Pushpa Actor Arrested: ಜ್ಯೂನಿಯರ್ ಆರ್ಟಿಸ್ಟ್ ಆತ್ಮಹತ್ಯೆ..'ಪುಷ್ಪ' ಸಿನಿಮಾ ನಟನ ಬಂಧನ

'ಪುಷ್ಪ' ಚಿತ್ರದಲ್ಲಿ ನಾಯಕ 'ಪುಷ್ಪ'ರಾಜ್ ಬಲಗೈ ಬಂಟ ಕೇಶವ ಪಾತ್ರಧಾರಿ ನಟ ಜಗದೀಶ್ ಬಂಧನವಾಗಿದೆ. ಜೂನಿಯರ್ ಆರ್ಟಿಸ್ಟ್‌ಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪಂಜಗುಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಗದೀಶ್‌ನನ್ನು ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವರದಿಗಳ ಪ್ರಕಾರ ಕಾಕಿನಾಡ ಮೂಲದ ಮಹಿಳೆಯೊಬ್ಬರು ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೆಲ ದಿನಗಳ ನಂತರ ವಿಚ್ಛೇದನ ಪಡೆದು ಹೈದರಾಬಾದ್‌ ನಗರಕ್ಕೆ ಬಂದು ಸೋಮಾಜಿಗುಡದಲ್ಲಿ ನೆಲೆಸಿದ್ದಾಳೆ. ಚಿತ್ರರಂಗದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ, ಸಣ್ಣ ಸಾಕ್ಷ್ಯಚಿತ್ರಗಳನ್ನು ಮಾಡುವಾಗ ಜಗದೀಶ್‌ (31) ಪರಿಚಯವಾಗಿತ್ತು. ಕೆಲ ದಿನಗಳಿಂದ ಇಬ್ಬರ ನಡುವೆ ಆತ್ಮೀಯ ಒಡನಾಟ ಇತ್ತು. ಅವಳು ಮದುವೆಯಾಗಲು ಬಯಸಿದ್ದಳು. ಆದರೆ, ಜಗದೀಶ್ ಬೇರೆ ಯುವತಿಯನ್ನು ಮದುವೆಯಾಗಿದ್ದರಿಂದ ಆತನನ್ನು ದೂರ ಇಟ್ಟಿದ್ದಳು.

shocking:Pushpa movie Actor arrested in junior artists suicide case in Hyderabad

ಆಕೆಯನ್ನು ಮರೆಯಲಾಗದ ಜಗದೀಶ್ ಆಕೆಯ ಅಪಾರ್ಟ್ ಮೆಂಟ್‌ಗೆ ಆಗಾಗ ಭೇಟಿ ನೀಡುತ್ತಿದ್ದ. ಆದರೆ ಆಕೆ ಅವನನ್ನು ನಿರ್ಲಕ್ಷಿಸಿದ್ದಳು. ಅದೇ ಸಮಯದಲ್ಲಿ ಇನ್ನೊಬ್ಬ ಯುವಕನೊಂದಿಗಿನ ಅವಳ ಪರಿಚಯವು ನಿಕಟ ಸಂಬಂಧಕ್ಕೆ ಕಾರಣವಾಯಿತು. ಕಳೆದ ತಿಂಗಳು 27ರಂದು ಆಕೆ ತನ್ನ ಫ್ಲಾಟ್‌ನಲ್ಲಿ ಯುವಕನೊಂದಿಗೆ ಅರೆಬೆತ್ತಲೆಯಾಗಿದ್ದಾಗ, ಅಡುಗೆ ಮನೆಯ ಕಿಟಕಿಯಿಂದ ಜಗದೀಶ್ ತನ್ನ ಸೆಲ್ ಫೋನ್‌ನಲ್ಲಿ ಅವರ ಚಿತ್ರಗಳನ್ನು ತೆಗೆದುಕೊಂಡಿದ್ದಾನೆ. ಆ ಫೋಟೊಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡಲು ಆರಂಭಿಸಿದ್ದನು.

ಆ ಫೋಟೋಗಳನ್ನು ಆಕೆಗೆ ವಾಟ್ಸಾಪ್‌ಗೆ ಕಳುಹಿಸಿ ತನ್ನಮ ಮಾತು ಕೇಳದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಆಕೆ ನ.29ರಂದು ತನ್ನ ಫ್ಲಾಟ್‌ನಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಪಂಜಗುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಗದೀಶ ಹುಡುಕಾಟ ಶುರುವಾಗಿದೆ. ಮೃತ ಯುವತಿಯ ಫೋನ್ ನಂಬರ್ ಆಧರಿಸಿ ಸಾವಿಗೂ ಮುನ್ನ ಕರೆ ಮಾಡಿದವರು ಯಾರು? ಅವಳು ಯಾರೊಂದಿಗೆ ಮಾತನಾಡಿದ್ದಾಳೆಂದು ಮಾಹಿತಿ ಪಡೆದಿದ್ದಾರೆ.

ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನದವರೆಗೂ ಜತೆಗಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆತ 27ರಂದು ರಾತ್ರಿ ನಡೆದ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತನಿಖೆ ನಡೆಸಿದ ಪೊಲೀಸರು ಯುವತಿಯ ಆತ್ಮಹತ್ಯೆಗೆ ಜಗದೀಶ್ ಸಾವಿಗೆ ಪ್ರಮುಖ ಕಾರಣ ಎಂದು ಪರಿಗಣಿಸಿ ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 354(ಸಿ) ಮತ್ತು 306 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಜಗದೀಶ್ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಸುಕುಮಾರ್ ನಿರ್ದೇಶನದ 'ಪುಷ್ಪ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿತ್ತು. ಚಿತ್ರದಲ್ಲಿ ಎಲ್ಲಾ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದೆ.

'ಪುಷ್ಪ' ಚಿತ್ರದಲ್ಲಿ ನಾಯಕ ಅಲ್ಲು ಅರ್ಜುನ್ ಸ್ನೇಹಿತ ಕೇಶವ ಪಾತ್ರದಲ್ಲಿ ನಟಿಸಿದ್ದ ಜಗದೀಶ್ ಸಿನಿರಸಿಕರ ಮನಗೆದ್ದಿದ್ದರು. ಆ ಸಿನಿಮಾ ಬಳಿಕ ಸಾಕಷ್ಟು ಅವಕಾಶಗಳು ಅರಸಿ ಬಂದಿತ್ತು. ಜಗದೀಶ್ ಪ್ರತಾಪ್ ಭಂಡಾರಿ ಆತ ಪೂರ್ಣ ಹೆಸರು. 2019ರಲ್ಲಿ 'ಮಲ್ಲೇಶಂ' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. 'ಜಾರ್ಜ್‌ ರೆಡ್ಡಿ', 'ಪಲಾಸ 1978' ಸಿನಿಮಾಗಳ ಬಳಿಕ 'ಪುಷ್ಪ' ಸಿನಿಮಾ ಅವಕಾಶ ಸಿಕ್ಕಿತ್ತು.

'ಪುಷ್ಪ' ಸಿನಿಮಾ ಬಳಿಕ 'ಪಿಕ್‌ಪಾಕೆಟ್', 'ವಿರಾಟ ಪರ್ವಂ', 'ಬುಟ್ಟಬೊಮ್ಮ', 'ಸತಿ ಗಣಿ ರೆಂಡು ಎಕರಾಲು' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಪುಷ್ಪ' ಸೀಕ್ವೆಲ್‌ನಲ್ಲೂ ಕೇಶವ ಪಾತ್ರ ಮುಂದುವರೆಸಿದ್ದಾರೆ. ಮುಂದಿನ ವರ್ಷ ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

'ಚಿವರಾಕು ಮಿಗಿಲೇದಿ', 'ಪಿಕ್‌ಪಾಕೆಟ್'-2: ದಿ ಮರ್ಡರ್ ಪ್ಲಾನ್ ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ಜಗದೀಶ್ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಯುವತಿಗೆ ಕಿರುಕುಳ ನೀಡಿನ ಪ್ರಕರಣದಲ್ಲಿ ಜೈಲು ಸೇರುವಂತಾಗಿದೆ.

More from Filmibeat

English summary
Pushpa Actor Arrested in Hyderabad;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X