ತೆಲುಗಿನ ಮತ್ತೊಂದು ಸಿನಿಮಾಗೆ ನಟಿ ಶ್ರದ್ಧಾ ಗ್ರೀನ್ ಸಿಗ್ನಲ್: ನಾಯಕ ಯಾರು?

ನಟಿ ಶ್ರದ್ಧಾ ಶ್ರೀನಾಥ್ ಸದ್ಯ ತೆಲುಗು ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿ ಶ್ರದ್ಧಾ ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಜೊತೆಗೆ ತಮಿಳು ಸಿನಿಮಾರಂಗದಲ್ಲೂ ಯು ಟರ್ನ್ ಸುಂದರಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಇದೀಗ ಶ್ರದ್ಧಾ ಮತ್ತೊಂದು ತೆಲುಗು ಸಿನಿಮಾಗೆ ಸಹಿ ಮಾಡಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣ ಮಾಡಿರುವ ಸಿತಾರ ಎಂಟರ್ ಟೇನ್ ಮೆಂಟ್ ಬ್ಯಾನರ್ ನಡಿಯಲ್ಲಿ ಶ್ರದ್ಧಾ ಹೊಸ ಸಿನಿಮಾ ಮೂಡಿಬರುತ್ತಿದೆ. ವಿಶೇಷ ಅಂದರೆ ಶ್ರದ್ಧಾ ತೆಲುಗು ನಟ ಸಿದ್ಧು ಜೊನ್ನಲಗದ್ದಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ಧು ಜೊತೆ ಇದು ಶ್ರದ್ಧಾಗೆ ಎರಡನೇ ಸಿನಿಮಾವಾಗಿದೆ.

ಇತ್ತೀಚಿಗಷ್ಟೆ ಕೃಷ್ಣ ಆಂಡ್ ಹಿಸ್ ಲೀಲಾ ಸಿನಿಮಾ ಮೂಲಕ ಸಿದ್ಧು ಮತ್ತು ಶ್ರದ್ಧಾ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಇದೀಗ ಮತ್ತದೆ ಜೋಡಿ ಒಂದಾಗಿ ಅಭಿಮಾನಿಗಳ ಮುಂದೆ ಬರಲು ಸಿದ್ಧವಾಗಿದೆ. ಅಂದ್ಹಾಗೆ ಚಿತ್ರಕ್ಕೆ 'ನರುಡಿ ಬ್ರತುಕು ನಟನ' ಎಂದು ಟೈಟಲ್ ಇಡಲಾಗಿದೆ. ಚಿತ್ರಕ್ಕೆ ವಿಮಲ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.

Shraddha Srinath Female Lead Opposite Siddhu Jonnalagadda In Narudi Brathuku Natana

ಶ್ರದ್ಧಾ ಸದ್ಯ ತಮಿಳಿನ ಮಾರ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಮಾಧವಾನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಶ್ರದ್ಧಾ ಎರಡನೇ ಬಾರಿ ಮಾಧವಾನ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಕ್ರಂ ವೇದ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು.

ಶ್ರದ್ಧಾ ಕನ್ನಡದಲ್ಲಿ ನೀನಾಸಂ ಸತೀಶ್ ನಟನೆಯ ಗೋಧ್ರಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿದ್ದು, ರಿಲೀಸ್ ಗೆ ರೆಡಿಯಾಗಿದೆ. ಇನ್ನೂ ರಿಷಬ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಜೊತೆಗೆ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾಗೂ ಶ್ರದ್ಧಾ ನಾಯಕಿ ಎಂದು ಹೇಳಲಾಗುತ್ತಿದೆ.

Recommended Video

Bhakta Prahlada ಚಿತ್ರದಲ್ಲಿ ನಟಿಸಿದ್ದಾರೆ ನನ್ನ ಭಾಗ್ಯ ಎಂದು ಕಣ್ಣೀರಿಟ್ಟ ಅಪ್ಪು | Filmibeat Kannada

More from Filmibeat

English summary
Actress Shraddha Srinath female opposite actor Siddhu Jonnalagadda in Narudi Brathuku Natana movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X