For Quick Alerts
  ALLOW NOTIFICATIONS  
  For Daily Alerts

  ಶ್ವೇತಾ ಬಸು ದಾಂಪತ್ಯದಲ್ಲಿ ಬಿರುಗಾಳಿ: ಪತಿಗೆ ವಿಚ್ಛೇದನ ನೀಡಿದ ನಟಿ

  |

  ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಶ್ವೇತಾ ಬಸು ಪ್ರಸಾದ್ ಹೆಸರು ಸಿನಿಮಾ ಅಭಿಮಾನಿಗಳಿಗೆ ಚಿರಪರಿಚಿತ. 2008ರಲ್ಲಿ 'ಕೊತ್ತ ಬಂಗಾರ ಲೋಕಂ' ಸಿನಿಮಾ ಮೂಲಕ ಸೌತ್ ಇಂಡಸ್ಟ್ರಿ ಪ್ರವೇಶ ಮಾಡಿದ, ನಂತರ ಖಾಸಗಿ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ.

  ವೇಶ್ಯಾವಾಟಿಕೆ ಜಾಲದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಶ್ವೇತಾ ಬಸು, ನಂತರ ಇದೆಲ್ಲವನ್ನು ಮರೆತು ಹೊಸ ಜೀವನ ಆರಂಭಿಸಿದ್ದರು. ಸಿನಿಮಾ, ಪ್ರೀತಿ, ಮದುವೆ ಎಂದು ಜೀವನ ಸಾಗಿಸುತ್ತಿದ್ದರು.

  'ಟ್ವಿಟ್ಟರ್'ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ 'ಹ್ಯಾಷ್ ಟ್ಯಾಗ್' ಈ ಸಿನಿಮಾದ್ದು!'ಟ್ವಿಟ್ಟರ್'ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ 'ಹ್ಯಾಷ್ ಟ್ಯಾಗ್' ಈ ಸಿನಿಮಾದ್ದು!

  ಆದ್ರೀಗ, ತಮ್ಮ ಒಂದು ವರ್ಷದ ದಾಂಪತ್ಯ ಮುರಿದು ಬಿದ್ದಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮದುವೆಯಾಗಿದ್ದ ಶ್ವೇತಾ ಬಸು ಈಗ ಪತಿಯಿಂದ ದೂರವಾಗಿದ್ದಾರೆ. ಮುಂದೆ ಓದಿ....

  ಒಂದೇ ವರ್ಷದಲ್ಲಿ ಮುರಿದುಬಿತ್ತು ದಾಂಪತ್ಯ

  ಒಂದೇ ವರ್ಷದಲ್ಲಿ ಮುರಿದುಬಿತ್ತು ದಾಂಪತ್ಯ

  ಡಿಸೆಂಬರ್ 13, 2018 ರಂದು ರೋಹಿತ್ ಮಿಟ್ಟಾಲ್ ಜೊತೆ ವಿವಾಹವಾಗಿದ್ದ ಶ್ವೇತಾ ಬಸು, ಸರಿಯಾಗಿ ವರ್ಷ ತುಂಬುವುದರೊಳಗೆ ತಮ್ಮ ದಾಂಪತ್ಯ ಜೀವನಕ್ಕೆ ಕೊನೆಯಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಅಧಿಕೃತವಾಗಿ ದೂರವಾಗಿದ್ದೇವೆ ಎಂದು ಬಹಿರಂಗಪಡಿಸಿದ್ದಾರೆ.

  ಸ್ವ ನಿರ್ಧಾರದಿಂದ ದೂರ ದೂರ

  ಸ್ವ ನಿರ್ಧಾರದಿಂದ ದೂರ ದೂರ

  ''ರೋಹಿತ್ ಮಿಟ್ಟಾಲ್ ಮತ್ತು ನಾನು ಸ್ವತಂ ನಿರ್ಧಾರದಿಂದ ಪರಸ್ಪರ ಒಪ್ಪಿಗೆಯಿಂದ ದೂರವಾಗುತ್ತಿದ್ದೇವೆ. ಕೆಲವು ತಿಂಗಳ ಹಿಂದೆಯಷ್ಟೇ ನಾವಿಬ್ಬರು ಒಮ್ಮತದಿಂದ ದೂರವಾಗಲು ನಿರ್ಧರಿಸಿದ್ವಿ'' ಎಂದು ಪತಿಯ ಬಗ್ಗೆ ಹಾಡಿ ಹೊಗಳಿದ್ದಾರೆ ನಟಿ ಶ್ವೇತಾ ಬಸು.

  'ನಾನೂ ಒಂದು ಹೆಣ್ಣುಮಗುವಿನ ತಂದೆ': ನೆಟ್ಟಿಗರ ಟೀಕೆಗೆ ಉಪೇಂದ್ರ ಬೇಸರ'ನಾನೂ ಒಂದು ಹೆಣ್ಣುಮಗುವಿನ ತಂದೆ': ನೆಟ್ಟಿಗರ ಟೀಕೆಗೆ ಉಪೇಂದ್ರ ಬೇಸರ

  ಬೇರಯಾಗಲು ಕಾರಣ ಗೊತ್ತಿಲ್ಲ

  ಬೇರಯಾಗಲು ಕಾರಣ ಗೊತ್ತಿಲ್ಲ

  ಮೇಲ್ನೋಟಕ್ಕೆ ಶ್ವೇತಾ ಬಸು ಮತ್ತು ರೋಹಿತ್ ಮಿಟ್ಟಾಲ್ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿರುವುದು ನಿಜವಾದರೂ, ಈ ನಿರ್ಧಾರಕ್ಕೆ ಬರಲು ಅಸಲಿ ಕಾರಣ ಏನು ಎಂಬುದು ಗೌಪ್ಯವಾಗಿದೆ. ಯಾಕಂದ್ರೆ, ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿ ಮದುವೆಯಾಗಿದ್ದರೂ ವರ್ಷ ತುಂಬುವಷ್ಟರಲ್ಲಿ ದೂರವಾಗುವುದು ಅಂದ್ರೆ ಅಲ್ಲಿ ಸಾಕಷ್ಟು ಅನುಮಾನಗಳು ಕಾಡುತ್ತಿದೆ.

  ರಾಷ್ಟ್ರ ಪ್ರಶಸ್ತಿ ವಿಜೇತೆ ಶ್ವೇತಾ

  ರಾಷ್ಟ್ರ ಪ್ರಶಸ್ತಿ ವಿಜೇತೆ ಶ್ವೇತಾ

  ಬಾಲನಟಿಯಾಗಿ ಗಮನ ಸೆಳೆದ ಶ್ವೇತಾ ಪ್ರಸಾದ್ ಮಕ್ಡಿ, ಇಕ್ಬಾಲ್ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. ಮಕ್ಡಿ ಚಿತ್ರದ ಚುನ್ನಿ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಗಳಿಸಿದ್ದರು. ನಂತರ ಡರ್ನಾ ಜರೂರಿ ಹೈ(ಹಿಂದಿ), ಕೊತ್ತ ಬಂಗಾರು ಲೋಕಂ(ತೆಲುಗು), ಎಕ್ ನದೀರ್ ಗೊಲ್ಪೋ(ಬೆಂಗಾಳಿ) ಚಿತ್ರಗಳಲ್ಲಿ ನಟಿಸಿದ್ದರು. ಕೊನೆಯದಾಗಿ 'ದಿ ತಾಷ್ಕೆಂಟ್ ಫೈಲ್ಸ್' ಚಿತ್ರದಲ್ಲಿ ಶ್ವೇತಾ ನಟಿಸಿದ್ದರು.

  English summary
  National award winner actress Shweta Basu prasad ends her marriage with Rohit Mittal. she officially announced.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X