ಬಹುಭಾಷಾ ನಟಿ ಶ್ರೀಯಾ ಶರಣ್ ದಾಂಪತ್ಯದಲ್ಲಿ ಬಿರುಕು ? ಕಾರಣ ಕೇಳಿದರೆ ಆಶ್ಚರ್ಯ ಪಡ್ತೀರಾ !

ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಇನ್ನೂ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎನ್ನುವುದು ಹಿರಿಯರ ನಂಬಿಕೆ. ಆದರೆ.. ಈಗೀಗ ಮದುವೆ ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋತ ಅನೇಕರು ಮದುವೆಯ ಮಹತ್ವವನ್ನೇ ಮರೆಯುತ್ತಿದ್ದಾರೆ.

ಇನ್ನೂ.. ಬಣ್ಣದ ಲೋಕದಲ್ಲಿ ಈ ಮದುವೆ.. ಮನೆ.. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಇರುತ್ತಾರೆ. ಚಿಕ್ಕ ಚಿಕ್ಕ ವಿಚಾರಕ್ಕೆ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಹಲವಾರು ತಾರೆಯರು ಈ ಮದುವೆಯ ಸಂಕೋಲೆಯಿಂದ ಮುಕ್ತರಾಗಿದ್ದಾರೆ. ಈ ಸಾಲಿಗೆ ಈಗ ಶ್ರೀಯಾ ಶರಣ್ ಕೂಡ ಸೇರಿಕೊಂಡಿದ್ದಾರೆ ಎನ್ನುವುದೇ ಸದ್ಯದ ಬ್ರೇಕಿಂಗ್ ನ್ಯೂಸು.

Shriya Saran s Marriage on the Rocks Secret Russian Daughter and Granddaughter Fuel Divorce Rumour

ಹೌದು, ಒಂದ್ಕಾಲದಲ್ಲಿ ಎಳೆ ಹುಡುಗರಿಂದ ಹಿಡಿದು ಹಣ್ಣಣ್ಣು ಮುದುಕರ ತನಕ ಎಲ್ಲರ ನಿದ್ದೆ ಗೆಡಿಸಿದ್ದ, ಕನ್ನಡದಲ್ಲಿ ''ಅರಸು''.. ''ಚಂದ್ರ.. ಮತ್ತು ''ಕಬ್ಜಾ'' ಚಿತ್ರಗಳಲ್ಲಿ ಅಭಿನಯಿಸಿರುವ ಶ್ರೀಯಾ, ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ 2018ರಲ್ಲಿ ರಷ್ಯಾದ ಟೆನ್ನಿಸ್ ಅಟಗಾರ ಮತ್ತು ಉದ್ಯಮಿಯಾಗಿ ಕೂಡ ಗುರುತಿಸಿಕೊಂಡ ''ಆಂಡ್ರೇ ಕೊಸ್ಚೀವ್'' ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆ ಸಮಾರಂಭದಲ್ಲಿ ಶ್ರೀಯಾ ಮತ್ತು ಆಂಡ್ರೆ ಅವರ ಕುಟುಂಬ ವರ್ಗದವರು ಮತ್ತು ಸ್ನೇಹಿತರು ಭಾಗವಹಿಸಿದ್ದರು. ತಮನ್ನಾ.. ಕಾಜಲ್ ಅಗರ್‌ವಾಲ್ ಸೇರಿ ಶ್ರೀಯಾ ಅವರ ಕೆಲ ಚಿತ್ರರಂಗದ ಸ್ನೇಹಿತರು ಕೂಡ ಮದುವೆಗೆ ಬಂದು ಶುಭ ಹಾರೈಸಿದ್ದರು.

ಶ್ರೀಯಾ ಮತ್ತು ಆಂಡ್ರೇ ಅವರ ಪ್ರೀತಿಯ ಸಂಕೇತವಾಗಿ ಈ ಜೋಡಿಗೆ ''ರಾಧಾ'' ಎಂಬ ಮುದ್ದಾದ ಮಗಳು ಕೂಡ ಇದ್ದಾಳೆ. ಆದರೆ ಈಗ ಈ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿರುಗಾಳಿ ಎದ್ದಿದೆ. 07 ವರ್ಷದ ದಾಂಪತ್ಯ ಜೀವನ ಯಾವ ಕ್ಷಣದಲ್ಲಾದರೂ ಮುರಿದು ಬೀಳಬಹುದು ಎನ್ನುವ ಮಾತು ಅಷ್ಟದಿಕ್ಕುಗಳಿಂದಲೂ ಕೇಳಿ ಬರುತ್ತಿದೆ. ಈ ಎಲ್ಲಾ ರಾದ್ಧಾಂತಕ್ಕೆ ಶ್ರೀಯಾ ಅವರ ಗಂಡ ಆಂಡ್ರೇ ಕೊಸ್ಚೀವ್ ''ಮೊಮ್ಮಗಳೇ'' ಕಾರಣ ಎಂಬ ಸುದ್ದಿ ಕೂಡ ಸದ್ಯ ಹಲವರನ್ನು ನಿಬ್ಬೇರಗಾಗಿಸಿದೆ. ಅರೇ ಶ್ರೀಯಾ ಮತ್ತು ಆಂಡ್ರೇಗೆ 5 ವರ್ಷದ ಮಗಳಿದ್ದಾಳೆ. ಹೀಗಿರುವಾಗ ಮೊಮ್ಮಗಳು ಎಲ್ಲಿಂದ ಬಂದಳು ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅಚ್ಚರಿ ಆದರೂ ಇದೇ ಸತ್ಯ.

ಹೌದು, ಅಸಲಿಗೆ ಶ್ರೀಯಾ ಅವರಿಗಿಂತ ಆಂಡ್ರೇ ಕೊಸ್ಟೀವ್ ಹನ್ನೆರಡು ವರ್ಷ ದೊಡ್ಡವರು. 1970ರಲ್ಲಿ ಆಂಡ್ರೇ ಹುಟ್ಟಿದ್ದರೆ ಶ್ರಿಯಾ ಈ ಭೂಮಿಗೆ ಬಂದಿದ್ದು 1982ರಲ್ಲಿ.ವಿಶೇಷ ಅಂದರೆ ಶ್ರೀಯಾ ಅವರನ್ನು ಪ್ರೀತಿಸುವ ಮುನ್ನವೇ.. 2018ರಲ್ಲಿ ಮದುವೆಯಾಗುವ ಮುನ್ನವೇ.. ಆಂಡ್ರೇ ಕೊಸ್ಟೀವ್ ರಷ್ಯಾದ ಮಹಿಳೆಯನ್ನು 1994ರಲ್ಲಿಯೇ ಮದುವೆಯಾಗಿದ್ದರು. ಈ ಮದುವೆಯಿಂದ ಇವರಿಗೆ 1995ರಲ್ಲಿ ಮಗಳೊಬ್ಬಳು ಜನಿಸಿದ್ದಳು.

Shriya Saran s Marriage on the Rocks Secret Russian Daughter and Granddaughter Fuel Divorce Rumour

ಆ ನಂತರ ಐದು ವರ್ಷ ರಷ್ಯಾದ ಮಹಿಳೆಯ ಜೊತೆ ಸಂಸಾರ ಮಾಡಿದ ಆಂಡ್ರೇ 2000ನೇ ಇಸ್ವಿಯಲ್ಲಿ ತಮ್ಮ ಮೊದಲ ಪತ್ನಿಯಿಂದ ದೂರವಾದರು. ತಮ್ಮ ಮಗಳನ್ನು ತಾವೇ ಸಾಕಿ ಸಲುಹಲು ಶುರು ಮಾಡಿದರು.

ಆಂಡ್ರೇ ಕೊಸ್ಟೀವ್‌ಗೆ ಅದಾಗಲೇ ಮದುವೆಯಾಗಿ ಮಗು ಇರುವ ವಿಚಾರ ಶ್ರೀಯಾ ಸರಣ್ ಅವರಿಗೆ ಎಷ್ಟರ ಮಟ್ಟಿಗೆ ಗೊತ್ತಿತ್ತು, ಗೊತ್ತಿಲ್ಲವೆನ್ನುವುದು ನಮಗೆ ಗೊತ್ತಿಲ್ಲವಾದರೂ ಸದ್ಯ ಆಂಡ್ರೇ ಅವರ ಮೊದಲ ಮಗಳಿಗೆ ಮದುವೆಯಾಗಿದ್ದು ಆಕೆಗೆ ಮಗು ಕೂಡ ಹುಟ್ಟಿರುವ ವಿಚಾರವನ್ನೂ ಸೋಶಿಯಲ್ ಮೀಡಿಯಾದ ಮತ್ತೊಂದು ವೇದಿಕೆಯಾದ ''ರೆಡ್ಡಿಟ್''ನಲ್ಲಿ ಬಳಕೆದಾರರು ಪತ್ತೆ ಹಚ್ಚಿದ್ದಾರೆ. ಈ ಕುರಿತು ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ.

ಆ ಪ್ರಕಾರ ನೋಡುವುದಾದರೆ ಶ್ರೀಯಾ ಸರಣ್ ಅವರ ಜೊತೆ ಮದುವೆಯಾಗುವ ಮುಂಚೆ ಮತ್ತು ನಂತರ ಆಂಡ್ರೇ ತಮ್ಮ ಮೊದಲ ಪತ್ನಿಯಿಂದ ಜನಿಸಿದ ತಮ್ಮ ಮಗಳ ಖರ್ಚು ವೆಚ್ಚವನ್ನೆಲ್ಲಾ ನೋಡಿಕೊಳ್ಳುತ್ತಿದ್ದರು. ಈಗ ಮೊಮ್ಮಗಳು ಹುಟ್ಟಿರುವ ಕಾರಣಕ್ಕೆ ಆಂಡ್ರೇ ತಮ್ಮ ಮಗಳ ಜೊತೆ ಮೊಮ್ಮಗಳ ಖರ್ಚುಗಳನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ. ಈ ವಿಚಾರ ಶ್ರೀಯಾ ಅವರ ಗಮನಕ್ಕೆ ಬಂದಿದ್ದು ಇದೇ ವಿಚಾರಕ್ಕೆ ಗಂಡ-ಹೆಂಡತಿಯ ನಡುವೆ ದಿನನಿತ್ಯ ಜಗಳ ಶುರುವಾಗುತ್ತಿದೆ.

ಕೆಲವರು ಇಲ್ಲಿ ಆಂಡ್ರೇ ಕೊಸ್ಟೀವ್ ಪರ ವಕಾಲತ್ತು ವಹಿಸುತ್ತಿದ್ದರೆ, ಇನ್ನೂ ಕೆಲವರು ಶ್ರೀಯಾ ಸರಣ್ ಅವರ ಪರ ಮಾತನಾಡುತ್ತಿದ್ಧಾರೆ. ಮೊದಲ ಪತ್ನಿಯ ಮಗಳು ಮತ್ತು ಆಕೆಯ ಮಗುವನ್ನು ನೋಡಿಕೊಳ್ಳುವುದರಲ್ಲಿ ತಪ್ಪೇನು ಇದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ತಮ್ಮ ಪತಿಯ ಹಣ ಬೇರೆಯವರ ಪಾಲಾಗುತ್ತಿರುವುದು ಕಂಡು ಶ್ರೀಯಾಗೆ ದುಖವಾಗುತ್ತಿರಬಹುದು ಎನ್ನುತ್ತಿದ್ದಾರೆ. ತಂದೆಯ ಸಂಪೂರ್ಣ ಪ್ರೀತಿ ತನ್ನ ಮಗಳು ರಾಧಾಗೆ ಸಿಗುತ್ತೆ ಎಂದು ಶ್ರೀಯಾ ಅಂದುಕೊಂಡಿದ್ದರು ಆದರೆ ಅವರ ನಿರೀಕ್ಷೆ ಈಗ ಹುಸಿಯಾಗಿದೆ ಎನ್ನುವ ಅಭಿಪ್ರಾಯವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ಧಾರೆ.

shriya-sarans-marriage-on-the-rocks-secret-russian-daughter-and-granddaughter-fuel-divorce-rumour

ಇನ್ನೂ ನಡೆಯುತ್ತಿರುವ ಈ ಚರ್ಚೆಗಳಿಗೆ ಪೂರಕವಾಗಿ ಮೊದಲೆಲ್ಲಾ ಹೋದಲ್ಲಿ.. ಬಂದಲ್ಲಿ.. ಕುಂತಲ್ಲಿ.. ನಿಂತಲ್ಲಿ.. ತಮ್ಮ ಪತಿ ಆಂಡ್ರೇ ಕೊಸ್ಟೀವ್ ಜೊತೆ ಕಾಣಿಸಿಕೊಳ್ಳುತ್ತಿದ್ದ ಶ್ರೀಯಾ ಕೆಲ ದಿನಗಳಿಂದ ಒಬ್ಬರೇ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಿದ್ದಾರೆ. ಒಬ್ಬರೇ ಓಡಾಡುತ್ತಿದ್ಧಾರೆ. ಈ ಹಿನ್ನೆಲೆ ಹಲವರಲ್ಲಿನ ಅನುಮಾನ ಈಗ ಇನ್ನೂ ಹೆಚ್ಚಾಗಿದೆ. ನಿಜಾಂಶವೇನು..? ಖುದ್ದು ಶ್ರೀಯಾ ಸರಣ್‌ ಅವರೇ ಈ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಉತ್ತರವನ್ನು ನೀಡಬೇಕು.

shriya-sarans-marriage-on-the-rocks-secret-russian-daughter-and-granddaughter-fuel-divorce-rumour

More from Filmibeat

English summary
Is Shriya Saran heading for divorce? A shocking Reddit post alleges marital trouble with husband Andrei Koscheev over his daughter and granddaughter. Get the inside scoop on the celebrity couple's rumoured split.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X