ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ 'ಅಗ್ನಿಸಾಕ್ಷಿ' ಖ್ಯಾತಿಯ ಶೋಭಾ ಶೆಟ್ಟಿ; ಬೆಲೆ ಎಷ್ಟು?
ಕನ್ನಡ ಕಿರುತೆರೆ ನಟಿಯರು ಈಗ ತೆಲುಗು ಕಿರುತೆರೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಕೆಲವರು ಅಲ್ಲೇ ಮದುವೆ ಆಗಿ ಸೆಟ್ಲ್ ಆಗುತ್ತಿದ್ದಾರೆ. 'ಅಗ್ನಿಸಾಕ್ಷಿ' ಹಾಗೂ 'ನಮ್ಮ ರುಕ್ಕು' ಧಾರಾವಾಹಿಗಳಲ್ಲಿ ನಟಿಸಿದ ಶೋಭಾ ಶೆಟ್ಟಿ ಸದ್ಯ ತೆಲುಗು ವೀಕ್ಷಕರ ಮನ ಗೆದ್ದಿದ್ದಾರೆ.
ತೆಲುಗಿನ 'ಕಾರ್ತಿಕ ದೀಪಂ' ಧಾರಾವಾಹಿಯಲ್ಲಿ ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಸಹ ನಟ ಯಶ್ವಂತ್ ಎಂಬುವವರನ್ನು ಪ್ರೀತಿಸಿ ಮದುವೆ ಆಗಲು ಆಕೆ ಮುಂದಾಗಿದ್ದಾರೆ. ಈಗಾಗಲೇ ಇಬ್ಬರು ಮದುವೆ ನಿಶ್ಚಯವಾಗಿದೆ. ತೆಲುಗು ಬಿಗ್‌ಬಾಸ್ ಮನೆಗೂ ಆಕೆ ಹೋಗಿ ಬಂದಿದ್ದಾರೆ. ಆದರೆ ಶೋನಲ್ಲಿ ಆಕೆಯ ಬಗ್ಗೆ ನೆಗೆಟಿವ್ ಟಾಕ್ಸ್ ಹೆಚ್ಚಾಗಿತ್ತು.

ಇನ್ನು ಶೋಭಾ ಈಗಾಗಲೇ ಹೈದರಾಬಾದ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಮದುವೆ ನಂತರ ದಂಪತಿ ಅಲ್ಲೇ ನೆಲೆಸಲು ನಿರ್ಧರಿಸಿದ್ದಾರೆ. ಮನೆಯ ಗೃಹ ಪ್ರವೇಶ ಕೂಡ ಆಗಿದ್ದು, ಮುಂದಿನ ತಿಂಗಳು ಆ ಮನೆಗೆ ಶಿಫ್ಟ್ ಆಗಲಿದ್ದಾರೆ. 3 ವರ್ಷಗಳ ಕಾಲ ತಮ್ಮ ಪ್ರೀತಿ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ಶೋಭಾ ಬಿಗ್‌ಬಾಸ್ ವೇದಿಕೆಯಲ್ಲೇ ರಿವೀಲ್ ಮಾಡಿದ್ದರು.
'ಕಾರ್ತಿಕ ದೀಪಂ' ಮಾತ್ರವಲ್ಲದೇ 'ಲಾಹಿರಿ ಲಾಹಿರಿ ಲಾಹಿರಿಲೋ' ಹಾಗೂ 'ಜೇಮ್ಸ್ ಬಾಂಡ್' ಎನ್ನುವ ಮತ್ತೆರಡು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಬುಜ್ಜಿ ಬಂಗಾರಂ' ಎನ್ನುವ ಆಲ್ಬಮ್ ಸಾಂಗ್‌ನಲ್ಲಿ ಕೂಡ ಮಿಂಚಿದ್ದಾರೆ. ಇನ್ನು ಕನ್ನಡ ಹಾಗೂ ತೆಲುಗಿನಲ್ಲಿ ಶೋಭಾ ಶೆಟ್ಟಿ ಐಟ್ಯೂಬ್ ಚಾನಲ್ ಹೊಂದಿದ್ದಾರೆ. ತಮ್ಮ ವೈಯಕ್ತಿಯ ಹಾಗೂ ಕರಿಯರ್ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಿರುತ್ತಾರೆ.
ಹೈದರಾಬಾದ್ ಮೂಲದ ನಟ ಯಶ್ವಂತ್‌ಗೆ ಶೋಭಾ ಶೆಟ್ಟಿ ಪ್ರಪೋಸ್ ಮಾಡಿದ್ದರಂತೆ. ಕನ್ನಡದಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿಯ ತನು ಪಾತ್ರ ಆಕೆಗೆ ಹೆಸರು ತಂದುಕೊಟ್ಟಿತ್ತು. ಆದರೂ ತೆಲುಗಿನಲ್ಲಿ ಅವಕಾಶ ಸಿಕ್ಕಿ ಅಲ್ಲೇ ಉಳಿದುಕೊಂಡರು. ಸದ್ಯ ಬಾವಿ ಪತಿ ಯಶ್ವಂತ್‌ಗೆ ಶೋಭಾ ಕಾರ್‌ವೊಂದನ್ನು ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ.

ಬೀಸ್ಟ್ ಎಕ್ಸ್‌ಯುವಿ 700 ಕಾರ್ ಅನ್ನು ಈ ವರ್ಷ ಯಶ್ವಂತ್ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ಆಗಿ ಕೊಟ್ಟಿದ್ದಾರೆ. ಮಾರ್ಕೆಟ್‌ನಲ್ಲಿ ಈ ಕಾರಿನ ಬೆಲೆ 15ರಿಂದ 20 ಲಕ್ಷ ರೂ. ಇದೆ. ಬರೀ ಹುಟ್ಟುಹಬ್ಬಕ್ಕೆ ಇಷ್ಟು ದೊಡ್ಡ ಉಡುಗೊರೆ ಕೊಟ್ಟರೆ ಮದುವೆಗೆ ಇನ್ಯಾವ ಉಡುಗೊರೆ ಕೊಡುತ್ತಾರೆ? ಎಂದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
'ಕಾರ್ತಿಕ ದೀಪಂ' ಧಾರಾವಾಹಿಯಲ್ಲಿ ನಿರುಪಮ್ (ಡಾ. ಬಾಬು) ಅವರ ಕಿರಿಯ ಸಹೋದರನಾಗಿ ನಟಿಸಿದ ಯಶ್ವಂತ್ (ಆದಿತ್ಯ ) ನಟಿಸಿದ್ದರು. ಧಾರಾವಾಹಿಯಲ್ಲಿ ಡಾ. ಬಾಬು ಹಿಂದೆ ಕೊನೆಯವರೆಗೂ ಶೋಭಾ ಶೆಟ್ಟಿ(ಡಾ. ಮೋನಿತಾ) ಸುತ್ತುತ್ತಾಳೆ. ಆದರೆ ನಿಜಜೀವನದಲ್ಲಿ ಇದೇ ಡಾ.ಬಾಬು ಸಹೋದರ ಪಾತ್ರಧಾರಿ ಯಶ್ವಂತ್ ಪ್ರೀತಿಲಿ ಬಿದ್ದಿದ್ದರು. ಧಾರಾವಾಹಿ ಮುಗಿದ ಬಳಿಕ ಕೂಡ ಇಬ್ಬರ ಸ್ನೇಹ ಮುಂದುವರೆದಿತ್ತು. ಕೊನೆಗೆ ನಿಶ್ಚಿತಾರ್ಥದ ತನಕ ಬಂದು ನಿಂತಿದೆ.


Click it and Unblock the Notifications











