For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್-ದೀಪಿಕಾ ಪಡುಕೋಣೆ ಚಿತ್ರಕ್ಕೆ 'ಲೆಜೆಂಡ್ ನಿರ್ದೇಶಕ' ಎಂಟ್ರಿ

  |

  'ಸಾಹೋ' ಚಿತ್ರದ ಬಳಿಕ ಪ್ರಭಾಸ್ ನಟಿಸಲಿರುವ ಚಿತ್ರಗಳು ಭಾರಿ ಸದ್ದು ಮಾಡ್ತಿದೆ. ಸದ್ಯ 'ರಾಧೇ ಶ್ಯಾಮ್' ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್ 'ಆದಿಪುರುಷ್' ಚಿತ್ರಕ್ಕೂ ಓಕೆ ಎಂದಿದ್ದಾರೆ. ಈ ನಡುವೆ ಮತ್ತೊಂದು ಚಿತ್ರಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಇದೀಗ, ಈ ಚಿತ್ರಕ್ಕೆ ದಕ್ಷಿಣ ಭಾರತದ ಲೆಜೆಂಡ್ ನಿರ್ದೇಶಕರೊಬ್ಬರು ಎಂಟ್ರಿಯಾಗಿದ್ದಾರೆ. ಯುವ ನಿರ್ದೇಶಕ ಸಿನಿಮಾ ಡೈರೆಕ್ಟ್ ಮಾಡ್ತಿದ್ರು, ತಾಂತ್ರಿಕ ವರ್ಗದಲ್ಲಿ ಬಲ ತುಂಬಲು ಸ್ಟಾರ್ ನಿರ್ದೇಶಕರನ್ನು ಕರೆತಂದಿದ್ದಾರೆ. ಯಾರದು? ಮುಂದೆ ಓದಿ....

  ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್‌ಗೆ ಕೊರೊನಾ ಪಾಸಿಟಿವ್

  ಸಿಂಗೀತಂ ಶ್ರೀನಿವಾಸ್ ರಾವ್

  ಸಿಂಗೀತಂ ಶ್ರೀನಿವಾಸ್ ರಾವ್

  ಪ್ರಭಾಸ್-ದೀಪಿಕಾ ಪಡುಕೋಣೆ ನಟಿಸುತ್ತಿರುವ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಲಿದ್ದಾರೆ. ಇದೀಗ, ಸಿಂಗೀತಂ ಶ್ರೀನಿವಾಸ್ ರಾವ್ ಸಹ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಸಲಹೆಗಾರರಾಗಿ ಹಿರಿಯ ನಿರ್ದೇಶಕ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಅಧಿಕೃತ ಪ್ರಕಟಣೆ ಮಾಡಿದ ಚಿತ್ರತಂಡ

  ಅಧಿಕೃತ ಪ್ರಕಟಣೆ ಮಾಡಿದ ಚಿತ್ರತಂಡ

  ಸೆಪ್ಟೆಂಬರ್ 21 ರಂದು ಸಿಂಗೀತಂ ಶ್ರೀನಿವಾಸ್ ರಾವ್ ಅವರು ಹುಟ್ಟುಹಬ್ಬ ಆಚರಿಸಿಕೊಂಡರು. ಈ ದಿನದ ವಿಶೇಷವಾಗಿ ಶುಭಕೋರಿರುವ 'ವೈಜಯಂತಿ ಮೂವೀಸ್' ಪ್ರಭಾಸ್ ಚಿತ್ರದಲ್ಲಿ ಸಿಂಗೀತಂ ಶ್ರೀನಿವಾಸ್ ರಾವ್ ಕೆಲಸ ಮಾಡುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

  'ಆದಿಪುರುಷ' ಸಿನಿಮಾಗೆ ಪ್ರಭಾಸ್ ಆಯ್ಕೆಯ ಹಿಂದಿನ ರಹಸ್ಯ ಬಹಿರಂಗ ಪಡಿಸಿದ ನಿರ್ದೇಶಕ

  ಕೊನೆಯ ಚಿತ್ರ ಯಾವುದು?

  ಕೊನೆಯ ಚಿತ್ರ ಯಾವುದು?

  2013ರಲ್ಲಿ ತೆರೆಕಂಡಿದ್ದ 'ವೆಲ್‌ಕಮ್ ಒಬಾಮ' ಚಿತ್ರವನ್ನು ಸಿಂಗೀತಂ ಶ್ರೀನಿವಾಸ್ ರಾವ್ ಕೊನೆಯದಾಗಿ ನಿರ್ದೇಶಿಸಿದ್ದರು. ಆದಾದ ಬಳಿಕ 2015 ರಲ್ಲಿ ಬಿಡುಗಡೆಯಾದ ಕಂಚೆ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದರು.

  ಸಿಂಗೀತಂ ಶ್ರೀನಿವಾಸ್ ರಾವ್ ಚಿತ್ರಗಳ ಬಗ್ಗೆ.....

  ಸಿಂಗೀತಂ ಶ್ರೀನಿವಾಸ್ ರಾವ್ ಚಿತ್ರಗಳ ಬಗ್ಗೆ.....

  ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಸಿಂಗೀತಂ ಶ್ರೀನಿವಾಸ್ ರಾವ್ ಎಲ್ಲ ಭಾಷೆಗಳಲ್ಲೂ ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ. ಬಾಲಕೃಷ್ಣ ಅವರ 'ಆದಿತ್ಯ 369', ಮೈಕಲ್ ಕಾಮರಾಜನ್, ಅಪೂರ್ವ ಸಗೋದರರ್‌ಗಳ್ ಅಂತಹ ಸಿನಿಮಾಗಳು ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು.

  DIRECTORS DIARY | ಅಜಯ್ ರಾವ್ ನೋಡದೆ ಇರೋ ಅಷ್ಟು ಸಂಭಾವನೆ ಕೊಡ್ಸಿದ್ದೆ| R Chandru |Part 3 |Filmibeat Kannada
  ಕನ್ನಡ ಸಿನಿಮಾಗಳು ಯಾವುದು?

  ಕನ್ನಡ ಸಿನಿಮಾಗಳು ಯಾವುದು?

  ಸಿಂಗೀತಂ ಶ್ರೀನಿವಾಸ್ ರಾವ್ ಅವರು ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಾಲುಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಭಾಗ್ಯದ ಲಕ್ಷ್ಮಿ ಬಾರಮ್ಮ, ಜ್ವಾಲಾಮುಖಿ, ಆನಂದ್, ಶ್ರುತಿ ಸೇರಿದಾಗ, ದೇವತಾ ಮನುಷ್ಯ, ಚಿರಂಜೀವಿ ಸಧಾಕರ್, ಸಂಯುಕ್ತಾ, ಕ್ರೀರಾ ಸಾಗರ, ಬೆಳ್ಳಿಯಪ್ಪಾ ಬಂಗಾರಪ್ಪ, ಟುವ್ವಿ ಟುವ್ವಿ ಟುವ್ವಿ ಹಾಗೂ ಮೇಕಪ್‌ ಚಿತ್ರ ಮಾಡಿದ್ದಾರೆ.

  English summary
  Veteran filmmaker Singeetam Srinivasa Rao to mentor Prabhas, Deepika Padukone in Nag Ashwin's next film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X