Shruti Haasan: "ಹಕ್ಕಿಯಂತೆ ಸ್ವತಂತ್ರವಾಗಿ ಬದುಕ್ಬೇಕು ಎಂದುಕೊಂಡಿದ್ದೆ.. ಆದ್ರೆ ಅವ್ನು ಭಯಪಡಿಸಿಬಿಟ್ಟ": ಶ್ರುತಿ ಹಾಸನ್
ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಸೌತ್ ಸಿನಿ ದುನಿಯಾದಲ್ಲಿ ಕಮಾಲ್ ಮಾಡ್ತಿದ್ದಾರೆ. ಶೀಘ್ರದಲ್ಲಿ ಪ್ರಭಾಸ್ ಜೋಡಿಯಾಗಿ 'ಸಲಾರ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇತ್ತೀಚೆಗೆ ಆಕೆಗೆ ವಿಮಾನ ನಿಲ್ದಾಣದಲ್ಲಿ ಕಹಿ ಅನುಭವವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನೈ ಚೆಲುವೆ ತನ್ನ ನಿರ್ಣಯ ಬದಲಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಸೆಲೆಬ್ರೆಟಿಗಳಿಗೆ ಕೆಲವೊಮ್ಮೆ ಕಹಿ ಅನುಭವ ಎದುರಾಗುತ್ತಿರುತ್ತದೆ. ಕೆಲವೊಮ್ಮೆ ಅಭಿಮಾನಿಗಳು ಕಾಡುವುದು ಮತ್ತೆ ಕೆಲವೊಮ್ಮೆ ಅಪರಿತ ವ್ಯಕ್ತಿಗಳಿಂದ ಆತಂಕ ಎದುರಾಗುತ್ತದೆ. ಶ್ರುತಿ ಹಾಸನ್ ಸಿಕ್ಕಾಪಟ್ಟೆ ಬೋಲ್ಡ್ ನಟಿ. ಬರೀ ತೆರೆಮೇಲೆ ಮಾತ್ರವಲ್ಲ, ನಿಜಜೀವನದಲ್ಲೂ ತಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವವರಲ್ಲ. ಸದ್ಯ ಸಂತನು ಹಜಾರಿಕ ಜೊತೆ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿರುವ ಚೆಲುವೆ ಮುಂಬೈನಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಇಷ್ಟೊಂದು ಬೋಲ್ಡ್ ಆಗಿರುವ ಶೃತಿಗೆ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಶಾಕ್ ಕಾದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಕೆಲವೇ ಕ್ಷಣಗಳಲ್ಲಿ ಹೆದರಿಸಿಬಿಟ್ಟಿದ್ದ. ದುಬೈನಿಂದ ಮುಂಬೈಗೆ ಬಂದಿಳಿದ ನಟಿ ಕಾರ್‌ನತ್ತ ಹಜ್ಜೆ ಹಾಕಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಆಕೆಯನ್ನು ಫಾಲೋ ಮಾಡಿದ್ದಾನೆ. ಆತ ತನ್ನನ್ನು ಫಾಲೋ ಮಾಡುತ್ತಿರುವುದನ್ನು ತಿಳಿದ ನಟಿ ಯಾರವನು? ಯಾಕಲ್ಲಿ ನಿಂತಿದ್ದಾನೆ? ಎಂದು ಪ್ರಶ್ನಿಸಿದ್ದಾರೆ.
ಆಕೆ ಸಾಧ್ಯವಾದಷ್ಟು ಅಲ್ಲಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಕೊನೆಗೂ ತನ್ನ ಕಾರನ್ನು ಕಂಡಾಗ ಆ ಅಪರಿಚಿತ ವ್ಯಕ್ತಿ ಆಕೆಯನ್ನು ಕಾರಿನ ತನಕ ಹಿಂಬಾಲಿಸುವುದು ಕಂಡುಬಂತು. ಆಕೆ ಸಿಟ್ಟಿನಿಂದ ಸರ್ ನೀವ್ಯಾರು ನನಗೆ ಗೊತ್ತಿಲ್ಲ ಎಂದಿದ್ದರು. ಬಳಿಕ ಆತ ಅಲ್ಲಿಂದ ಹೊರಟ್ಟಿದ್ದ. ಆದರೆ ಕೆಲವರು ಸೆಕೆಂಡ್‌ಗಳ ಕಾಲ ಶ್ರುತಿ ಹಾಸನ್ ವಿಚಲಿತರಾಗಿದ್ದು ಆ ವಿಡಿಯೋದಲ್ಲಿ ಕಂಡು ಬಂದಿದೆ.
ಆ ಏರ್‌ಪೋರ್ಟ್ ಘಟನೆ ಬಗ್ಗೆ ಶ್ರುತಿ ಹಾಸನ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಂ ಲೈವ್ ವೇಳೆ ಮಾತನಾಡಿದ್ದಾರೆ. "ನನಗೆ ಆತ ಯಾರು ಎಂದು ಗೊತ್ತಿರಲಿಲ್ಲ. ನಾನು ನಡೆದು ಬರುವಾಗ ಹಿಂಬಾಲಿಸಿದ. ಒಂದಷ್ಟು ಫೋಟೊಗ್ರಾಫರ್ಸ್ ಇದ್ದರು. ಅವರಲ್ಲಿ ಕೆಲವರು ಆಕೆ ಹತ್ತಿರ ಹೋಗು, ಭಯನಾ ಅಂತ ಹೇಳುತ್ತಿದ್ದರು. ಅಂದರೆ ಆತ ಯಾರೋ ಫೋಟೊಗ್ರಾಫರ್ ಸ್ನೇಹಿತನೇ ಇರಬೇಕು. ಆದರೆ ಆತ ಬಹಳ ಹತ್ತಿರ ಬಂದಿದ್ದಕ್ಕೆ ನನಗೆ ಕಸಿವಿಸಿ ಆಯಿತು. ಆತ ಯಾರು ಎಂದು ಫೋಟೊಗ್ರಾಫರ್ಸ್ ಸಹ ಹೇಳಲಿಲ್ಲ. ಈ ಹಿಂದೆ ಈ ರೀತಿ ಎಂದೂ ಆಗಿರಲಿಲ್ಲ"

"ನನಗೆ ಯಾರು ಪರ್ಸನಲ್ ಬಾಡಿಗಾರ್ಡ್ ಇಲ್ಲ. ನಾನು ಅದನ್ನು ಇಷ್ಟಪಡುವುದು ಇಲ್ಲ. ನಾನು ಕ್ಷೇಮವಾಗಿ, ಸ್ವೇಚ್ಛೆಯಿಂದ ಬದುಕಬೇಕು ಎಂದುಕೊಂಡಿದ್ದೇನೆ. ಹಾಗಾಗಿ ಬಾಡಿಗಾರ್ಡ್ ಬೇಡ ಎಂದುಕೊಂಡಿದ್ದಾರೆ. ಆದರೆ ಈ ಘಟನೆ ಬಳಿಕ ಆ ಬಗ್ಗೆ ಯೋಚಿಸುವಂತಾಗಿದೆ ಎಂದು ಕಮಲ್ ಪುತ್ರಿ ಹೇಳಿದ್ದಾರೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಕೆಲ ವರ್ಷಗಳ ಹಿಂದೆ ಸೈಲೆಂಟ್ ಆಗಿದ್ದ ಶೃತಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಆಕೆ ನಟಿಸಿದ 'ವಾಲ್ತೇರು ವೀರಯ್ಯ' ಹಾಗೂ 'ವೀರಸಿಂಹ ರೆಡ್ಡಿ' ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿತ್ತು. ಸಂಕ್ರಾಂತಿ ಸಂಭ್ರಮದಲ್ಲಿ ಬಂದ ಈ ಚಿತ್ರಗಳಲ್ಲಿ ಚಿರಂಜೀವಿ ಹಾಗೂ ಬಾಲಕೃಷ್ಣಗೆ ನಾಯಕಿಯಾಗಿ ಮಿಂಚಿದ್ದರು. ಸದ್ಯ 'ಸಲಾರ್' ಸಿನಿಮಾ ರಿಲೀಸ್‌ಗೆ ರೆಡಿಯಾಗ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಮಿಂಚಿದ್ದಾರೆ. ಇನ್ನು 'ಹೈ ನಾನ್ನ' ಚಿತ್ರದಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡುತ್ತಿದ್ದಾರೆ. 'ದಿ ಐ' ಎನ್ನುವ ಇಂಗ್ಲೀಷ್ ಸಿನಿಮಾದಲ್ಲೂ ಶ್ರುತಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications










