ಸಮಂತಾ ಮದುವೆ ಬೆನ್ನಲೇ ತಮ್ಮ ಮದುವೆ ವೀಡಿಯೋ ಹಂಚಿಕೊಂಡ ಶೋಭಿತಾ, ಕಾರಣವೇನು?
ತೆಲುಗು ನಟ ನಾಗಚೈತನ್ಯಾ ಹಾಗೂ ಸಮಂತಾ ಮದುವೆಯಾಗಿ ಡಿವೋರ್ಸ್ ಪಡೆದಿದ್ದು ಬಳಿಕ ಇಬ್ಬರೂ ಮತ್ತೆ ಮದುವೆ ಕೂಡ ಆಗಿದ್ದಾರೆ. 3 ದಿನಗಳ ಹಿಂದೆಯಷ್ಟೆ ಸ್ಯಾಮ್ ನಿರ್ದೇಶಕ ರಾಜ್ ನಿಡುಮೊರು ಜೊತೆ 2ನೇ ಮದುವೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಡಿವೋರ್ಸ್, 2ನೇ ಮದುವೆ ಎಲ್ಲವೂ ಸರ್ವೇಸಾಮಾನ್ಯ ಎನ್ನುವಂತಾಗಿಬಿಟ್ಟಿದೆ.
ಕಳೆದ ವರ್ಷ ಡಿಸೆಂಬರ್ 4ರಂದು ನಾಗಚೈತನ್ಯಾ ಹಾಗೂ ನಟಿ ಶೋಭಿತಾ ಧುಲಿಪಾಲ ಮದುವೆ ನಡೆದಿತ್ತು. ತಮ್ಮದೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಬಹಳ ಅದ್ಧೂರಿಯಾಗಿ ನಾಗಾರ್ಜುನ ಮಗನ 2ನೇ ಮದುವೆ ಮಾಡಿ ಸಂಭ್ರಮಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು. ಇದೇ ಮೊದಲ ಬಾರಿಗೆ ಮದುವೆಯ ಕಲರ್‌ಫುಲ್ ಕ್ಷಣಗಳ ವೀಡಿಯೋವನ್ನು ಶೋಭಿತಾ ಹಂಚಿಕೊಂಡಿದ್ದಾರೆ.

ಚೈತು ಇಲ್ಲದೇ ನನ್ನ ಜೀವನ ಅಪೂರ್ಣ ಎನಿಸುತ್ತಿತ್ತು ಎಂದು ಶೋಭಿತಾ ವಿಡಿಯೋದಲ್ಲಿ ಹೇಳಿದ್ದಾರೆ. ಅದೇ ರೀತಿ ಶೋಭಿತಾ ಇದ್ದರೆ ಬಹಳ ಕಂಫರ್ಟ್ ಎನಿಸುತ್ತದೆ ಎಂದು ಚೈತು ಹೇಳಿರುವುದನ್ನು ನೋಡಬಹುದು. ಬಹಳ ಅದ್ಧೂರಿಯಾಗಿ ಮದುವೆ ಶಾಸ್ತ್ರಗಳ ನಡೆದಿವೆ. ವಧು, ವರ ಬಹಳ ಸಂಭ್ರಮದಿಂದ ಆ ಕ್ಷಣಗಳನ್ನು ಸಂಭ್ರಮಿಸಿದ್ದಾರೆ. "ಶ್ರೀಮತಿಯಾಗಿ ಒಂದು ವರ್ಷ" ಎಂದು ಶೋಭಿತಾ ವೀಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
'ಏ ಮಾಯ ಚೆಸಾವೆ' ಸಿನಿಮಾ ಚಿತ್ರೀಕರಣದ ವೇಳೆ ಚೈತು- ಸ್ಯಾಮ್ ಪರಿಚಯವಾಗಿತ್ತು. ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಕದ್ದು ಮುಚ್ಚಿ ಓಡಾಡುತ್ತಿದ್ದ ಜೋಡಿ ಬಳಿಕ ಪೋಷಕರ ಒಪ್ಪಿಗೆ ಪಡೆದು ಗೋವಾದಲ್ಲಿ ಮದುವೆ ಆಗಿದ್ದರು. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯಗಳಂತೆ ಮದುವೆ ನೆರವೇರಿತ್ತು. 2017ರಲ್ಲಿ ಮದುವೆಯಾಗಿದ್ದ ಜೋಡಿ 2021ರಲ್ಲಿ ದೂರಾಗಲು ನಿರ್ಧರಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದರು.
ಟಾಲಿವುಡ್ ಹಾಟ್ ಕಪಲ್ ಎಂದೇ ಗುರ್ತಿಸಿಕೊಂಡಿದ್ದ ಜೋಡಿ ದೂರಾಗಿದ್ದು ಅಭಿಮಾನಿಗಳಿಗೂ ಅಚ್ಚರಿ ತಂದಿತ್ತು. ಬಳಿಕ ಮಯೋಸೈಟಿಸ್ ಸಮಸ್ಯೆಯಿಂದ ಸಮಂತಾ ಬಳಲಿದ್ದರು. ಅದಕ್ಕೆ ಚಿಕಿತ್ಸೆ ಪಡೆದಿದ್ದರು. ಇದೇ ಸಮಯದಲ್ಲಿ 'ಫ್ಯಾಮಿಲಿಮ್ಯಾನ್' ಸರಣಿ ನಿರ್ದೇಶಕ ರಾಜ್ ನಿಡುಮೊರು ಜೊತೆ ಬಾಂಧವ್ಯ ಬೆಳೆದಿತ್ತು. ಇಬ್ಬರೂ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದ್ದರು.
ಡಿಸೆಂಬರ್ 1ರಂದು ಕೊಯಂಬತ್ತೂರಿನ ಇಶಾ ಫೌಂಡೇಷನ್‌ನಲ್ಲಿ ಸ್ಯಾಮ್-ರಾಜ್ ಮದುವೆ ನಡೆದಿದೆ. ಸರಳವಾಗಿ ಭೂತ ಶುದ್ಧಿ ವಿವಾಹ ಪದ್ಧತಿಯಂತೆ ಇಬ್ಬರೂ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಹಾಗೂ ಆಪ್ತರು ಜೋಡಿಗೆ ಶುಭ ಕೋರಿದ್ದಾರೆ. ಶೋಭಿತಾಳನ್ನು ಪ್ರೀತಿಸಿದ್ದಕ್ಕೆ ಸಮಂತಾಳಿಂದ ಚೈತು ಡಿವೋರ್ಸ್ ಪಡೆದಿದ್ದಾರೆ ಎಂದು ಕೆಲವರು ವರ್ಷದ ಹಿಂದೆ ಮಾತನಾಡಿದ್ದರು. ರಾಜ್ ಕಾರಣಕ್ಕೆ ಸಮಂತಾ ಡಿವೋರ್ಸ್ ಪಡೆದಿದ್ದಾರೆ ಎಂದು ಕೆಲವರು ಈಗ ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶೋಭಿತಾ ವಿಡಿಯೋ ಹಂಚಿಕೊಂಡಿದ್ದರೂ ಚೈತು ಟ್ಯಾಗ್ ಮಾಡಿಲ್ಲ. ಚೈತು ವೀಡಿಯೋ ಹಾಕಿದರೆ ಸಮಂತಾ ಮದುವೆ ಬೆನ್ನಲ್ಲೇ ವೀಡಿಯೋ ಪೋಸ್ಟ್ ಮಾಡಿ ತಿರುಗೇಟು ಕೊಟ್ಟಿದ್ದಾರೆ ಎಂದು ಚರ್ಚೆ ನಡೆಯಬಹುದು ಎಂದು ಈ ರೀತಿ ಮಾಡಿರುವ ಸಾಧ್ಯತೆಯಿದೆ. ಮದುವೆ ಬಳಿಕ ಶೋಭಿತಾ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ.
ಸಮಂತಾ ಕೂಡ ಯಾವುದೇ ಹೊಸ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಹೊಸಬರಿಗೆ ಅವಕಾಶ ಕೊಡುತ್ತಿದ್ದಾರೆ. ಅಂದಹಾಗೆ ಸಮಂತಾ ಕೈ ಹಿಡಿದಿರುವ ನಿರ್ದೇಶಕ ರಾಜ್ ನಿಡುಮೊರುಗೆ ಕೂಡ ಇದು 2ನೇ ಮದುವೆ. ಆತನ ಮೊದಲ ಪತ್ನಿ ಶಾಮಿಲಿ ದೀ ಪರೋಕ್ಷವಾಗಿ ಟಾಂಗ್ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.


Click it and Unblock the Notifications











