ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ. ಪ್ರಭಾಸ್ ಜೊತೆ ಯಾರು ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ.

ಹೌದು, ಬಾಹುಬಲಿ ಸ್ಟಾರ್ ಪ್ರಭಾಸ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಲಾರ್ ಸಿನಿಮಾತಂಡ ಅಧಿಕೃತವಾಗಿ ಬಹಿರಂಗ ಪಡಿಸಿದೆ. ಮೊದಲ ಬಾರಿಗೆ ಶ್ರುತಿ ಹಾಸನ್ ಮತ್ತು ಪ್ರಭಾಸ್ ಒಟ್ಟಿಗೆ ನಟಿಸುತ್ತಿದ್ದು, ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಶ್ರುತಿ ಹಾಸನ್ ಗೆ ಹುಟ್ಟುಹಬ್ಬದ ಸಂಭ್ರಮ

ಶ್ರುತಿ ಹಾಸನ್ ಗೆ ಹುಟ್ಟುಹಬ್ಬದ ಸಂಭ್ರಮ

ಅಂದಹಾಗೆ ಇಂದು ಶ್ರುತಿ ಹಾಸನ್ ಹುಟ್ಟಿದ ದಿನ. 35ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಶ್ರುತಿ ಹಾಸನ್ ಗೆ ಸಲಾರ್ ಸಿನಿಮಾತಂಡ ಬಿಗ್ ಗಿಫ್ಟ್ ನೀಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿರುವ ಹೊಂಬಾಳೆ ಫಿಲ್ಮ್ಸ್, 'ಹುಟ್ಟುಹಬ್ಬದ ಶುಭಾಶಯಗಳು ಶ್ರುತಿ ಹಾಸನ್. ನೀವು ತೆರೆಮೇಲೆ ನಟಿಸುವುದನ್ನು ನೋಡಲು ಕಾತರರಾಗಿದ್ದೇವೆ' ಎಂದು ಹೇಳಿದ್ದಾರೆ.

ಶ್ರುತಿ ಹಾಸನ್ ಗೆ ವಿಶ್ ಮಾಡಿದ ಪ್ರಭಾಸ್

ಶ್ರುತಿ ಹಾಸನ್ ಗೆ ವಿಶ್ ಮಾಡಿದ ಪ್ರಭಾಸ್

ಇನ್ನು ನಟ ಪ್ರಭಾಸ್ ಸಹ ಶ್ರುತಿ ಹಾಸನ್ ಗೆ ವಿಶ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪ್ರಭಾಸ್, ಹುಟ್ಟುಹಬ್ಬದ ಶುಭಾಶಯಗಳು ಶ್ರುತಿ ಹಾಸನ್. ನಿಮ್ಮ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

29ರಿಂದ ಚಿತ್ರೀಕರಣ ಪ್ರಾರಂಭ

29ರಿಂದ ಚಿತ್ರೀಕರಣ ಪ್ರಾರಂಭ

ಬಹುನಿರೀಕ್ಷೆಯ ಸಲಾರ್ ಸಿನಿಮಾ ಜನವರಿ 29ರಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. 25 ದಿನಗಳು ಶೂಟಿಂಗ್ ನಡೆಯಲಿದ್ದು, ಆಕ್ಷನ್ ದೃಶ್ಯ ಸೆರೆಹಿಡಿಯಲಾಗುತ್ತಿದೆ ಎನ್ನಲಾಗುತ್ತಿದೆ.

Recommended Video

ಅದ್ದೂರಿಯಾಗಿತ್ತು Dubai ನಲ್ಲಿ Kiccha ನಿಗೆ ನೀಡಿದ ಸ್ವಾಗತ | Filmibeat Kannada
ವಿಜಯ್ ಸೇತುಪತಿ ವಿಲನ್?

ವಿಜಯ್ ಸೇತುಪತಿ ವಿಲನ್?

ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಸಿನಿಮಾತಂಡ ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಇನ್ನೂ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

More from Filmibeat

English summary
Actress Shruti Haasan romance with Prabhas in Salaar Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X