ಜೆಸಿಬಿ ನೋಡೋಕೂ ಭಾರತದಲ್ಲಿ ಜನ ಸೇರ್ತಾರೆ, 'ಪುಷ್ಪ'ರಾಜ್‌ನನ್ನು ಗೇಲಿ ಮಾಡಿದ ಸಿದ್ಧಾರ್ಥ್...!
ಚಿತ್ರ ಮತ್ತು ಪಾತ್ರಗಳಿಗಿಂತ ಹೆಚ್ಚು ವಿವಾದಗಳಿಂದ ಸುದ್ದಿಯಾದವರು ಸಿದ್ಧಾರ್ಥ್. ಕೇಂದ್ರ ಸರ್ಕಾರದ ವಿರುದ್ಧ ಆಗಾಗ ಕೆಂಡವನ್ನು ಕಾರುತ್ತಾ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗುವ ಸಿದ್ಧಾರ್ಥ್‌ಗೆ ಅದ್ಯಾಕೋ ಇತ್ತೀಚೆಗೆ ಅಲ್ಲು ಅರ್ಜುನ್ ಹೆಸರು ಕೇಳಿದರೆ ಕೋಪ ಬರುತ್ತಿದೆ.
ಇದಕ್ಕೆ ಪುರಾವೆ ಎಂಬಂತೆ ಮೊನ್ನೆ ಮೊನ್ನೆಯಷ್ಟೇ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ತೆರೆಗೆ ಬರುವ ಒಂದು ವಾರದ ಮೊದಲು ನಿಮ್ಮ ಮಿಸ್ ಯು ಚಿತ್ರ ತೆರೆಗೆ ಬರುತ್ತಿದೆ, ಪುಷ್ಪದಿಂದ ಪೆಟ್ಟಾಗುವುದಿಲ್ವಾ ಎಂದು ಕೇಳಿದ್ದಕ್ಕೆ ಕೆರಳಿ ಕೆಂಡವಾಗಿದ್ದರು. ಯಾವನ್ರೀ ಅವನು ಪುಷ್ಪ ಆ ಚಿತ್ರ ತೆರೆಗೆ ಬಂದರೆ ನಾನ್ಯಾಕೇ ಭಯ ಬೀಳಬೇಕು ಎಂದು ಹೇಳಿದ್ದರು. ಕಾಲ ಮೊದಲಿನಂತೆ ಇಲ್ಲ ನನ್ನ ಚಿತ್ರ ಚೆನ್ನಾಗಿದ್ದರೆ ಯಾವ ಪುಷ್ಪ ಬಂದರೂ ಕೂಡ ನನ್ನ ಚಿತ್ರವನ್ನು ಚಿತ್ರಮಂದಿರದಿಂದ ಎತ್ತಂಗಡಿ ಮಾಡಲು ಸಾಧ್ಯ ಇಲ್ಲ ಎಂದು ಹೇಳಿದ್ದ ಸಿದ್ಧಾರ್ಥ್ ಈಗೆಲ್ಲ ಸೋಶಿಯಲ್ ಮೀಡಿಯಾ ಇದೆ ಚಿತ್ರದ ಫಲಿತಾಂಶ ಗೊತ್ತಾಗಲು ಎರಡೇ ಎರಡು ಸೆಕೆಂಡ್ ಸಾಕು ಎಂದು ಕೂಡ ಹೇಳಿದ್ದರು.

ಇಂಥಾ ಸಿದ್ಧಾರ್ಥ್ ಈಗ ಇನ್ನೊಮ್ಮೆ ಪುಷ್ಪ 2 ಚಿತ್ರದ ವಿರುದ್ಧ ಮಾತನಾಡಿದ್ದಾರೆ. ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ ಅವರ ಸ್ಟಾರ್ ವ್ಯಾಲ್ಯೂ ಮತ್ತು ಮಾರುಕಟ್ಟೆಯನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರ ಕಾಲೆಳೆದಿದ್ದಾರೆ.
ಹೌದು, ತಮ್ಮ ಮಿಸ್ ಯು ಚಿತ್ರದ ಪ್ರಚಾರಾರ್ಥ ಮದನ್ ಗೌರಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಿದ್ಧಾರ್ಥ್ ಬಿಹಾರದಲ್ಲಿ ನಡೆದ ಪುಷ್ಪ 2 ಸಮಾರಂಭದಲ್ಲಿ ಅಸಂಖ್ಯಾತ ಅಗಣಿತ ಜನ ಸೇರಿದ್ದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ. ಅದೆಲ್ಲವೂ ಪ್ರಚಾರದ ತಂತ್ರ ಎಂದಿರುವ ಸಿದ್ಧಾರ್ಥ್ ಭಾರತದಲ್ಲಿ ಒಂದು ನಾಲ್ಕು ಕಡೆ ನೀವು ಜೆಸಿಬಿ ತೆಗೆದುಕೊಂಡು ಹೋಗಿ ಅಲ್ಲಿ ನೀವು ಮಾಡುವ ಕಾರ್ಯಾಚರಣೆಯನ್ನು ನೋಡಲು ಜನ ಮುಗಿ ಬಿದ್ದಿರುತ್ತಾರೆ ಎಂದು ಹೇಳಿದ್ದಾರೆ. ಈ ಮೂಲಕ ಪುಷ್ಪ ಚಿತ್ರತಂಡಕ್ಕೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪುಷ್ಪ 2 ಚಿತ್ರವನ್ನು ಜೆಸಿಬಿ ಕಾರ್ಯಾಚರಣೆ ಜೊತೆ ಹೋಲಿಸಿದ್ದಾರೆ.
ಇನ್ನು ಬಿಹಾರದಲ್ಲಿ ಪುಷ್ಪ ಚಿತ್ರದ ಕಾರ್ಯಕ್ರಮಕ್ಕೆ ಮೈದಾನವನ್ನು ಬುಕ್ ಮಾಡಿದ್ದರು,ಬೃಹತ್ ವೇದಿಕೆಯನ್ನು ನಿರ್ಮಿಸಿದ್ದರು ಈ ಕಾರಣಕ್ಕೆ ಅಲ್ಲೇನು ನಡೆಯುತ್ತಿರಬಹುದು ಅಥವಾ ನಡೆಯಬಹುದು ಎಂಬ ಕುತೂಹಲದಿಂದ ಜನ ಬಂದಿರುತ್ತಾರೆ ಅಷ್ಟೇ ಎಂದಿರುವ ಸಿದ್ಧಾರ್ಥ್ ಜನ ಸೇರಿದ್ದಾರೆ ಎನ್ನುವ ಆಧಾರದ ಮೇಲೆ ಭಾರತದಲ್ಲಿ ಗುಣಮಟ್ಟ ಅಳೆಯಲು ಸಾಧ್ಯ ಇಲ್ಲ, ಹಾಗೊಂದು ವೇಳೆ ಜನ ಸೇರುವುದರಿಂದ ಬದಲಾವಣೆಯಾಗುತ್ತೆ ಎಂದಿದ್ದರೆ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಬೇಕಿತ್ತು ಎಂದು ಪ್ರಶ್ನೆ ಕೇಳಿದ್ದಾರೆ.
ಹೀಗೆ ಸೇರುವ ಜನರನ್ನು ಬಿರಿಯಾನಿ ಮತ್ತು ಕ್ವಾಟರ್ ಬಾಟಲ್ ಜನ ಎಂದು ಹಿಂದೆ ಹೇಳುತ್ತಿದ್ದರು ಎಂದಿರುವ ಸಿದ್ಧಾರ್ಥ್ ಈಗಿನ ಕಾಲದಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ತುಂಬಾನೇ ಸುಲಭ ಎಂದು ಹೇಳಿದ್ದಾರೆ. ಸಹಜವಾಗಿ ಸಿದ್ಧಾರ್ಥ್ ಆಡಿದ ಈ ಮಾತು ಅನೇಕರನ್ನು ಕೆರಳಿಸಿದೆ. ಸಿದ್ಧಾರ್ಥ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮನುಷ್ಯನಿಗೆ ಹೊಟ್ಟೆ ಉರಿ ಇರಬೇಕು ಆದರೆ ನಿಮ್ಮಷ್ಟು ಇರಬಾರದು ಎನ್ನುತ್ತಿರುವ ಅನೇಕರು ಆಸೆಯೇ ದುಃಖಕ್ಕೆ ಮೂಲ. ಅಸೂಯೆ ಒಳ್ಳೇದಲ್ಲ. ಬೆಳ್ಳಗೆ ಇರೋದೆಲ್ಲ ಹಾಲಲ್ಲ ಎಂದು ಸಿದ್ದಾರ್ಥ್‌ಗೆ ಹೇಳುತ್ತಿದ್ದಾರೆ. ಸಿದ್ಧಾರ್ಥ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











