ಶೃತಿ ಹಾಸನ್ ಬಾಯ್‌ಫ್ರೆಂಡ್‌, ಡೇಟಿಂಗ್: ಮೊದಲು I Love You ಎಂದಿದ್ದು ಯಾರು?

ಈಗ ತಮ್ಮ ಹೊಸ ಬಾಯ್‌ ಫ್ರೆಂಡ್‌ ಜೊತೆಗಿನ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಲಂಡನ್‌ ಮೂಲಕ ಬಾಯ್‌ ಫ್ರೆಂಡ್ ಜೊತೆಗೆ ಬ್ರೇಕಪ್‌ ಆದ ಬಳಿಕ ಶೃತಿ ಹಾಸನ್ ಶಂತನು ಹಝರಿಕ ಜೊತೆಗೆ ಸುತ್ತಾಡುತ್ತಿರುವ ವಿಚಾರ ಹೊರ ಬಂದಿದೆ. ಬಳಿಕ ಶಾಂತನು ಶೃತಿಯ ಹೊಸ ಬಾಯ್ ಫ್ರೆಂಡ್ ಎನ್ನುವುದು ಜಗಜ್ಜಾಹೀರಾಗಿದೆ. ಸೂಕ್ಷ್ಮವಾಗಿ ಈ ವಿಚಾರವನ್ನು ಶೃತಿ ಹಲವು ಕಡೆಗಳಲ್ಲಿ ಹೇಳಿ ಕೊಂಡಿದ್ದಾರೆ.

ಶಂತನು ಮತ್ತು ಶೃತಿ ತಮ್ಮ ಪ್ರೀತಿ ಮತ್ತು ಹೊಂದಾಣಿಗೆಯ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಶೃತಿ ಹಾಸನ್ ಮತ್ತು ಶಂತನು ಉತ್ತರಿಸಿದ್ದಾರೆ. ಈ ವೇಳೆ ಒಂದಷ್ಟು ಸೀಕ್ರೆಟ್‌ಗಳನ್ನು ಬಿಟ್ಟು ಕೊಟ್ಟಿದ್ದಾರೆ ನಟಿ ಶೃತಿ.

ಎರಡನೇ ಬಾಯ್‌ಫ್ರೆಂಡ್‌ಗೆ ಮೊದಲು I Love You ಎಂದಿದ್ದು ಶೃತಿ ಹಾಸನ್!

ಈ ವಿಡಿಯೋದಲ್ಲಿ ಇಬ್ಬರಲ್ಲಿ ಮೊದಲು ಐ ಲವ್ ಯು ಎಂದು ಹೇಳಿದ್ದು ಯಾರು ಎನ್ನುವ ಪ್ರಶ್ನೆ ಇದೆ. ಇದಕ್ಕೆ ಉತ್ತರಿಸಿದ ಶೃತಿ ತಾನೆ ಎಂದಿದ್ದಾರೆ. ಅಂದರೆ ಮೊದಲ ಬ್ರೇಕಪ್‌ ಬಳಿಕ ಆ ನೋವಿನಿಂದ ಹೊರ ಶೃತಿ, ಸದ್ಯ ಹೊಸ ಜೀವನವನ್ನು ಸಾಗಿಸುತ್ತಿದ್ದಾರೆ. ಇನ್ನು ಶಂತನು ಅವರಿಗೆ ಐ ಲವ್‌ ಯು ಹೇಳುವ ಮೂಲಕ ಪ್ರೇಮಿಯಾಗಿದ್ದಾರೆ ಶೃತಿ ಹಾಸನ್. ಇದಕ್ಕೂ ಮುನ್ನ ಕೆಲವು ಸಂದರ್ಶನಗಳಲ್ಲಿ ಶೃತಿ ಸಿಂಗಲ್‌ ಆಗಿಯೆ ಇರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಈಗ ಸಂತನು ಕೇವಲ ಶೃತಿ ಹಾಸನ್ ಅವರ ಬಾಯ್‌ಫ್ರೆಂಡ್ ಎನ್ನುವುದಕ್ಕಿಂತಲು ಹೆಚ್ಚಾಗಿ ಅವರು ಪ್ರೇಮಿಗಳು ಎನ್ನಬಹುದು.

ಪ್ರೀತಿಸಲು ಮೊದಲು ಆಸಕ್ತಿ ತೋರಿದ್ದು ಶಂತನು!

ಪ್ರೀತಿಸಲು ಮೊದಲು ಆಸಕ್ತಿ ತೋರಿದ್ದು ಶಂತನು!

ಇನ್ನು ಇದೇ ವಿಡಿಯೋದಲ್ಲಿ ಇಬ್ಬರಲ್ಲಿ, ಪ್ರೀತಿ ಮಾಡಲು ಮೊದಲು ಆಸಕ್ತಿ ತೋರಿದ್ದು ಯಾರು ಎನ್ನುವ ಪ್ರಶ್ನೆ ಕೂಡ ಇದೆ. ಅದಕ್ಕೆ ಇಬ್ಬರು ಒಂದೇ ಉತ್ತರ ನೀಡಿದ್ದಾರೆ. ಶೃತಿ ಹಾಸನ್ ಸಂತನು ಎಂದು ಅವರ ಕಡೆಗೆ ಕೈ ತೋರಿಸಿದ್ದಾರೆ. ಅಂತಯೇ ಶಂತನು ಕೂಡ ತಲೆ ದೂಗಿದ್ದಾರೆ. ಇನ್ನು ಮುಂದುವರೆದ ಹಾಗೆ, ಇಬ್ಬರಲ್ಲಿ ಯಾರು ಹೆಚ್ಚು ಕ್ಲೀನ್, ಯಾರು ಬೇಗ ನಿದ್ದೆ ಮಾಡುತ್ತಾರೆ, ಯಾರು ಹೆಚ್ಚು ಹಣ ಖರ್ಚು ಮಾಡುತ್ತಾರೆ ಎನ್ನುವ ಪ್ರಶ್ನೆಗಳು ಕೂಡ ಇವೆ.

ಲಂಡನ್ ಬಾಯ್‌ ಫ್ರೆಂಡ್ ಬ್ರೇಕಪ್ ಬಳಿಕ ಡಿಪ್ರೆಷನ್‌ನಲ್ಲಿ ಇದ್ದ ಶೃತಿ ಹಾಸನ್!

ಲಂಡನ್ ಬಾಯ್‌ ಫ್ರೆಂಡ್ ಬ್ರೇಕಪ್ ಬಳಿಕ ಡಿಪ್ರೆಷನ್‌ನಲ್ಲಿ ಇದ್ದ ಶೃತಿ ಹಾಸನ್!

ಇದಕ್ಕೂ ಮೊದಲು ನಟಿ ಶೃತಿ ಹಾಸನ್ ಲಂಡನ್ ಮೂಲಕ ಬಾಯ್‌ ಫ್ರೆಂಡ್ ಹೊಂದಿದ್ದರು. ಮೈಕಲ್‌ ಕೋರ್ಸಲ್ ಜೊತೆಗೆ ಹಲವು ವರ್ಷಗಳು ಶೃತಿ ಬಾಂಧವ್ಯ ಹೊಂದಿದ್ದರು. ಅವರ ಜೊತೆಯಲ್ಲಿ ಶೃತಿ ಲಂಡನ್‌ನಲ್ಲೇ ವಾಸವಿದ್ದರು. ಅವರ ಜೊತೆಯಾದ ಮೇಲೆ ಶೃತಿ ಹಾಸನ್ ಚಿತ್ರಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಇನ್ನೇನು ಶೃತಿ ಮತ್ತೆ ಚಿತ್ರ ರಂಗಕ್ಕೆ ಬರುದೇ ಇಲ್ಲ ಎನ್ನುವಾಗ, ಮೈಕಲ್ ಜೊತೆಗೆ ಶೃತಿ ಬ್ರೇಕಪ್ ಆಯ್ತು. ಇದರಿಂದ ಶೃತಿ ಹಾಸನ್ ಬಹಳ ನೊಂದಿದ್ದರು. ಈ ಬಗ್ಗೆ ಅವರು ಸುಧೀರ್ಘ ಪತ್ರವನ್ನು ಕೂಡ ಬರೆದಿದ್ದರು.

ಬ್ರೇಕಪ್ ಬಳಿಕ ಚಿತ್ರರಂಗದಲ್ಲಿ ಸಕ್ರಿಯ!

ಬ್ರೇಕಪ್ ಬಳಿಕ ಚಿತ್ರರಂಗದಲ್ಲಿ ಸಕ್ರಿಯ!

ಇನ್ನು ಲಂಡನ್‌ ಬಾಯ್‌ಫ್ರೆಂಡ್ ಜೊತೆಗೆ ಬ್ರೇಕಪ್‌ ಮಾಡಿಕೊಂಡ ಬಳಿಕ ಶೃತಿ ಹಾಸನ್ ಚಿತ್ರರಂಗಕ್ಕೆ ಕಮ್‌ ಬ್ಯಾಕ್ ಅದರು. ಕ್ರ್ಯಾಕ್ ಚಿತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ಶೃತಿ. ಗ್ಯಾಪ್ ಬಳಿಕ ಬಂದರು ಚಿತ್ರಗಳಲ್ಲಿ ಶೃತಿ ಹಾಸನ್‌ಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಈಗ ಸಾಲು, ಸಾಲು ಚಿತ್ರಗಳಲ್ಲಿ ಶೃತಿ ಬ್ಯೂಸಿ ಆಗಿದ್ದಾರೆ. ಸಲಾರ್ ಮತ್ತು ಎನ್‌ಬಿಕೆ 107 ಚಿತ್ರಗಳು ಶೃತಿ ಕೈಯಲ್ಲಿ ಇವೆ.

More from Filmibeat

English summary
Shruti Haasan Said I Love You First To Boy Friend Santanu Hazarika, She Reveal In Video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X