ಬಿಗ್ ಬಾಸ್ ಸ್ಫರ್ಧಿಯ ಜೊತೆ ಪತಿಯ ಅನೈತಿಕ ಸಂಬಂಧ, ಕೆರಳಿ ಕೆಂಡವಾದ ಖ್ಯಾತ ನಟನ ಪತ್ನಿ

ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಇಲ್ಲದಿದ್ದರೆ ಯಾವ ಸಂಬಂಧ ಕೂಡ ಹೆಚ್ಚು ಕಾಲ ಉಳಿಯುವುದಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಪ್ರೀತಿ ಪಾತ್ರರು ಜೊತೆಯಲ್ಲಿ ಇರುವುದಿಲ್ಲ. ಮದುವೆ ಹೆಚ್ಚು ದಿನ ಉಳಿಯಲ್ಲ. ಬಣ್ಣದ ಲೋಕದಲ್ಲಿದ್ದವರು ಕೂಡ ಇದರಿಂದ ಹೊರತಾಗಿಲ್ಲ.

ಇದಕ್ಕೆ ಕೈಗನ್ನಡಿ ಎಂಬಂತೆ ಹಲವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ನಾಲ್ಕು ಗೋಡೆಗಳ ನಡುವೆ ಇರಬೇಕಾದ ವಿಚಾರಗಳೆಲ್ಲಾ ಜಗಜ್ಜಾಹೀರಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿವೆ. ಟ್ರೋಲಿಗರಿಗೆ ಆಹಾರವಾಗಿವೆ. ಇನ್ನೂ ಕೆಲ ಪ್ರಕರಣಗಳು ಪೊಲೀಸ್ ಠಾಣೆಯನ್ನು ಕೂಡ ತಲುಪಿವೆ. ಇದಕ್ಕೆ ಮತ್ತೊಂದು ಉದಾಹರಣೆ ಧರ್ಮ ಮಹೇಶ್ ಮತ್ತು ಗೌತಮಿಯ ಪ್ರಕರಣ.

shocking-dharma-maheshs-wife-gautami-reveals-actors-extramarital-affairs-names-bigg-boss-contest

ಹೌದು.. ಧರ್ಮ ಮಹೇಶ್ ಅಲಿಯಾಸ್ ಕಾಕಣಿ ಧರ್ಮ ಸತ್ಯಸಾಯಿ ಶ್ರೀನಿವಾಸ ಮಹೇಶ್, ಪಕ್ಕದ ಆಂಧ್ರದ ಹೀರೋ. ''ಸಿಂಧೂರಂ''.. ''ಡ್ರಿಂಕರ್ ಸಾಯಿ''.. ಸೇರಿ ಕೆಲ ಚಿತ್ರಗಳನ್ನು ಮಾಡಿರುವ ಧರ್ಮ ಮಹೇಶ್ ವಿರುದ್ಧ ಅವರ ಪತ್ನಿ ಗೌತಮಿ ಪೊಲೀಸರಿಗೆ ಸದ್ಯ ದೂರು ನೀಡಿದ್ದಾರೆ. ಹಣದಾಸೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ.

ಗೌತಮಿ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ತನಿಖೆಯನ್ನು ಮಾಡುತ್ತಿದ್ದು ಗೌತಮಿ ಇದೇ ಸಮಯದಲ್ಲಿ TV 5 ತೆಲುಗು.. ಎನ್ ಟಿವಿ.. ಸಾಕ್ಷಿ ಟಿವಿ.. ಹೀಗೆ ಹಲವು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ತಮ್ಮ ಗಂಡನ ಕರಾಳ ಮುಖವನ್ನು ಬಿಚ್ಚಿಡುತ್ತಿದ್ದಾರೆ.

ಈ ಕುರಿತು ಸಂದರ್ಶನಗಳಲ್ಲಿ ಮಾತನಾಡಿರುವ ಗೌತಮಿ ನನ್ನ ಗಂಡ ಕೇವಲ ತೆರೆಯ ಮೇಲಷ್ಟೇ ಹೀರೋ ವಾಸ್ತವದಲ್ಲಿ ಆತ ಬಹುದೊಡ್ಡ ಖಳನಾಯಕ ಎಂದು ಹೇಳಿದ್ದಾರೆ. ಇಂದಲ್ಲ.. ನಾಳೆ.. ಸರಿ ಹೋಗಬಹುದು ಎಂದುಕೊಂಡು ನಾನು ಎಲ್ಲವನ್ನೂ ಸಹಿಸಿಕೊಂಡೆ ಬಂದೆ ಆದರೆ ಇನ್ನೂ ನನ್ನಿಂದ ಸಾಧ್ಯ ಇಲ್ಲ ಎಂದು ಹೇಳಿರುವ ಗೌತಮಿ ನಾನು ಗರ್ಭಿಣಿಯಾಗಿದ್ದಾಗ ನನ್ನನ್ನು ಕೊಲ್ಲುವ ಪ್ರಯತ್ನ ಮಾಡಿದ್ದ ಆ ನಂತರ ಮಗು ಹುಟ್ಟಿದ ಮೇಲೆ ನನ್ನ ಮಗು ಅಲ್ಲ ನಾನು ಒಪ್ಪಿಕೊಳ್ಳಲ್ಲ ಎಂದು ಹೇಳಿದ ಎಂದು ಹೇಳಿದ್ದಾರೆ.

ದೂರು ನೀಡಿದ ನಂತರ ನನ್ನ ಮತ್ತು ನನ್ನ ಕುಟುಂಬವನ್ನು ಕೊಲ್ಲುವ ಬೆದರಿಕೆಯನ್ನು ಅವನು ಹಾಕಿದ್ದಾನೆ. ಅವನಿಗೆ ಕೇವಲ ನನ್ನ ಹಣ ಮತ್ತು ನನ್ನ ಉದ್ಯಮದಿಂದ ಬರುವ ಲಾಭ ಮಾತ್ರ ಬೇಕು ಎಂದು ಕೂಡ ಹೇಳಿರುವ ಗೌತಮಿ, ಮಧ್ಯರಾತ್ರಿಯವರೆಗೆ ಕಂಡೋರ ಮನೆ ಹೆಣ್ಣು ಮಕ್ಕಳ ಜೊತೆ ತಿರುಗಾಡುವ ಖಯಾಲಿ ಅವನಿಗೆ ಇದೆ ಎಂದು ಹೇಳಿದ್ದಾರೆ. ಕೇವಲ ಆತ ಒಬ್ಬನಿಗೆ ಮಾತ್ರ ಅಲ್ಲ ಇಡೀ ಅವನ ಕುಟುಂಬಕ್ಕೆ ಹಣದ ದಾಹ ಇದೆ ನೂರಾರು ಕೋಟಿ ರೂಪಾಯಿ ವರದಕ್ಷಿಣೆಯನ್ನು ಕೇಳುತ್ತಿದ್ದಾರೆ, ಹಣಕ್ಕಾಗಿ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕೂಡ ಹೇಳಿದ್ದಾರೆ.

shocking-dharma-maheshs-wife-gautami-reveals-actors-extramarital-affairs-names-bigg-boss-contest

ಮುಂದುವರೆದು ನನ್ನ ಗಂಡನ ಫ್ಲಾಟ್‌ನಲ್ಲಿ ಅದಾಗಲೇ ಮದುವೆಯಾಗಿರುವ ''ಬಿಗ್ ಬಾಸ್'' ಸ್ಫರ್ಧಿಯೊಬ್ಬಳು ಯಾವಾಗಲೂ ಬಿದ್ದಿರುತ್ತಾಳೆ. ನನ್ನ ಗಂಡನ ಮಡಿಲಿನಲ್ಲಿ ಕುಳಿತುಕೊಂಡು ಮಾಂಸ ತಿನ್ನಿಸುತ್ತಾಳೆ, ಎಣ್ಣೆ ಹೊಡೆಸುತ್ತಾಳೆ ಎಂದು ಹೇಳಿರುವ ಗೌತಮಿ ಆಕೆಯ ಗಂಡ ನನಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದರೆ ಅವನ ಹೆಂಡತಿ ಮಾತನಾಡಿರುವ ಆಡಿಯೋವನ್ನು ಅವನಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ಬ್ರಿಗೇಡ್ ಸೆವೆನ್ ಅಪಾರ್ಟ್‌ಮೆಂಟ್‌ನಲ್ಲಿ ಡಾಕ್ಟರ್ ಸಾಹಿತ್ಯ ಮಡಿಲಿನಲ್ಲಿ ಕೂರಿಸಿಕೊಂಡು ಚಕ್ಕಂದ ಆಡಿದಿಯಲ್ಲ, ನಿನಗೆ ನಾಚಿಕೆಯಾಗಲ್ವಾ ? ಎಂದು ತಮ್ಮ ಗಂಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾನು ಇನ್ನೂ ಅವನ ಪತ್ನಿ ಹೀಗಾಗಿ ಇದೆಲ್ಲವನ್ನು ಪ್ರಶ್ನಿಸುವ ಹಕ್ಕು ನನಗೆ ಇದೆ ಎಂದು ಹೇಳಿರುವ ಗೌತಮಿ ನನ್ನ ಮಗುಗೋಸ್ಕರ ನಾನು ಈ ಹೋರಾಟವನ್ನು ಹೋರಾಡುತ್ತೇನೆ ಎಂದು ಹೇಳಿದ್ದಾರೆ.

More from Filmibeat

English summary
Dharma Mahesh's wife Gautami reveals explosive details about his alleged affairs with Bigg Boss contestants. Get the full scoop on the scandal shaking the Telugu film industry.
Read more about: biggboss affair tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X