For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಸಿನಿಮಾಗೆ ಆಯ್ಕೆಯಾಗಿ ಟ್ರೋಲ್ ಗೆ ಗುರಿಯಾದ ನಟಿ ಶ್ರುತಿ ಹಾಸನ್

  |

  ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಚಿತ್ರಕ್ಕೆ ಸಾಕಷ್ಟು ಬಾಲಿವುಡ್ ನಾಯಕಿಯರ ಹೆಸರುಗಳು ಸಹ ಕೇಳಿಬರುತ್ತಿತ್ತು. ಆದರೀಗ ಶ್ರುತಿ ಹಾಸನ್ ಆಯ್ಕೆಯಾಗುವ ಮೂಲಕ ಕುತೂಹಲಕ್ಕೆ ತೆರೆಎಳೆದಿದ್ದಾರೆ.

  ಶ್ರುತಿ ಹಾಸನ್ ಆಯ್ಕೆಯಾಗುತ್ತಿದ್ದಂತೆ ಕನ್ನಡಾಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಶ್ರುತಿ ಹಾಸನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಶ್ರುತಿ ಹಾಸನ್ ಈ ಹಿಂದೆ ಕನ್ನಡ ಸಿನಿಮಾರಂಗದ ಬಗ್ಗೆ ಆಡಿರುವ ಮಾತುಗಳು.ಪ್ರ

  ಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್ಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್

  ಈ ಹಿಂದೆ ಶ್ರುತಿ ಹಾಸನ್ ಕನ್ನಡ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಶ್ರುತಿ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಈಗ ಟ್ರೋಲಿಗರಿಗೆ ಆಹಾರವಾಗಿದೆ. ಶ್ರುತಿ ಮಾಡಿರುವ ಟ್ವೀಟ್ ನಲ್ಲಿ, 'ಸದ್ಯಕ್ಕೆ ಕನ್ನಡ ಸಿನಿಮಾ ಮಾಡುವ ಬಗ್ಗೆ ನನಗೆ ಯಾವುದೇ ಪ್ಲ್ಯಾನ್ ಇಲ್ಲ. ಈ ಕುರಿತಾಗಿ ನಾನು ಯಾರ ಜೊತೆಯೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ' ಎಂದು ಹೇಳಿದ್ದಾರೆ.

  2017ರಲ್ಲಿ ಮಾಡಿರುವ ಟ್ವೀಟ್ ಈಗ ಶ್ರುತಿ ಹಾಸನ್ ಗೆ ಮುಳವಾಗಿದೆ. ಕನ್ನಡ ಸಿನಿಮಾ ಮಾಡಲ್ಲ ಎಂದು ಈಗ ಯಾಕೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೀರಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಕನ್ನಡದ ಬಗ್ಗೆ ಅಂದು ಮಾತನಾಡಿ ಇಂದು ಕನ್ನಡ ನಿರ್ಮಾಣ ಸಂಸ್ಥೆ, ಕನ್ನಡ ನಿರ್ದೇಶಕನ ಸಿನಿಮಾದಲ್ಲಿ ನಟಿಸಲು ಹೇಗೆ ಮನಸ್ಸು ಬಂತು ಎಂದು ಕೇಳುತ್ತಿದ್ದಾರೆ. ಶ್ರುತಿ ಟ್ವೀಟ್ ಗೆ ಸಾಕಷ್ಟು ಕಾಮೆಂಟ್ ಗಳು ಹರಿದುಬರುತ್ತಿದೆ.

  ಮಾಜಿ ಗೆಳೆಯನ ರಾಬರ್ಟ್ ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್ | Sudeep | Darshan | Roberrt

  ಸಲಾರ್ ಸಿನಿಮಾ ಅನೇಕ ಕಾರಣಗಳಿಂದ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಹೊಂಬಾಳೆ ಫಿಲ್ಮ್ಸ್ ಪ್ರಭಾಸ್ ನನ್ನು ನಾಯಕನನ್ನಾಗಿ ಆಯ್ಕೆ ಮಾಡಿದಾಗಲೇ ಕನ್ನಡಿಗರು ರೊಚ್ಚಿಗೆದ್ದಿದ್ದರು. ಕನ್ನಡ ನಾಯಕನ ಜೊತೆ ಸಿನಿಮಾ ಮಾಡುವ ಬದಲು ತೆಲುಗು ನಟನ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದೀಗ ಶ್ರುತಿ ಹಾಸನ್ ಆಯ್ಕೆ ಸಹ ಕನ್ನಡ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

  English summary
  Actress Shruti Haasan gets trolled after announcing heroine of Salaar movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X