'ಸಲಾರ್'ನಲ್ಲಿ ಶ್ರುತಿ ಹಾಸನ್ ಎರಡು ಶೇಡ್!

ನಟಿ ಶ್ರುತಿ ಹಾಸನ್ ಕಮ್ ಬ್ಯಕ್ ಬಳಿಕ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶ್ರುತಿ ಹಾಸನ್ ಸಲಾರ್ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಶ್ರುತಿ ಮತ್ತು ಪ್ರಭಾಸ್ ಕಾಂಬಿನೇಶನ್ ಸಲಾರ್ ಸಿನಿಮಾದಲ್ಲಿ ಶ್ರುತಿ ಲುಕ್ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿವೆ.

ಇನ್ನು ಶ್ರುತಿ ಇತ್ತೀಚೆಗೆ ಕೆಲವು ದಿನಗಳ ಹಿಂದೆ ಸಲಾರ್ ಸೆಟ್‌ನಲ್ಲಿ ಇರುವ ಫೊಟೋ ಹಂಚಿಕೊಂಡಿದ್ದರು. ಈಗ ಮತ್ತೊಂದು ಫೋಟೋ ಹಂಚಿಕೊಂಡು ತಮ್ಮ ಲುಕ್ ರಿವೀಲ್ ಮಾಡಿದ್ದಾರೆ.

ಈ ಬಾರಿ ಶ್ರುತಿ ಮಾಡ್ರನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವಿಡಿಯೋಗೆ ಬ್ಯಾಕ್ ಅಂಡ್ ವೈಟ್ ಎಫೆಕ್ಟ್ ಹಾಕಿದ್ದಾರೆ. ಶ್ರುತಿ ಸಿಕ್ಕಾಪಟ್ಟೆ ಗ್ಲಾಮಸ್ ಆಗಿ ಕಾಣಿಸಿಕೊಂಡು ತಮ್ಮ ಪಾತ್ರದ ಬಗ್ಗೆ ಕುತುಹಲ ಮೂಡಿದ್ದಾರೆ. ಶ್ರುತಿ ಹಾಸನ್ ಈ ವಿಡಿಯೋ ವೈರಲ್ ಲಿಸ್ಟ್ ಸೇರಿದೆ.

'ಸಲಾರ್' ಲುಕ್ ಹಂಚಿಕೊಂಡ ಶ್ರುತಿ ಹಾಸನ್!

ನಟಿ ಶ್ರುತಿ ಹಲವು ದಿನಗಳ ಬಳಿಕ ತಮ್ಮ ಹೊಸದೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಕೆಲವೇ ಸೆಕೆಂಡುಗಳ ಈ ವಿಡಿಯೋದಲ್ಲಿ ಶ್ರುತಿ ಯಾವುದೇ ಹೇಳಿಕೆ ನೀಡಿಲ್ಲ. ಬದಲಿಗೆ ಸಲಾರ್ ಶೂಟಿಂಗ್ ಅಂತ ಮಾತ್ರ ಬರೆದುಕೊಂಡಿದ್ದಾರೆ. ಈ ಹಿಂದೆ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಶ್ರುತಿ ಈಗ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಭರ್ಜರಿಯಾಗಿ ನಡೀತಿಗೆ 'ಸಲಾರ್' ಶೂಟಿಂಗ್!

ಭರ್ಜರಿಯಾಗಿ ನಡೀತಿಗೆ 'ಸಲಾರ್' ಶೂಟಿಂಗ್!

'ಸಲಾರ್' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಪ್ರಭಾಸ್ ಮತ್ತು ಶ್ರುತಿ ಹಾಸನ್ ಸೇರಿದಂತೆ ಎಲ್ಲಾ ಕಲಾವಿದರು ಭಾಗಿ ಆಗಿದ್ದಾರೆ. ಶ್ರುತಿ ಲುಕ್ ರಿವೀಲ್ ಆಗಿದ್ದು, ಈ ಸಿನಿಮಾದಲ್ಲಿ ಶ್ರುತಿಗೆ ಸ್ಟ್ರಾಂಗ್ ರೋಲ್ ಇದೆ ಎನ್ನುವುದು ಪಕ್ಕಾ ಆಗುತ್ತದೆ. ವೇಗವಾಗಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸದ್ಯದಲ್ಲೇಯೇ ಕುಂಬಳಕಾಯಿ ಹೊಡೆಯಲಾಗುತ್ತದೆ.

ಪ್ರಭಾಸ್ ಲುಕ್ ಕೂಡ ವೈರಲ್ ಆಗುತ್ತು!

ಇತ್ತೀಚೆಗೆ ಪ್ರಶಾಂತ್ ನೀಲ್ 'ಸಲಾರ್' ಶೂಟಿಂಗ್‌ ಅನ್ನು ಫುಲ್ ಸ್ವಿಂಗ್‌ನಲ್ಲಿ ಆರಂಭಿಸಿದ್ದರು. ಅದೆಷ್ಟೇ ಸ್ಟ್ರಿಕ್ಟ್ ಆಗಿದ್ದರೂ, ಪ್ರತಿ ಬಾರಿ ಶೂಟಿಂಗ್ ಆರಂಭ ಮಾಡಿದಾಗಲೆಲ್ಲಾ ಸೆಟ್ಟಿನಿಂದ ಒಂದಲ್ಲಾ ಒಂದು ಫೋಟೊ ಲೀಕ್ ಆಗುತ್ತಲೇ ಇದೆ. ಈ ಬಾರಿ ಕೂಡ ಪ್ರಭಾಸ್ ಫೋಟೊ ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮತ್ತೆ ಪ್ರಭಾಸ್ ನೋಡಿ ಡಾರ್ಲಿಂಗ್ ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದಾರೆ.

ಸಲಾರ್ ರಿಲೀಸ್ ದಿನಾಂಕ ಪ್ರಕಟ?

ಸಲಾರ್ ರಿಲೀಸ್ ದಿನಾಂಕ ಪ್ರಕಟ?

ಅಕ್ಟೋಬರ್‌ನಲ್ಲಿ 'ಸಲಾರ್' ಚಿತ್ರದ ಶೂಟಿಂಗ್ ಮುಕ್ತಾಯ ಆಗಲಿದೆ. 'ಸಲಾರ್' ಸಿನಿಮಾದ ಶೂಟಿಂಗ್ ಈಗಾಗಲೇ ಶೇ.30 ರಿಂದ 35ರಷ್ಟು ಮುಗಿದಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾಗಿದೆ. ಅಲ್ಲದೆ ಅಕ್ಟೋಬರ್‌ಗೆ ಸಿನಿಮಾ ಶೂಟಿಂಗ್ ಮುಗಿಯುತ್ತೆ ಅಂತಲೂ ಹೇಳಿದ್ದಾರೆ. ಹೀಗಾಗಿ 'ಸಲಾರ್' ರಿಲೀಸ್ ಯಾವಾಗ ಅನ್ನುವ ಲೆಕ್ಕಾಚಾರಾ ಈಗಾಗಲೇ ಶುರುವಾಗಿದೆ.

More from Filmibeat

English summary
Shruti Haasan Have Two Shades In Salaar, Video Viral, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X