ಆ ಮುಖ್ಯಮಂತ್ರಿಯ ಬಯೋಪಿಕ್‌ನಲ್ಲಿ ನಟಿಸುವ ಆಸೆ ಇದೆ- ಮನದ ಮಾತು ಬಿಚ್ಚಿಟ್ಟ ಶಿವಣ್ಣ

ಕನ್ನಡ ನಟ ಶಿವರಾಜ್‌ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ವಯಸ್ಸು 60 ದಾಟಿದ್ರು ಸೆಂಚುರಿ ಸ್ಟಾರ್ ಎನರ್ಜಿ ಮಾತ್ರ ಕಮ್ಮಿ ಆಗ್ತಿಲ್ಲ. ಕ್ಯಾನ್ಸರ್‌ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಶಿವಣ್ಣ ಮತ್ತಷ್ಟು ಜೋಶ್‌ನಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪರಭಾಷೆ ಚಿತ್ರಗಳಲ್ಲಿ ಕೂಡ ನಟಿಸುತ್ತಿದ್ದಾರೆ.

'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಅಬ್ಬರಿಸಿದ ಬಳಿಕ ತೆಲುಗು, ತಮಿಳಿನಿಂದ ಸಾಕಷ್ಟು ಆಫರ್‌ ಬರ್ತಿದೆ. ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ಜೊತೆ ವಿಶೇಷ ಪಾತ್ರದಲ್ಲಿ ನಟಿಸಿರುವ ಶಿವಣ್ಣ 'ಗುಮ್ಮಡಿ ನರಸಯ್ಯ' ಚಿತ್ರದಲ್ಲಿ ಟೈಟಲ್ ರೋಲ್ ಪ್ಲೇ ಮಾಡ್ತಿದ್ದಾರೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪಾತ್ರದಲ್ಲಿ ನಟಿಸೋ ಇಂಗಿತ ವ್ಯಕ್ತಪಡಿಸಿದ್ದಾರೆ.

Shivarajkumar Opens Up About Gummadi Narasaiah Biopic and His Wish to Portray Chandrababu Naidu

ಬಾಲಕೃಷ್ಣ ನಟನೆಯ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಶಿವಣ್ಣ ಹೆಜ್ಜೆ ಹಾಕಿದ್ದರು. ಇದೀಗ ಆಂಧ್ರದ ರಾಜಕೀಯ ಮುಖಂಡ, ಸಿಪಿಐ ಮಾಜಿ ಶಾಸಕ 'ಗುಮ್ಮಡಿ ನರಸಯ್ಯ' ಬಯೋಪಿಕ್‌ನಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. 'ಪೆದ್ದಿ' ಚಿತ್ರದ ಚಿತ್ರೀಕರಣಕ್ಕಾಗಿ ಸದ್ಯ ಶಿವಣ್ಣ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದ್ದು ಗುಮ್ಮಡಿ ನರಸಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಇನ್ನು ಪತ್ನಿ ಗೀತಾ ಸಮೇತ ವಿಜಯವಾಡದ ಕನಕದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ನಟ ಶಿವರಾಜ್‌ಕುಮಾರ್ "ರಾಮ್‌ಚರಣ್ ನಟನೆಯ 'ಪೆದ್ದಿ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದೀನಿ. ಬಹಳ ಒಳ್ಳೆ ಪಾತ್ರ. ಜೊತೆಗೆ ಒಂದು ಸ್ಟ್ರೆಟ್ ತೆಲುಗು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದೀನಿ. ಗುಮ್ಮಡಿ ನರಸಯ್ಯ ಅವರ ಬಯೋಪಿಕ್‌ ಚಿತ್ರದಲ್ಲಿ ನಟಿಸ್ತಿದ್ದೀನಿ. ಕನಕದುರ್ಗಮ್ಮ ದೇವಸ್ಥಾನಕ್ಕೆ ಬಂದೆ. ತಾಯಿಯನ್ನು ನೋಡಿ ಒಳ್ಳೆ ವೈಬ್ಸ್ ಬಂತು. ಇದೇ ವೈಬ್ಸ್‌ ಜೊತೆ ಬಯೋಪಿಕ್ ಆರಂಭಿಸುತ್ತಿದ್ದೇವೆ. ಒಬ್ಬ ಒಳ್ಳೆ ಮನುಷ್ಯ ಜೀವನಾಧರಿತ ಚಿತ್ರದಲ್ಲಿ ನಟಿಸೋ ಅದ್ಭುತ ಅವಕಾಶ ಸಿಕ್ಕಿದೆ. ಇಂತಹ ಮಾನವತ್ವ ಇರುವ ವ್ಯಕ್ತಿ ಕಥೆಯನ್ನು ಈ ಕಾಲದಲ್ಲಿ ಎಲ್ಲರಿಗೂ ಹೇಳಬೇಕು" ಎಂದಿದ್ದಾರೆ.

Shivarajkumar Opens Up About Gummadi Narasaiah Biopic and His Wish to Portray Chandrababu Naidu

ನಂದಮೂರಿ ಫ್ಯಾಮಿಲಿ ಜೊತೆ ಅಣ್ಣಾವ್ರ ಕುಟುಂಬಕ್ಕೆ ಆತ್ಮೀಯ ಒಡನಾಟವಿದೆ. ಎನ್‌ಟಿಆರ್- ಡಾ. ರಾಜ್‌ಕುಮಾರ್ ಸ್ನೇಹಿತರಾಗಿದ್ದು. ಜ್ಯೂ. ಎನ್‌ಟಿಆರ್- ಅಪ್ಪು ಸ್ನೇಹ ಗೊತ್ತೇಯಿದೆ ಬಾಲಕೃಷ್ಣ ಹಾಗೂ ಶಿವಣ್ಣ ಕೂಡ ಸೋದರರಂತೆ ಇದ್ದಾರೆ. "ಬಾಲಕೃಷ್ಣ ನನ್ನ ಸಹೋದರನಂತೆ. ಬಹಳ ಆತ್ಮೀಯರಾಗಿ, ಒಂದೇ ಕುಟುಂಬದ ರೀತಿ ಇರ್ತೀವಿ. ಅವಕಾಶ ಸಿಕ್ಕರೆ ನಾರಾ ಚಂದ್ರಬಾಬು ನಾಯ್ಡು ಬಯೋಪಿಕ್‌ನಲ್ಲಿ ನಟಿಸ್ತೀನಿ. ಆಂಧ್ರ ಫುಡ್ ಬಹಳ ಇಷ್ಟ" ಎಂದು ಶಿವಣ್ಣ ಹೇಳಿದ್ದಾರೆ.

ಉಪೇಂದ್ರ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ 'ಓಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದೇ ಚಿತ್ರ ತೆಲುಗಿಗೆ ರೀಮೆಕ್ ಸಹ ಆಗಿತ್ತು. 'ಓಂ -2' ಯಾವಾಗ ಎನ್ನುವ ಪ್ರಶ್ನೆಗೆ "ಉಪೇಂದ್ರ ಅವರಿಗೆ ಹೇಳ್ತಿದ್ದೀನಿ, ಕಥೆ ಮಾಡಿ ಅಂತ. ಎಲ್ಲ ಕೂಡಿ ಬಂದ್ರೆ ಕಂಡಿತ ಮಾಡ್ತೀವಿ" ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

ಆಂಧ್ರ ರಾಜಕೀಯ ಇತಿಹಾಸದಲ್ಲಿ ಬಹಳ ಅನುಭವಿ ನಾಯಕ ಚಂದ್ರಬಾಬು ನಾಯ್ಡು. ಅತಿ ಹೆಚ್ಚು ವರ್ಷ ಮುಖ್ಯಮಂತ್ರಿಯಾಗಿ ಆಂಧ್ರ ರಾಜ್ಯವನ್ನು ಮುನ್ನಡೆಸಿದ ಹೆಗ್ಗಳಿಕೆ ಅವರದ್ದು. ಸದ್ಯ ವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿ, ತೆಲುಗು ದೇಶಂ ಹಾಗೂ ಜನಸೇನಾ ಮೈತ್ರಿಕೂಟದಿಂದ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ವಯಸ್ಸು 70 ದಾಟಿದ್ರು ಬಹಳ ಹುರುಪಿನಿಂದ ಸರ್ಕಾರ ನಡೆಸುತ್ತಿದ್ದಾರೆ. ಅಂದಹಾಗೆ ಬಾಲಯ್ಯನ ಭಾವ ಹಾಗೂ ಬೀಗರು ಚಂದ್ರಬಾಬು ನಾಯ್ಡು.

More from Filmibeat

Read more about: shivarajkumar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X