ಕನ್ನಡ, ತಮಿಳು ಬಳಿಕ ತೆಲುಗಿನಲ್ಲೂ ಬಿಡುಗಡೆಯಾಗಲಿದೆ ಶಿವಣ್ಣನ 'ವೇದ'

ಪ್ಯಾನ್ ಇಂಡಿಯಾ ಟ್ರೆಂಡ್ ದೊಡ್ಡ ಮಟ್ಟದಲ್ಲಿ ಕ್ರೇಜ್ ಹೊಂದಿರುವ ಕಾರಣ ಈಗ ಬಿಡುಗಡೆಗೊಳ್ಳುತ್ತಿರುವ ಬಹುತೇಕ ಚಿತ್ರಗಳನ್ನು ನೆರೆ ರಾಜ್ಯದ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಕಳೆದ ವರ್ಷ ಡಬ್ ಆದ ಚಿತ್ರಗಳು ಬೇರೆ ರಾಜ್ಯಗಳಲ್ಲಿಯೂ ಉತ್ತಮ ಗಳಿಕೆ ಮಾಡಿದ ನಂತರವಂತೂ ಈ ಡಬಿಂಗ್ ಟ್ರೆಂಡ್ ತುಸು ಹೆಚ್ಚು ಮೈಲೇಜ್ ಪಡೆದುಕೊಂಡಿದ್ದು, ಯುವ ನಟರ ಚಿತ್ರಗಳೂ ಸಹ ಬೇರೆ ಭಾಷೆಗೆ ಡಬ್ ಆಗುತ್ತಿವೆ.

ಇನ್ನು ಸ್ಟಾರ್ ನಟರ ಚಿತ್ರಗಳೂ ಸಹ ಪರಭಾಷೆಗಳಿಗೆ ಡಬ್ ಆಗುತ್ತಿದ್ದು, ಈ ಸಾಲಿಗೆ ಶಿವ ರಾಜ್‌ಕುಮಾರ್ ನಟನೆಯ ವೇದ ಕೂಡ ಸೇರ್ಪಡೆಗೊಂಡಿದೆ. ಕಳೆದ ವರ್ಷದ ಡಿಸೆಂಬರ್ 23ರಂದು ಬಿಡುಗಡೆಗೊಂಡಿದ್ದ ವೇದ ಚಿತ್ರ ಕನ್ನಡ ಹಾಗೂ ತಮಿಳಿನಲ್ಲಿ ತೆರೆಗೆ ಅಪ್ಪಳಿಸಿತ್ತು. ಕನ್ನಡದಲ್ಲಿ ಸೂಪರ್ ಹಿಟ್ ಆದ ಈ ಚಿತ್ರ ತಮಿಳು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.

ಹೀಗೆ ಕನ್ನಡ ಮಾತ್ರವಲ್ಲದೇ ತಮಿಳಿಗೂ ಡಬ್ ಆಗಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡ ವೇದ ಚಿತ್ರ ಈಗ ತೆಲುಗಿಗೂ ಸಹ ಡಬ್ ಆಗುವ ಸುದ್ದಿ ಹೊರಬಿದ್ದಿದೆ. ಹೌದು, ವೇದ ಚಿತ್ರದ ತೆಲುಗು ವರ್ಷನ್‌ನ ಪೋಸ್ಟರ್ ಸಹ ಬಿಡುಗಡೆಗೊಂಡಿದ್ದು, ಚಿತ್ರ ಆದಷ್ಟು ಬೇಗ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Shiva Rajkumar starrer Vedha movie telugu version to release in theatres

ಹೆಣ್ಣು ಮಕ್ಕಳ ಮೇಲೆ ಜರುಗುವ ಕಿರುಕುಳದ ವಿರುದ್ಧ ನಡೆಯುವ ಸೇಡಿನ ಕಥೆಯನ್ನು ಹೊಂದಿದ್ದ ವೇದ ಚಿತ್ರಕ್ಕೆ ಕನ್ನಡ ಸಿನಿ ರಸಿಕರು ಫುಲ್ ಮಾರ್ಕ್ಸ್ ನೀಡಿದ್ದರು. ಇಂತಹ ಒಳ್ಳೆಯ ಕಥಾಹಂದರ ಇರುವ ಚಿತ್ರಗಳನ್ನು ವೀಕ್ಷಿಸಿ, ಇಂತಹ ಸಂದೇಶ ಇರುವ ಚಿತ್ರಗಳನ್ನು ನಿರ್ಮಿಸಿ ಎಂದು ವಿಮರ್ಶಿಸಿದ್ದರು. ಚಿತ್ರಕ್ಕೆ ನಿರ್ದೇಶಕ ಎ ಹರ್ಷ ಆಕ್ಷನ್ ಕಟ್ ಹೇಳಿದ್ದು, ನಾಯಕಿಯಾಗಿ ಘಾನವಿ ಲಕ್ಷ್ಮಣ್ ಅಭಿನಯಿಸಿದ್ದಾರೆ. ಜತೆಗೆ ವೀಣಾ ಪೊನ್ನಪ್ಪ, ಶ್ವೇತಾ ಚೆಂಗಪ್ಪ, ಉಮಾಶ್ರೀ ಹಾಗೂ ಅದಿತಿ ಸಾಗರ್ ಉತ್ತಮವಾಗಿ ಅಭಿನಯಿಸಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ವೇದ ತೆಲುಗು ಅವತರಣಿಕೆಯನ್ನು ಕಂಚಿ ಕಾಮಾಕ್ಷಿ ಕ್ರಿಯೇಷನ್ಸ್ ಬಿಡುಗಡೆ ಮಾಡಲಿದ್ದಾರೆ.

More from Filmibeat

English summary
Shiva Rajkumar starrer Vedha telugu version to release in theatres. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X