ಛೇ ಎಂಥಾ ದುರಂತ ; ಸ್ಟಾರ್ ನಟಿಯ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಎರಡು ತಿಂಗಳಿನಲ್ಲಿಯೇ ಆತ್ಮ*ಹತ್ಯೆಗೆ ಶರಣಾದ ಭಾವಿ ಪತಿ
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಈ ಬ್ರೇಕ್ ಅಪ್‌ನ ನೋವು ಸಹಿಸಲಾಗದೇ ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ.
ಪ್ರೀತಿ ಮರೆಯಲಾಗದೆ.. ಅನೇಕರು ಆತ್ಮಹತ್ಯೆಯನ್ನು ಕೂಡ ಮಾಡಿಕೊಂಡಿದ್ದಾರೆ.ಇದಕ್ಕೆ ಸವಾಯಿ ಸಿಂಗ್ ಸದ್ಯದ ಉದಾಹರಣೆ. ಹೌದು. ಸವಾಯಿ ಸಿಂಗ್.. ಪಕ್ಕದ ಮನೆ ಆಂಧ್ರದ ನಾಯಕಿ ಸೋಹಾನಿ ಕುಮಾರಿ ಅಲಿಯಾಸ್ ಸೋಹಾನಿ ಚೌಧರಿ ಅವರ ಪ್ರಿಯಕರ. ಇನ್ ಸ್ಟಾಗ್ರಾಮ್ ಮೂಲಕ ಸೋಹಾನಿಗೆ ಪರಿಚಯವಾಗಿದ್ದವರು ಸವಾಯಿ ಸಿಂಗ್.

ಹೀಗೆ ಪರಿಚಯವಾದ ಸವಾಯಿ ಸಿಂಗ್ ಅವರ ಜೊತೆ ಸ್ನೇಹ ಬೆಳೆಸಿಕೊಂಡ ಸೋಹಾನಿ ಆ ನಂತರ ತಮ್ಮ ಹೃದಯವನ್ನು ಕೂಡ ನೀಡಿದರು. ಪ್ರೀತಿಯಲ್ಲಿ ಬಿದ್ದರು. ಲಿವ್ ಇನ್ ಸಂಬಂಧದಲ್ಲಿದ್ದರು. ಸೋಹಾನಿ ತಮ್ಮ ಈ ಸಂಬಂಧವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಅಂದರೆ ಕಳೆದ ಜೂನ್ ನಲ್ಲಿ ಸೋಹಾನಿ ತಮ್ಮ ಮನೆಯ ಸದಸ್ಯರ ಎದುರು ಸವಾಯಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತಮ್ಮ ಪ್ರೇಮಕ್ಕೆ ಸೇತುವೆಯಾಗಿದ್ದ ಇನ್ ಸ್ಟಾಗ್ರಾಮ್ ಮೂಲಕವೇ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು.
ಆದರೆ.. ವಿರಹ ವೇದನೆ ಇವರ ಈ ಖುಷಿಗೆ ಕೊಳ್ಳಿ ಇಟ್ಟಿದೆ. ಹೌದು ಸೋಹಾನಿ ಪ್ರೀತಿ ಮಾಡುತ್ತಿದ್ದ ಸವಾಯಿ ಸಿಂಗ್ ಗೆ ಅದಾಗಲೇ ಬ್ರೇಕಪ್ ಆಗಿತ್ತು. ಸೋಹಾನಿ ಅವರ ಪ್ರೀತಿಯಿಂದ ಕೂಡ ಈ ನೋವು ಮಾಸಿರಲಿಲ್ಲ. ಇನ್ನೂ ಆರ್ಥಿಕ ಪರಿಸ್ಥಿತಿ ಕೂಡ ಸವಾಯಿ ಅವರನ್ನು ಹೈರಾಣು ಮಾಡಿತ್ತು.

ಹೀಗಾಗಿಯೇ ಒಳಗೊಳಗೆ ನೊಂದು ಬೆಂದು ಹೋಗಿದ್ದ ಸವಾಯಿ ಸಿಂಗ್, ಬೆಳಿಗ್ಗೆ 11 ಗಂಟೆಗೆ ಕಚೇರಿಗೆ ಕೆಲಸಕ್ಕೆ ತೆರಳುತ್ತಿರುವುದಾಗಿ ಸೋಹಾನಿಗೆ ಹೇಳಿದ್ದರು. ಈ ಹಿನ್ನೆಲೆ ಸೋಹಾನಿ ಕೂಡ ಮನೆಯ ಹೊರಗೆ ಹೋಗಿದ್ದರು. ಆದರೆ ಫ್ಲಾಟ್‌ಗೆ ಮರಳಿದಾಗ ಸೋಹಾನಿಗೆ ಆಘಾತವಾಗಿತ್ತು. ಸವಾಯಿ ಸಿಂಗ್ ನೇಣಿಗೆ ಶರಣಾಗಿದ್ದರು.
''ಡೆಕ್ಕನ್ ಕ್ರೋನಿಕಲ್'' ವರದಿಯ ಪ್ರಕಾರ ತನ್ನ ಮಾಜಿ ಗರ್ಲ್‌ಫ್ರೆಂಡ್‌ಅನ್ನು ಮರೆಯಲು ಸವಾಯಿ ಸಿಂಗ್ ತುಂಬಾ ಕಷ್ಟಪಡುತ್ತಿದ್ದ. ಆರ್ಥಿಕವಾಗಿಯೂ ಬಹಳಷ್ಟು ಒತ್ತಡದ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದ ಎಂದು ಸೋಹಾನಿ ಕುಮಾರಿ ಹೇಳಿದ್ದು, ಇದಕ್ಕೆ ಪೂರಕವಾಗಿ ಆತ್ಮಹ*ತ್ಯೆ ಮಾಡಿಕೊಳ್ಳುವ ಮುನ್ನ ಸವಾಯಿ ಸಿಂಗ್ ಸೆಲ್ಫಿ ವಿಡಿಯೋ ಕೂಡ ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ ಆತ ನಾನು ಈ ಹಿಂದೆ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳು ನನಗೆ ಈಗಲೂ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋವನ್ನು ವಶ ಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆಗಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


Click it and Unblock the Notifications











