ವೇದ ತೆಲುಗು ವರ್ಷನ್ ಟ್ರೈಲರ್ ಬಿಡುಗಡೆ; ಚಿತ್ರದ ಶೀರ್ಷಿಕೆಯಲ್ಲಿ ಕೊಂಚ ಬದಲಾವಣೆ

ಪ್ಯಾನ್ ಇಂಡಿಯಾ ಟ್ರೆಂಡ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ ಈಗ ಚಿತ್ರಗಳ ರಿಮೇಕ್ ಹಕ್ಕಿನ ಬದಲು ಡಬಿಂಗ್ ಹಕ್ಕಿಗೆ ಹೆಚ್ಚು ಬೇಡಿಕೆ ಹುಟ್ಟಿಕೊಂಡಿದೆ. ಇನ್ನು ಕೆಲ ಚಿತ್ರಗಳನ್ನು ಬಿಡುಗಡೆಗೂ ಮುನ್ನವೇ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಿದರೆ, ಇನ್ನೂ ಕೆಲ ಚಿತ್ರಗಳು ಮೂಲ ಭಾಷೆಯಲ್ಲಿ ಬಿಡುಗಡೆಯಾಗಿ ಒಂದಷ್ಟು ಸದ್ದು ಮಾಡಿದ ಬಳಿಕ ಪರ ಭಾಷೆಗಳಿಗೆ ಡಬ್ ಆಗಿವೆ.

ಇದೀಗ ಈ ಸಾಲಿಗೆ ಸೇರಿದೆ ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್ ಚಿತ್ರ ವೇದ. ಹೌದು, ಕಳೆದ ಡಿಸೆಂಬರ್ 23ರಂದು ಕನ್ನಡ ಹಾಗೂ ತಮಿಳಿನಲ್ಲಿ ವೇದ ಚಿತ್ರ ಬಿಡುಗಡೆಗೊಂಡಿತ್ತು. ಕನ್ನಡದಲ್ಲಿ ಸಿನಿ ರಸಿಕರ ಮನಗೆದ್ದು ಯಶಸ್ವಿಯಾದ ವೇದ ಚಿತ್ರ ತಮಿಳಿನಲ್ಲಿಯೂ ಸಹ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಂಡು ಗೆಲುವನ್ನು ಸಾಧಿಸಿತು.

Shiva Rajkumar starrer Vedha movie telugu version trailer released

ಹೀಗೆ ವೇದ ಕನ್ನಡ ಹಾಗೂ ತಮಿಳಿನಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡ ನಂತರ ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗಲು ಸಿದ್ಧಗೊಂಡಿದೆ. ಹೌದು, ಈ ಹಿಂದಿಯೇ ವೇದ ತೆಲುಗಿನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಈಗ ಸುದ್ದಿ ಖಚಿತವಾಗಿದ್ದು, ಚಿತ್ರತಂಡ ವೇದ ತೆಲುಗು ವರ್ಷನ್‌ನ ಟ್ರೈಲರ್ ಅನ್ನು ಹಂಚಿಕೊಂಡಿದೆ. ಕನ್ನಡ ಹಾಗೂ ತಮಿಳಿನಲ್ಲಿ ವೇದ ಎಂಬ ಶೀರ್ಷಿಕೆಯನ್ನು ಹೊಂದಿದ್ದ ಚಿತ್ರ ತೆಲುಗಿನಲ್ಲಿ 'ಶಿವ ವೇದ' ಎಂಬ ಶೀರ್ಷಿಕೆ ಅಡಿಯಲ್ಲಿ ತೆರೆ ಕಾಣಲಿದೆ.

ವೇದ ತೆಲುಗು ವರ್ಷನ್ ಟ್ರೈಲರ್‌ಗೆ ಯುಟ್ಯೂಬ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೆಲುಗು ಸಿನಿ ರಸಿಕರಿಗೆ ಈ ಚಿತ್ರದ ಕತೆ ಇಷ್ಟವಾಗಲಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗೆ ಶಿವ ವೇದ ಎಂದು ತೆಲುಗಿಗೆ ಡಬ್ ಆಗುತ್ತಿರುವ ವೇದ ಚಿತ್ರದ ಕನ್ನಡ ವರ್ಷನ್ ಇನ್ನೂ ಸಹ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗ್ತಿದೆ. ಬೆಂಗಳೂರು ನಗರದ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ವೇದ ಇನ್ನೂ ಸಹ ಪ್ರದರ್ಶನಗೊಳ್ಳುತ್ತಿದ್ದು, ರಾಜ್ಯದ ಮುಖ್ಯ ನಗರಗಳಲ್ಲಿ ವೇದನ ಓಟ ಐವತ್ತನೇ ದಿನದತ್ತ ಸಾಗಿದೆ.

More from Filmibeat

English summary
Shiva Rajkumar starrer Vedha movie telugu version trailer released. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X