For Quick Alerts
  ALLOW NOTIFICATIONS  
  For Daily Alerts

  ಸಹ ನಟ ಪ್ರಭಾಸ್ ಬಗ್ಗೆ ಶ್ರುತಿ ಹಾಸನ್ ಮಾತು

  |

  ಪ್ರಶಾಂತ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾಕ್ಕೆ ನಾಯಕಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹಲವರಿಗೆ ಅಚ್ಚರಿಯಾಗುವಂತೆ ನಟಿ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  ಕನ್ನಡಿಗರು ಟ್ರೋಲ್ ಮಾಡಿದ ನಂತರ ಸಲಾರ್ ಬಗ್ಗೆ ಮಾತನಾಡಿದ ಶೃತಿ ಹಾಸನ್ | Salaar | Prabhas | Shruti Haasan

  'ಸಲಾರ್‌' ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಅಥವಾ ಸಾರಾ ಅಲಿ ಖಾನ್ ಆಯ್ಕೆ ಆಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಶ್ರುತಿ ಹಾಸನ್ ಆಯ್ಕೆ ಅಚ್ಚರಿ ತಂದಿದೆ.

  ನಟಿ ಶ್ರುತಿ ಹಾಸನ್ ಈಗಾಗಲೇ 'ಸಲಾರ್' ಸೆಟ್ ತಲುಪಿದ್ದು, ಚಿತ್ರೀಕರಣವನ್ನು ಪ್ರಾರಂಭ ಮಾಡಿದ್ದಾರೆ. ಸಿನಿಮಾದ ಸೆಟ್‌ನಿಂದ ಸೆಲ್ಫಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಭಾಸ್ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಪ್ರಭಾಸ್ ಬಗ್ಗೆ ಶ್ರುತಿ ಹಾಸನ್ ಮಾತು

  ಪ್ರಭಾಸ್ ಬಗ್ಗೆ ಶ್ರುತಿ ಹಾಸನ್ ಮಾತು

  ನಟಿ ಶ್ರುತಿ ಹಾಸನ್ ಸಂದರ್ಶನವೊಂದರಲ್ಲಿ ಸಲಾರ್ ಸಿನಿಮಾದಲ್ಲಿನ ತಮ್ಮ ಪಾತ್ರ ಹಾಗೂ ಸಹ ನಟ ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ. 'ಪ್ರಭಾಸ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿಯಾಗಿದೆ. ಈ ಹಿಂದೆ ನಾನು ಅವರೊಟ್ಟಿಗೆ ನಟಿಸಿರಲಿಲ್ಲ' ಎಂದಿದ್ದಾರೆ.

  ಸಮರ್ಪಣಾ ಭಾವ ಹೊಂದಿರುವ ನಟ: ಶ್ರುತಿ ಹಾಸನ್

  ಸಮರ್ಪಣಾ ಭಾವ ಹೊಂದಿರುವ ನಟ: ಶ್ರುತಿ ಹಾಸನ್

  ಮುಂದುವರೆದು, 'ವೃತ್ತಿಯ ಬಗ್ಗೆ ಸಮರ್ಪಣಾ ಭಾವ ಹೊಂದಿದ. ಸಾಕಷ್ಟು ಎನರ್ಜಿ ಹೊಂದಿರುವ, ಬಹಳವಾದ ಪ್ರಿಯವಾದ ವ್ಯಕ್ತಿ. ಅವರೊಟ್ಟಿಗೆ ನಟಿಸಲು ನಾನು ಉತ್ಸುಕಳಾಗಿದ್ದೇನೆ' ಎಂದಿದ್ದಾರೆ ಶ್ರುತಿ ಹಾಸನ್.

  ಸಾಕಷ್ಟು ಭಿನ್ನವಾದ ಪಾತ್ರ ಇದಾಗಿದೆ: ಶ್ರುತಿ ಹಾಸನ್

  ಸಾಕಷ್ಟು ಭಿನ್ನವಾದ ಪಾತ್ರ ಇದಾಗಿದೆ: ಶ್ರುತಿ ಹಾಸನ್

  ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಶ್ರುತಿ ಹಾಸನ್, 'ನನ್ನ ಪಾತ್ರದ ಬಗ್ಗೆ ಈ ಪರಿಸ್ಥಿತಿಯಲ್ಲಿ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆದರೆ ಈ ಹಿಂದೆ ನಾನು ಮಾಡಿದ ಪಾತ್ರಗಳಿಗಿಂತಲೂ ಸಾಕಷ್ಟು ಭಿನ್ನವಾದ ಪಾತ್ರ ಇದಾಗಿರಲಿದೆ' ಎಂದಿದ್ದಾರೆ ಶ್ರುತಿ ಹಾಸನ್.

  2021 ನನಗೆ ಒಳ್ಳೆಯ ವರ್ಷವಾಗಿ ಪರಿಣಮಿಸಿದೆ: ಶ್ರುತಿ ಹಾಸನ್

  2021 ನನಗೆ ಒಳ್ಳೆಯ ವರ್ಷವಾಗಿ ಪರಿಣಮಿಸಿದೆ: ಶ್ರುತಿ ಹಾಸನ್

  '2021 ನೇ ವರ್ಷ ನನಗೆ ಸಾಕಷ್ಟು ಒಳ್ಳೆಯ ವರ್ಷವಾಗಿ ಪರಿಣಮಿಸಿದೆ. 2021 ರ ಆರಂಭದಿಂದಲೂ ಸಾಕಷ್ಟು ಒಳ್ಳೆಯ ಅವಕಾಶಗಳು ಅರಸಿ ಬಂದಿವೆ, ಶ್ರಮವಹಿಸಿ ಕೆಲಸ ಮಾಡುತ್ತಿದ್ದೇನೆ' ಎಂದಿದ್ದಾರೆ. ಶ್ರುತಿ ಹಾಸನ್ ನಟನೆಯ ತೆಲುಗಿನ ಪಿಟ್ಟ ಕಥಲು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ಇದರ ಜೊತೆಗೆ ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್', ವಿಜಯ್ ಸೇತುಪತಿ ಜೊತೆಗಿನ 'ಲಾಭಂ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ.

  English summary
  Actress Shruti Haasan talks about co actor Prabhas. She acting along with Prabhas in Salaar movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X