ವಿಚಿತ್ರ ಪೈಪೋಟಿಗೆ ಸಾಕ್ಷಿ ಆಗ್ತಿದೆ ಸಂಕ್ರಾಂತಿ: ಕಣದಲ್ಲಿದ್ದಾರೆ ಶ್ರೀಲೀಲಾ, ಆಶಿಕಾ, ಶ್ರದ್ಧಾ

ಈ ವರ್ಷ ಸಂಕ್ರಾಂತಿಗೆ ಕನ್ನಡದ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗುತ್ತಿಲ್ಲ. ತಮಿಳಿನಲ್ಲಿ ಶಿವಣ್ಣ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಶುರುವಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಸಂಕ್ರಾಂತಿಗೂ 'ಕಾಟೇರ'ನ ಕಿಚ್ಚು ಮುಂದುವರೆಯುವ ಸಾಧ್ಯತೆಯಿದೆ.

ಅಂದಹಾಗೆ ಸುಗ್ಗಿ ಹಬ್ಬಕ್ಕೆ ತೆಲುಗು, ತಮಿಳಿನ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿವೆ. ತೆಲುಗಿನಲ್ಲಿ ಮಹೇಶ್ ಬಾಬು ನಟನೆಯ ಗುಂಟೂರು ಖಾರಂ, ವಿಕ್ಟರಿ ವೆಂಕಟೇಶ್ ನಟನೆಯ ಸೈಂಧವ್, ರವಿತೇಜಾ 'ಈಗಲ್', ನಾಗಾರ್ಜುನ 'ನಾ ಸಾಮಿ ರಂಗ' ಜೊತೆಗೆ 'ಹನುಮಾನ್' ಎನ್ನುವ ಹೊಸಬರ ಸಿನಿಮಾ ಕೂಡ ತೆರೆಗೆ ಬರ್ತಿದೆ. ಇನ್ನು ತಮಿಳಿನಲ್ಲಿ 'ಲಾಲ್ ಸಲಾಂ' ಹಾಗೂ 'ಕ್ಯಾಪ್ಟನ್ ಮಿಲ್ಲರ್' ಜೊತೆ ಮತ್ತೆರಡು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Shraddha Srinath, Ashika and sreeleela to test thire luck from tollywood in sankranthi

ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಸಂಕ್ರಾಂತಿ ದೊಡ್ಡ ಹಬ್ಬ. ಹಾಗಾಗಿ ಒಳ್ಳೆ ಸಿನಿಮಾಗಳು ಬಂದರೆ ಜನ ನೋಡುತ್ತಾರೆ ಎಂದು ಬಾಕ್ಸಾಫೀಸ್ ಕ್ಲ್ಯಾಶ್‌ಗೂ ಹೆದರದೇ ಸ್ಟಾರ್ ನಟರು ಪೈಪೋಟಿಗೆ ಇಳಿದಿದ್ದಾರೆ. ವಿಶೇಷ ಅಂದ್ರೆ ಸಂಕ್ರಾಂತಿಗೆ ಬಿಡುಗಡೆ ಆಗುತ್ತಿರುವ 3 ತೆಲುಗು ಸಿನಿಮಾಗಳಲ್ಲಿ ಕನ್ನಡ ನಟಿಯರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಹಾಗಾಗಿ ಈ ಮೂವರ ನಡುವೆ ವಿಚಿತ್ರ ಪೈಪೋಟಿ ಏರ್ಪಟ್ಟಿದೆ.

ಸಾಮಾನ್ಯವಾಗಿ ಬಾಕ್ಸಾಫೀಸ್ ಫೈಟ್ ಅಂದಾಕ್ಷಣ ಹೀರೊಗಳ ಹೆಸರುಗಳು ಮುನ್ನಲೆಗೆ ಬರುತ್ತದೆ. ಆದರೆ ಒಂದು ಸಿನಿಮಾ ಅಂದಮೇಲೆ ನಾಯಕಿಯ ಪಾತ್ರಕ್ಕೆ ಅದರದ್ದೇ ಆದ ಮಹತ್ವ ಇರುತ್ತದೆ. ಒಂದು ಸಕ್ಸಸ್ ಆಕೆಗೆ ಮತ್ತಷ್ಟು ಅವಕಾಶಗಳನ್ನು ತಂದುಕೊಡುತ್ತದೆ. ಇನ್ನು ಸತತ ಸೋಲುಗಳಿಂದ ಕಂಗೆಟ್ಟ ಶ್ರೀಲೀಲಾ, ಕನ್ನಡದಲ್ಲಿ ಒಳ್ಳೆ ಗೆಲುವು ಸಿಗದೇ ಟಾಲಿವುಡ್ ಪ್ರವೇಶಿಸಿದ ಆಶಿಕಾ ರಂಗನಾಥ್ ಹಾಗೂ ಆಗೊಂದು ಈಗೊಂದು ಸಿನಿಮಾ ಮಾಡುವ ಶ್ರದ್ಧಾ ಶ್ರೀನಾಥ್ ಈ ಲಿಸ್ಟ್‌ನಲ್ಲಿದ್ದಾರೆ.

Shraddha Srinath, Ashika and sreeleela to test thire luck from tollywood in sankranthi

ಕನ್ನಡ ನಟಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಕಮಾಲ್ ಮಾಡುತ್ತಿರುವುದು ಗೊತ್ತೇಯಿದೆ. ಕೆಲವೇ ದಿನಗಳಲ್ಲಿ ಭಾರೀ ಕ್ರೇಜ್‌ ಸೃಷ್ಟಿಸಿಕೊಂಡ ಚೆಲುವೆ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ನಟಿಸೋ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ರಶ್ಮಿಕಾ ಬಾಲಿವುಡ್‌ಗೆ ಹೋದರೆ ಶ್ರೀಲೀಲಾ ಟಾಲಿವುಡ್‌ನಲ್ಲಿ ಮಿಂಚ್ತಾರೆ ಎನ್ನಲಾಗಿತ್ತು. ಆದರೆ ಯಾಕೋ ಅಷ್ಟಾಗಿ ಸಕ್ಸಸ್ ಸಿಕ್ತಿಲ್ಲ. ಸದ್ಯ ಮಹೇಶ್ ಬಾಬು ಜೋಡಿಯಾಗಿ 'ಗುಂಟೂರು ಖಾರಂ' ಚಿತ್ರದಲ್ಲಿ ಶ್ರೀ ನಟಿಸಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ವಿಕ್ಟರಿ ವೆಂಕಟೇಶ್ ನಟನೆಯ 'ಸೈಂಧವ್' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ವೆಂಕಿ ಮಡದಿ ಪಾತ್ರದಲ್ಲಿ ಯೂಟರ್ನ್ ಬೆಡಗಿ ಕಾಣಿಸಿಕೊಂಡಿದ್ದಾರೆ. ಸೈಲೇಶ್ ಕೊಲನು ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಜನವರಿ 13ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಇನ್ನು ನಾಗಾರ್ಜುನ ಜೋಡಿಯಾಗಿ 'ನಾ ಸಾಮಿ ರಂಗ' ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಇದು ಆಕೆಗೆ ತೆಲುಗಿನಲ್ಲಿ 2ನೇ ಸಿನಿಮಾ. ಎಷ್ಟೇ ಗ್ಲಾಮರಸ್ ಆಗಿ ಕಾಣಿಕೊಂಡರೂ ಆಕೆಗೆ ಈವರೆಗ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಲಂಗಾ ದಾವಣಿಯಲ್ಲಿ ಮಿಂಚಿದ್ದಾರೆ. ಈ ಬಾರಿ ಆದರೂ ಸಕ್ಸಸ್ ಸಿಗುತ್ತಾ ಕಾದು ನೋಡಬೇಕು. ಕನ್ನಡದ ಮೂವರು ನಟಿಯರು ಟಾಲಿವುಡ್‌ನಿಂದ ಹೀಗೆ ಬಾಕ್ಸಾಫೀಸ್ ಫೈಟ್‌ಗೆ ಇಳಿಯುತ್ತಿರುವುದು ವಿಶೇಷ ಎನ್ನಬಹುದು.

More from Filmibeat

English summary
Sankranthi box office fight between kannada actresses Shraddha Srinath, Ashika & sreeleela;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X