ನಟ ಸಿಂಬು ಹೊಸ ಲವ್ ಸ್ಟೋರಿ ರಿವೀಲ್: ನವ ನಟಿ ಜೊತೆ ಒಂದೇ ಮನೆಯಲ್ಲಿ ಸಂಸಾರ!

ಸಿನಿಮಾ ರಂಗದಲ್ಲಿ ದಿನಕ್ಕೊಂದು ಹೊಸ ಲವ್‌ ಸ್ಟೋರಿಗಳು ಹುಟ್ಟಿಕೊಳ್ಳುತ್ತವೆ. ನಟ, ನಟಿಯರ ಪ್ರೇಮ್ ಕಹಾನಿಗಳು ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಗಾಸಿಪ್ ಹರಿದಾಡಿದರು, ಸ್ಪಷ್ಟನೆ ಸಿಗುವುದಿಲ್ಲ. ಈಗ ಈ ಸಾಲಿಗೆ ನಟ ಸಿಂಬು ಮತ್ತು ನಟಿ ನಿಧಿ ಅಗರ್ವಾಲ್ ಸೇರಿಕೊಂಡಿದ್ದಾರೆ. ಈ ಜೋಡಿ ಬಗ್ಗೆ ಗಾಸಿಪ್ ಹರಿದಾಡುತ್ತಿದೆ.

ನಟ ಸಿಂಬು ತಮಿಳು ಚಿತ್ರರಂಗದ ಮೋಸ್ಟ್‌ ಎಲಿಜಬಲ್ ಬ್ಯಾಚುಲರ್. ಇನ್ನೂ ಸಿಂಬುಗೆ ಮದುವೆ ಆಗಿಲ್ಲ. ಆದರೆ ಅವರ ಹೆಸರಿನ ಜೊತೆಯಲ್ಲಿ ಒಂದಷ್ಟು ನಟಿಯರ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಆದರೆ ಅವರ ಜೊತೆಗೆ ಸಿಂಬು ಸಂಬಂಧ ಮುಂದುವರೆದಿಲ್ಲ.

ಈಗ ಸೌತ್‌ ಚಿತ್ರರಂಗದ ನವ ನಾಯಕಿ ನಿಧಿ ಅಗರ್ವಾಲ್ ಹೆಸರು ಸಿಂಬು ಜೊತೆಗೆ ತಳುಕು ಹಾಕಿಕೊಂಡಿದೆ. ನಟ ಸಿಂಬು ಮತ್ತು ನಿಧಿ ಇಬ್ಬರು ಲವ್‌ನಲ್ಲಿ ಬಿದ್ದಿದ್ದಾರೆ ಎಂದು ಹೇಳಾಗುತ್ತಿದೆ. ಅಷ್ಟೇ ಅಲ್ಲಾ ಅವರು ಇಬ್ಬರು ಒಟ್ಟಿಗೆ ಇದ್ದಾರೆ ಎನ್ನುವ ಮಾತುಗಳು ಕೂಡ ಹೇಳಿ ಬರುತ್ತಿವೆ.

ನಟಿ ನಿಧಿ ಅಗರ್ವಾಲ್ ಜೊತೆಗೆ ತಳುಕು ಹಾಕಿಕೊಂಡ ಸಿಂಬು ಹೆಸರು!

ನಟಿ ನಿಧಿ ಅಗರ್ವಾಲ್ ಜೊತೆಗೆ ತಳುಕು ಹಾಕಿಕೊಂಡ ಸಿಂಬು ಹೆಸರು!

ಸೌತ್‌ ಚಿತ್ರ ರಂಗದಲ್ಲಿ ಸದ್ಯ ಬಿಸಿ, ಬಿಸಿಯಾಗಿ ಹರಿದಾಡುತ್ತಿರುವ ಸುದ್ದಿ ಅಂದರೆ ಅದು ನಟ ಸಿಂಬು ಮತ್ತು ನಿಧಿ ಅಗರ್ವಾಲ್ ಲವ್ ಸ್ಟೋರಿ. ಇವರಿಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ನಟ ಸಿಂಬು ಹೆಸರು ಹಲವು ನಟಿಯರ ಜೊತೆಗೆ ಕೇಳಿ ಬಂದಿದೆ. ಅದರಲ್ಲಿ ಹೆಚ್ಚಾಗಿ ಸದ್ದು ಮಾಡಿದ್ದು, ನಯನತಾರ ಮತ್ತು ಹನ್ಸಿಕಾ ಮೊಟ್ವಾನಿ ಹೆಸರು. ಆದರೆ ಅವರೊಂದಿಗೆ ಸಿಂಬು ಹಲವು ಕಾರಣಕ್ಕೆ ಮುಂದಿವರೆದಿಲ್ಲ. ಆದರೆ ಈಗ ನಿಧಿ ಅವರನ್ನು ಸೀರಿಯಸ್‌ ಆಗಿ ಪ್ರೀತಿ ಮಾಡುತ್ತಿದ್ದಾರಂತೆ.

'ಈಶ್ವರನ್' ಚಿತ್ರದಿಂದ ಒಂದಾದ ಜೊಡಿ!

'ಈಶ್ವರನ್' ಚಿತ್ರದಿಂದ ಒಂದಾದ ಜೊಡಿ!

ಸಿಂಬು ಮತ್ತು ನಿಧಿ ಲವ್‌ ಸ್ಟೋರಿಗೆ ಬುನಾದಿ ಹಾಕಿದ್ದು ಈಶ್ವರನ್ ಸಿನಿಮಾ. ಈ ಚಿತ್ರದಲ್ಲಿ ಸಿಂಬು ನಿಧಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದಿಂದಲೇ ಸಿಂಬು ಮತ್ತು ನಿಧಿ ಅಗರ್ವಾಲ್ ಇಬ್ಬರ ನಡುವೆ ಪ್ರೇಮ ಚಿಗುರೊಡೆದಿದೆಯಂತೆ. ಈ ಚಿತ್ರದ ಬಳಿಕ ಇಬ್ಬರು ಜೊತೆಯಾಗಿ ಓಡಾಡುತ್ತಿದ್ದಾರೆ. ಈ ಇಬ್ಬರ ಪ್ರೀತಿ, ಪ್ರೇಮ 'ಈಶ್ವರನ್' ಚಿತ್ರದ ಬಳಿಕವೂ ಮುಂದುವರೆದಿದೆ.

ಒಂದೇ ಮನೆಯಲ್ಲಿ ವಾಸ: ಲಿವ್ ಇನ್ ರಿಲೇಷನ್‌ನಲ್ಲಿ ಸಿಂಬು, ನಿಧಿ?

ಒಂದೇ ಮನೆಯಲ್ಲಿ ವಾಸ: ಲಿವ್ ಇನ್ ರಿಲೇಷನ್‌ನಲ್ಲಿ ಸಿಂಬು, ನಿಧಿ?

ಬರಿ ಪ್ರೀತಿ ಪ್ರೇಮ ಅಲ್ಲ, ಈ ಜೋಡಿ ಒಂದು ಹೆಜ್ಜೆ ಮುಂದೆ ಹೋಗಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದೆಯಂತೆ. ಹಾಗಾಗಿ ಸಿಂಬು ಮತ್ತು ನಿಧಿ ಹಲವು ದಿನಗಳಿಂದ ಒಂದೇ ಮನೆಯಲ್ಲಿ ವಾಸವಿದ್ದಾರಂತೆ. ಆದರೆ ಈ ಜೋಡಿ ಕೇವಲ ಪ್ರೀತಿ ಪ್ರೇಮ ಅಂತ ಸುತ್ತಾಡಿ ಸುದ್ದಿ ಆಗದೇ, ಮದುವೆ ಆಗಲು ನಿರ್ಧರಿಸಿದ್ದಾರಂತೆ. ಎರಡು ವರ್ಷಗಳ ಬಳಿಕ ಮದುವೆ ಆಗಲು ನಿರ್ಧಸಿದ್ದಾರಂತೆ ಸಿಂಬು ಮತ್ತು ನಿಧಿ ಅಗರ್‌ವಾಲ್.

ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡುತ್ತಾ ಈ ಜೋಡಿ?

ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡುತ್ತಾ ಈ ಜೋಡಿ?

ನಟ ಸಿಂಬು ಮಾನಾಡು ಚಿತ್ರದ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಜೊತೆಗೆ ಮುಂದಿನ ಚಿತ್ರಕ್ಕೆ ರೆಡಿ ಆಗುತ್ತಿದ್ದಾರೆ. ಇತ್ತ ನಿಧಿ ಕೂಡ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಇವರ ಲವ್‌ ಕಹಾನಿಯ ಬಗ್ಗೆ ಹೆಚ್ಚಿನ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಗಾಸಿಪ್‌ಗೆಲ್ಲಾ ಬ್ರೇಕ್‌ ಬೀಳಬೇಕು ಎಂದರೆ ಇಬ್ಬರಲ್ಲಿ ಒಬ್ಬರು ಬಾಯ್ಬಿಡಬೇಕು.

More from Filmibeat

English summary
Simbu Falls In Love Again; Live In Relationship With Nidhi Agarwal, And Getting Married Soon,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X