಚ್ ಫಾರ್ ಚೇಂಜ್'' ಎಂಬ ಚಾರಿಟಿಯ ಮೂಲಕ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಲವು ಬೆಂಬಲ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು.
ಎರಡು ವರ್ಷಗಳ ನಂತರ ''ಆದಿ ಪರ್ವಂ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳಿ ಬಂದರು. ಈ ವರ್ಷ ಲಕ್ಷ್ಮೀ ಮಂಚು ಅಭಿನಯದ '' ದಕ್ಷ- ಎ ಡೆಡ್ಲಿ ಕಾನ್ಸ್ಪಿರೆಸಿ'' ಚಿತ್ರ ಬಿಡುಗಡೆಯಾಗಿದೆ.
ಇಂಥಾ ಲಕ್ಷ್ಮೀ ಮಂಚು ಸದ್ಯ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಕರಾಳ ದಿನವನ್ನು ನೆನೆದಿದ್ದಾರೆ. ಹೌಟರ್ ಪ್ಲೈಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಲಕ್ಷ್ಮೀ ಮಂಚು ನಾನು ಮೋಹನ್ ಬಾಬು ಅವರ ಮಗಳು, ಹೀಗಾಗಿ ಬಾಲ್ಯದಿಂದಲೇ ಸಹಜವಾಗಿಯೇ ನನ್ನ ಸುತ್ತ ಮುತ್ತ ತುಂಬಾನೇ ಸುರಕ್ಷಿತ ವಾತಾವರಣ ಇತ್ತು ಎಂದು ಹೇಳಿದ್ದಾರೆ.
ನನ್ನನ್ನೂ ಶಾಲೆಗೆ ದಿನನಿತ್ಯ ನಮ್ಮದೇ ಕಾರಿನಲ್ಲಿ ಕಳುಹಿಸಲಾಗುತ್ತಿತ್ತು, ನನ್ನ ಜೊತೆ ಅಂಗರಕ್ಷಕರು ಇರ್ತಿದ್ದರು.. ಕಾರಿನಲ್ಲಿ ನನ್ನ ತಾಯಿ ಕೂಡ ಇರ್ತಿದ್ದರು ಎಂದು ಹೇಳಿರುವ ಮಂಚು ಲಕ್ಷ್ಮಿ ಅದೊಂದು ದಿನ ಹತ್ತನೇ ತರಗತಿಯಲ್ಲಿದ್ದಾಗ ಹಾಲ್ ಟಿಕೆಟ್‌ನ ನಾನು ಶಾಲೆಯಲ್ಲಿ ಪಡೆಯಬೇಕಿತ್ತು. ಅವತ್ತು ಅನಿವಾರ್ಯವಾಗಿ ನಾನು ಸಾರ್ವಜನಿಕ ಸಾರಿಗೆ ಬಳಸುವಂತಹ ಪ್ರಸಂಗ ಎದುರಾಗಿತ್ತು ಎಂದು ಹೇಳಿದ್ದಾರೆ.

ಈ ಕುರಿತು ''ಹೌಟರ್ ಫ್ಲೈ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಲಕ್ಷ್ಮೀ ಮಂಚು, ಸಂದರ್ಭ ಅನಿವಾರ್ಯವಾದರೂ ಆ ಕ್ಷಣಕ್ಕೆ ನನಗೆ ಖುಷಿಯಿತ್ತು, ಯಾಕೆಂದರೆ ಬಸ್‌ನಲ್ಲಿ ನಾನು ಯಾವತ್ತು ಪ್ರಯಾಣ ಮಾಡಿರಲಿಲ್ಲ. ಹೀಗಾಗಿ ನಾನು ರೋಮಾಂಚನಗೊಂಡಿದ್ದೇ, ಖುಷಿಯಾಗಿದ್ದೇ, ಆದರೆ ನನ್ನ ದುರಾದೃಷ್ಟ, ಅವತ್ತು ಅಪರಿಚತ ವ್ಯಕ್ತಿಯೊಬ್ಬ.. ಮುಟ್ಟಬಾರದ ಜಾಗದಲ್ಲೆಲ್ಲಾ ನನ್ನ ಮುಟ್ಟಿದ ಎಂದು ಹೇಳಿದ್ದಾರೆ. ಆ ಕರಾಳ ದಿನ ನೆನೆದು ಭಾವುಕರಾಗಿದ್ದಾರೆ.
ಬೇಕು ಅಂತಲೇ ಆತ ನನ್ನನ್ನು ಮುಟ್ಟಿದ್ದನಾ..? ಗೊತ್ತಿಲ್ಲ. ಆದರೆ.. ಆ ಸಮಯದಲ್ಲಿ ನಾನು ದೂರ ಸರಿದೆ. ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ.. ನಾನು ಜಗಳ ಮಾಡಲಿಲ್ಲ. ಪ್ರಶ್ನೆ ಮಾಡಲಿಲ್ಲ ಎಂದು ಹೇಳಿರುವ ಲಕ್ಷ್ಮೀ ಮಂಚು ಆ ದಿನ ನಾನು ಶಾಲೆಯಲ್ಲಿ ಈ ವಿಚಾರವನ್ನು ನನ್ನ ಸ್ನೇಹಿತೆಯರ ಜೊತೆ ಚರ್ಚೆ ಮಾಡಿದ್ದೇ ಆಗ ಇದೆಲ್ಲ ಸಾಮಾನ್ಯ, ನಮಗೆ ದಿನನಿತ್ಯ ಇಂತಹ ಅನುಭವಗಳಾಗುತ್ತಾವೆ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.
ಇನ್ನು ಮೀಟೂ ಅಭಿಯಾನ ಶುರುವಾದಾಗ, ಹಲವರು ತಮ್ಮ ಕಹಿ ಅನುಭವ ಹಂಚಿಕೊಳ್ತಿದ್ದರು. ಆಗ ಅವರೆಲ್ಲರ ಮಾತು ಕೇಳಿ ನಾನು ಕುಸಿದು ಬೀಳುತ್ತಿದೆ. ಕಣ್ಣೀರು ಹಾಕುತ್ತಿದ್ದೆ ಎಂದು ಹೇಳಿರುವ ಲಕ್ಷ್ಮಿ ಮಂಚು, ಕೆಲ ಒಮ್ಮೆ ದೊಡ್ಡ ಮನೆತನದವರನ್ನೇ ಕೆಲವರು ಗುರಿಯಾಗಿಸಿಕೊಳ್ಳುತ್ತಾರೆ, ಯಾಕೆಂದರೆ.. ಏನೇ ಆದರೂ ನಾವು ಸಾರ್ವಜನಿಕವಾಗಿ ಆ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ ಎನ್ನುವ ಭಂಡ ಧೈರ್ಯ ಅವರಿಗೆ ಇರುತ್ತೆ ಎಂದು ಹೇಳಿದ್ದಾರೆ. ತಮ್ಮ ಮನೆಯಲ್ಲಿ 15,000 ಕಳ್ಳತನ ಆದಾಗ ಹೋದರೆ ಹೋಗಲಿ ಎಂದು ಸುಮ್ಮನಾಗಿದ್ದ ದಿನವನ್ನು ಕೂಡ ತಮ್ಮ ಈ ಮಾತುಗಳಿಗೆ ಉದಾಹರಣೆಯನ್ನಾಗಿ ನೀಡಿದ್ದಾರೆ.


Click it and Unblock the Notifications











