ತಾರಕ್ ರತ್ನ ಸ್ಥಿತಿ ಗಂಭೀರ: ಆಸ್ಪತ್ರೆಗೆ ಶಿವರಾಜ್ ಕುಮಾರ್, ಜೂ ಎನ್‌ಟಿಆರ್, ಬಾಲಕೃಷ್ಣ ಇತರರು

By ಫಿಲ್ಮಿಬೀಟ್ ಡೆಸ್ಕ್

ತೆಲುಗು ಸಿನಿಮಾ ನಟ ಹಾಗೂ ರಾಜಕಾರಣಿ ತಾರಕ್ ರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಕಾಣಲು ತೆಲುಗು ಚಿತ್ರರಂಗದ ಗಣ್ಯರು ಒಬ್ಬರ ಹಿಂದೊಬ್ಬರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ತೆಲುಗು ಚಿತ್ರರಂಗದ ಪ್ರತಿಷ್ಠಿತ ನಂದಮೂರಿ ಕುಟುಂಬ ಸದಸ್ಯರಾಗಿರುವ ನಂದಮೂರಿ ತಾರಕ್, ಎರಡು ದಿನಗಳ ಹಿಂದೆ ರಾಜಕೀಯ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಅನೆಕಲ್‌ನ ನಾರಾಯಣ ಹೃದಯಾಲಯ ಆಸ್ಕತ್ರೆಗೆ ರವಾನಿಸಿದ್ದು ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ತೀವ್ರ ಅಸ್ವಸ್ಥರಾಗಿರು ನಂದಮೂರಿ ತಾರಕ್ ಅವರನ್ನು ಕಾಣಲು ಕಳೆದ ಎರಡು ದಿನಗಳಿಂದಲೂ ಹಲವು ತೆಲುಗು ಚಿತ್ರರಂಗದ ತಾರೆಯರು, ರಾಜಕಾರಣಿಗಳು ಅನೆಕಲ್‌ನ ನಾರಾಯಣ ಹೃದಯಾಲಯಕ್ಕೆ ಆಗಮಿಸುತ್ತಲೇ ಇದ್ದಾರೆ.

ಜೂ ಎನ್‌ಟಿಆರ್, ಕಲ್ಯಾಣ್ ರಾಮ್, ಬಾಲಕೃಷ್ಣ

ಜೂ ಎನ್‌ಟಿಆರ್, ಕಲ್ಯಾಣ್ ರಾಮ್, ಬಾಲಕೃಷ್ಣ

ನಂದಮೂರಿ ತಾರಕ್‌ರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಕಳೆದೆರಡು ದಿನಗಳಿಂದಲೂ ಬೆಂಗಳೂರಿನಲ್ಲಿಯೇ ಇದ್ದು ತಾರಕ್ ರತ್ನ ಆರೋಗ್ಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ನಟ ಜೂ ಎನ್‌ಟಿಆರ್ ಹಾಗೂ ಅವರ ಸ್ವಂತ ಸಹೋದರ ಕಲ್ಯಾಣ್ ರಾಮ್ ಅವರುಗಳು ಇಂದು ಬೆಳಿಗ್ಗೆಯೇ ಬೆಂಗಳೂರಿಗೆ ಬಂದು ಸಹೋದರನ ಆರೋಗ್ಯ ವಿಚಾರಿಸಿದ್ದಾರೆ.

ಸ್ವಲ್ಪ ಸುಧಾರಿಸಿದ್ದಾರೆ: ಶಿವಣ್ಣ

ಸ್ವಲ್ಪ ಸುಧಾರಿಸಿದ್ದಾರೆ: ಶಿವಣ್ಣ

ಇನ್ನು ಕನ್ನಡದ ನಟ, ನಂದಮೂರಿ ಕುಟುಂಬದೊಟ್ಟಿಗೆ ಆಪ್ತ ಸಂಬಂಧ ಹೊಂದಿರುವ ಶಿವರಾಜ್ ಕುಮಾರ್ ಇಂದು ಆಸ್ಪತ್ರೆಗೆ ಭೇಟಿ ನೀಡಿ ತಾರಕ್ ರತ್ನ ಆರೋಗ್ಯ ಪರಿಸ್ಥಿತಿ ಕೇಳಿ ತಿಳಿದಿದ್ದು, ಬಾಲಕೃಷ್ಣ ಸೇರಿದಂತೆ ನಂದಮೂರಿ ಕುಟುಂಬದ ಇತರರಿಗೆ ಧೈರ್ಯದ ಮಾತುಗಳನ್ನಾಡಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ''ಚಿಕಿತ್ಸೆಗಳು ನಡೆಯುತ್ತಲೇ ಇವೆ. ನಿನ್ನೆಗೆ ಹೋಲಿಸಿದರೆ ಇಂದು ಸುಧಾರಿಸಿದ್ದಾರೆ. ಆದರೆ ಇನ್ನೂ ಎರಡು ದಿನಗಳ ಕಾಲ ಏನೂ ಹೇಳಲಾಗದ ಸ್ಥಿತಿ. ಆದರೆ ಈಗ ತುಸು ಸುಧಾರಿಸಿದ್ದಾರೆ'' ಎಂದಿದ್ದಾರೆ ಶಿವರಾಜ್ ಕುಮಾರ್.

ನಂದಮೂರಿ ಕುಟುಂಬ ನಮ್ಮ ಕುಟುಂಬ: ಶಿವಣ್ಣ

ನಂದಮೂರಿ ಕುಟುಂಬ ನಮ್ಮ ಕುಟುಂಬ: ಶಿವಣ್ಣ

''ತಾರಕ್ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರ ಕಣ್ಣು ಮೂವ್ ಆಗುತ್ತಿದೆ. ಯಾರು ಬರುತ್ತಿದ್ದಾರೆ ಹೋಗುತ್ತಿದ್ದಾರೆ ಎಲ್ಲವೂ ಅವರಿಗೆ ಗೊತ್ತಾಗುತ್ತಿದೆ. ಕೈ ಕಾಲು ಎಲ್ಲ ಲಘುವಾಗಿ ಶೇಕ್ ಆಗುತ್ತಿವೆ. ಮುಂದಿನ ಎರಡು ದಿನಗಳ ವರೆಗೆ ಏನೂ ಹೇಳಲಾಗದು ಎಂದು ವೈದ್ಯರು ಹೇಳಿದ್ದು, ಮುಂದೇನಾಗುತ್ತದೆ ನೋಡಬೇಕಿದೆ. ನಮ್ಮ ಫ್ಯಾಮಿಲಿಯೇ ಆಗಿರುವ ಕಾರಣ ನಾವು ಬಂದು ನೋಡಲೇ ಬೇಕು. ಅದು ನಮ್ಮ ಕರ್ತವ್ಯ'' ಎಂದಿದ್ದಾರೆ ಶಿವರಾಜ್ ಕುಮಾರ್.

ತಾರಕ್‌ ರತ್ನಗೆ ಏನಾಗಿತ್ತು?

ತಾರಕ್‌ ರತ್ನಗೆ ಏನಾಗಿತ್ತು?

ನಂದಮೂರಿ ತಾರಕ ರತ್ನ ಅವರು ಶುಕ್ರವಾರ ತಮ್ಮ ಸಹೋದರ ಸಂಬಂಧಿ, ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಅವರೊಟ್ಟಿಗೆ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ದರ್ಗಾ ಒಂದಕ್ಕೆ ನಾರಾ ಲೋಕೇಶ್, ತಾರಕ್ ರತ್ನ ಇತರರು ಭೇಟಿ ನೀಡಿದಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ಭಾರಿ ನೂಕು-ನುಗ್ಗಲು ಉಂಟಾಗಿ ಉಸಿರಾಟದಲ್ಲಿ ವ್ಯತ್ಯಯವಾಗಿ ತಾರಕ್ ರತ್ನ ಕುಸಿದು ಬಿದ್ದರು. ಅವರನ್ನು ಕುಪ್ಪಂನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆ ಬಳಿಕ ಅವರನ್ನು ಬೆಂಗಳೂರಿನ, ಅನೆಕಲ್ ಬಳಿಕ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಯ್ತು. ತಾರಕ್ ರತ್ನಗೆ ಹೃದಯಾಘಾತವಾಗಿ ಎನ್ನಲಾಗುತ್ತಿದ್ದು, ಕುಪ್ಪಂನಲ್ಲಿ ಆಸ್ಪತ್ರೆಗೆ ದಾಖಲಿಸಿದಾಗಲೇ ಅವರ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದ್ದು, ಈಗಲೂ ಅದೇ ಪರಿಸ್ಥಿತಿ ಮುಂದುವರೆದಿದೆ ಎನ್ನಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ತಾರಕ್ ಆರೋಗ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

More from Filmibeat

English summary
Shiva Rajkumar, Jr NTR, Nandamuri Balakrishna and others visited Hospital to see Nandamuri Tarak Rathna who has been admitted in Bengaluru hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X