Shruti Haasan: "ಸಲಾರ್ ನನ್ನ ಸಿನ್ಮಾ ಅಲ್ಲ.. ಆ ವಿಚಾರದಲ್ಲಿ ನನಗೆ ಬೇಸರವಿಲ್ಲ": ಶ್ರುತಿ ಹಾಸನ್

Shruti Haasan: ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ 48 ದಿನಗಳು ಮಾತ್ರ ಬಾಕಿಯಿದೆ. ಇನ್ನು ಸಿನಿಮಾ ಪ್ರಚಾರ ಶುರು ಮಾಡಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಟ್ರೈಲರ್, ಸಾಂಗ್ ರಿಲೀಸ್ ಯಾವಾಗ ಎಂದು ಕೇಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಮಾತ್ರ ಸರಿಯಾದ ಟೈಮ್‌ಗೆ ಎಲ್ಲವನ್ನು ಪರಿಪಕ್ವವಾಗಿ ಮಾಡಿ ಬಾಕ್ಸಾಫೀಸ್ ದೋಚುವ ಲೆಕ್ಕಚಾರದಲ್ಲಿದ್ದಾರೆ.

'KGF' ಸರಣಿ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಂಗ್ ರೆಬಲ್ ಸ್ಟಾರ್ ಆರ್ಭಟ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ನೀಲ್ ಎಲಿವೇಷನ್ಸ್‌ಗೆ, ಪ್ರಭಾಸ್ ಪರ್ಫಾರ್ಮೆನ್ಸ್ ಸಿಂಕ್ ಆದ್ರೆ ತೆರೆಮೇಲೆ ಎಂತಹ ಮ್ಯಾಜಿಕ್ ಕ್ರಿಯೇಟ್ ಆಗುತ್ತದೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಇನ್ನು ಅದಕ್ಕೆ ರವಿ ಬಸ್ರೂರು ಸಂಗೀತ ಜೊತೆಯಾದರೆ ನೋಡುಗರಿಗೆ ಬಾಡೂಟ ಗ್ಯಾರೆಂಟಿ ಎನ್ನುವ ಚರ್ಚೆ ನಡೀತಿದೆ.

Salaar is Prabhas and Prashanth neels film says Shruti Haasan

'ಸಲಾರ್' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಆದ್ಯಾ ಎನ್ನುವ ಪಾತ್ರದಲ್ಲಿ ಆಕೆ ಮಿಂಚಿದ್ದಾರೆ. 5 ಭಾಷೆಗಳಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಡಿಸೆಂಬರ್ 22ಕ್ಕೆ 'ಸಲಾರ್' ಸಿನಿಮಾ ಬಿಡುಗಡೆಯಾಗುತ್ತದೆ. ಅದೇ ವೀಕೆಂಡ್‌ನಲ್ಲಿ ಶಾರುಖ್ ಖಾನ್ ನಟನೆಯ 'ಡಂಕಿ', ಮೋಹನ್ ಲಾಲ್ ಅಭಿನಯದ 'ನೆರು' ಸಿನಿಮಾಗಳು ತೆರೆಗೆ ಬರ್ತಿವೆ. 'ಸಲಾರ್' ಚಿತ್ರಕ್ಕಾಗಿ ಪ್ರಭಾಸ್ ಅಭಿಮಾನಿಗಳು ಮಾತ್ರವಲ್ಲ ಇತರೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ನೀಲ್- ಪ್ರಭಾಸ್ ಕಾಂಬಿನೇಷನ್‌ ಕುತೂಹಲ ಮೂಡಿಸಿದೆ. ಇದೇ ಕಾರಣಕ್ಕೆ ಮೊದಲಿನಿಂದಲೂ ಈ ಚಿತ್ರವನ್ನು ಪ್ರಭಾಸ್- ನೀಲ್ ಸಿನಿಮಾ ಅಂತ್ಲೇ ಬಿಂಬಿಸಲಾಗುತ್ತಿದೆ. ಅದೇ ರೀತಿ ಪ್ರಚಾರ ನಡೆಯುತ್ತಿದೆ. ನಾಯಕಿ ಶ್ರುತಿ ಹಾಸನ್ ಹೆಸರು ಹೆಚ್ಚಾಗಿ ಪ್ರಸ್ತಾಪ ಆಗುತ್ತಿಲ್ಲ. ಟೀಸರ್‌ನಲ್ಲೂ ಆಕೆಯ ದರ್ಶನವಾಗಲಿಲ್ಲ. ಈ ಬಗ್ಗೆ ಆಕೆಯ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ಪ್ರಶ್ನೆಯನ್ನು NDTV ಸಂದರ್ಶನವೊಂದರಲ್ಲಿ ಶ್ರುತಿ ಮುಂದಿಡಲಾಗಿದೆ.

ಇಂಟ್ರೆಸ್ಟಿಂಗ್ ಪ್ರಶ್ನೆಗೆ ಉತ್ತರಿಸಿದ ಶ್ರುತಿ ಹಾಸನ್ "ನಿಜ ಹೇಳಬೇಕು ಎಂದರೆ ಇದು ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ. ಅದೇ ವಾಸ್ತವ. ಕತೆಯ ವಿಚಾರಕ್ಕೆ ಬಂದರೂ ಅದು ಯಾರ ಕತೆ ಅಂದರೆ ಚಿತ್ರದಲ್ಲಿ ನಾಯಕನ ಕತೆ. 'ಸಲಾರ್' ಎಲ್ಲರ ಸಿನಿಮಾ ಹೌದು. ಆದರೂ ಪ್ರಭಾಸ್, ಪ್ರಶಾಂತ್ ನೀಲ್ ಸಿನಿಮಾ. ಆದರೆ ಇದು ಶ್ರುತಿ ಸಿನಿಮಾ ಅಲ್ಲ. ಆಕೆಯೂ ಅದರ ಭಾಗ ಅಷ್ಟೆ. ಪರವಾಗಿಲ್ಲ. ಅದರಲ್ಲೇನು ಬೇಸರವಿಲ್ಲ" ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ಶ್ರುತಿ ಹಾಸನ್ "ಸಲಾರ್ ನನಗೆ ಸಿನಿಮಾಗಿಂದ ದೊಡ್ಡದು. ಒಂದು ಕುಟುಂಬ ನನಗೆ ಸಿಕ್ಕಂತಾಯಿತು. ಎಲ್ಲರೂ ಬಹಳ ಶ್ರಮವಹಿಸಿ ಸಿನಿಮಾ ಮಾಡಿದ್ದೇವೆ. ಬಹಳ ದೊಡ್ಡ ಆಕ್ಷನ್ ಸಿನಿಮಾ. ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ನಾನು ಯಾವುದೇ ಆಕ್ಷನ್ ಸೀಕ್ವೆನ್ಸ್‌ನಲ್ಲಿ ನಟಿಸಿಲ್ಲ" ಎಂದಿದ್ದರು.

'ಸಲಾರ್' ಸಿನಿಮಾ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಮೊದಲ ಭಾಗ ಡಿಸೆಂಬರ್ 22ಕ್ಕೆ ರಿಲೀಸ್ ಆಗುತ್ತಿದ್ದು 2ನೇ ಭಾಗದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನು 'ಸಲಾರ್' ಕನ್ನಡದ 'ಉಗ್ರಂ' ಸಿನಿಮಾ ರೀಮೆಕ್ ಎನ್ನುವ ಚರ್ಚೆ ಕೂಡ ನಡೀತಿದೆ. ಅದೇ ಕತೆಯನ್ನು ಬಹಳ ದೊಡ್ಡದಾಗಿ ನೀಲ್ ಈ ಬಾರಿ ತೆರೆಗೆ ತರುತ್ತಿದ್ದಾರೆ ಎನ್ನಲಾಗ್ತಿದೆ.

ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ದೇವರಾಜ್, ಭಜರಂಗಿ ಲೋಕಿ ಸೇರಿದಂತೆ ದೊಡ್ಡ ತಾರಾಗಣ 'ಸಲಾರ್' ಚಿತ್ರದಲ್ಲಿದೆ. ಯಶ್ ಕೂಡ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿ ಬರ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ.

More from Filmibeat

English summary
Shruti Haasan interesting comments on Prabhas starrer Salaar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X