For Quick Alerts
  ALLOW NOTIFICATIONS  
  For Daily Alerts

  'ಸಮಂತಾ ಜೊತೆ ನನ್ನ ಜರ್ನಿ ಮುಗೀತು': ಗಾಸಿಪ್‌ಗಳ ಬಗ್ಗೆ ಚಿನ್ಮಯಿ ಕ್ಲಾರಿಟಿ!

  |

  ಟಾಲಿವುಡ್‌ನಲ್ಲಿ ನಟಿ ಸಮಂತಾ ಹಾಗೂ ಗಾಯಕಿ ಚಿನ್ಮಯಿ ಶ್ರೀಪಾದ ಬಹಳ ಆತ್ಮೀಯ ಸ್ನೇಹಿತರು. ಸ್ಯಾಮ್ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಆಕೆಯ ಪಾತ್ರಕ್ಕೆ ಡಬ್ ಮಾಡಿದ್ದು ಇದೇ ಚಿನ್ಮಯಿ. ಆದರೆ ಕೆಲ ದಿನಗಳಿಂದ ಇಬ್ಬರ ಸ್ನೇಹದಲ್ಲಿ ವೈಮನಸ್ಸು ಮೂಡಿದೆ ಎನ್ನುವ ಮಾತುಗಳು ಕೇಳಿಬರ್ತಿತ್ತು. ಈ ಬಗ್ಗೆ ಸ್ವತಃ ಚಿನ್ಮಯಿ ಸ್ಪಷ್ಟನೆ ನೀಡಿದ್ದಾರೆ.

  'ಏ ಮಾಯ ಚೆಸಾವೆ' ಚಿತ್ರದ ಮೂಲಕ ಸಮಂತಾ ತೆಲುಗು ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಿದ್ದರು. ಆ ಚಿತ್ರದಲ್ಲಿ ಸಮಂತಾ ಮಾಡಿದ್ದ ಜೆಸ್ಸಿ ಪಾತ್ರಕ್ಕೆ ಡಬ್ ಮಾಡಿದವರು ಗಾಯಕಿ ಚಿನ್ಮಯಿ ಶ್ರೀಪಾದ. ಅಂದಿನಿಂದಲೂ ಇಬ್ಬರ ನಡುವೆ ಗಾಢವಾದ ಸ್ನೇಹ ಏರ್ಪಟ್ಟಿತ್ತು. ಚಿತ್ರರಂಗದಲ್ಲಿದ್ದ ಸಮಂತಾಗೆ ಇದ್ದ ಕೆಲವೇ ಆಪ್ತ ಸ್ನೇಹಿತರಲ್ಲಿ ಈಕೆಯೂ ಒಬ್ಬರು. ಸ್ಯಾಮ್‌ ಪಾತ್ರಕ್ಕೆ ಡಬ್ ಮಾಡಿದ ಮೇಲೆ ನನಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಬಹಳ ಅವಕಾಶ ಸಿಕ್ತು ಎಂದು ಚಿನ್ಮಯಿ ಕೂಡ ಹೇಳಿಕೊಂಡಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಚಿನ್ಮಯಿ ಹೇಳಿದ್ದಾರೆ.

  ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?

  ಸಮಂತಾ ಹಾಗೂ ಚಿನ್ಮಯಿ ಒಟ್ಟಿಗೆ ಪಾರ್ಟಿ, ಪಬ್ ಅಂತ ಸುತ್ತಾಡುತ್ತಿದ್ದರು. ಅದರ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಯಾವುದೇ ಫೋಟೊ ಕಾಣಿಸಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರು ಟೂ ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.

  ನಮ್ಮಿಬ್ಬರ ಸ್ನೇಹ ಬಹಳ ಗಟ್ಟಿಯಾಗಿದೆ

  ನಮ್ಮಿಬ್ಬರ ಸ್ನೇಹ ಬಹಳ ಗಟ್ಟಿಯಾಗಿದೆ

  ಸಮಂತಾ ಹಾಗೂ ಗಾಯಕಿ ಚಿನ್ಮಯಿ ಬಹಳ ಆತ್ಮೀಯ ಸ್ನೇಹಿತರು. ಅದ್ಯಾವ ಮಟ್ಟಿಗೆ ಎಂದರೆ ವಿವಾದಗಳ ಬಗ್ಗೆ ಒಟ್ಟಿಗೆ ದನಿ ಎತ್ತುತ್ತಿದ್ದರು. ಸಮಂತಾ ಡೈವೋರ್ಸ್ ಬೆನ್ನಲ್ಲೇ ಚಿನ್ಮಯಿ ಸ್ನೇಹವನ್ನು ಕಡಿದುಕೊಂಡಿದ್ದಾರೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಚಿನ್ಮಯಿ "ಒಟ್ಟಿಗೆ ಇರುವ ಫೋಟೊ ಶೇರ್ ಮಾಡಿಲ್ಲ ಎಂದ ಮಾತ್ರಕ್ಕೆ ನಾವಿಬ್ಬರು ನಾವಿಬ್ಬರು ದೂರಾಗಿದ್ದೀವಿ ಎಂದು ಅರ್ಥ ಅಲ್ಲ. ನಮ್ಮ ಸ್ನೇಹ ಬಹಳ ಗಟ್ಟಿಯಾದದ್ದು. ನಾವು ಈಗಲೂ ಸಮಯ ಸಿಕ್ಕಾಗಲೆಲ್ಲಾ ಒಟ್ಟಿಗೆ ಸೇರುತ್ತಿರುತ್ತೀವಿ. ಪಾರ್ಟಿ, ಡಿನ್ನರ್ ಅಂತೆಲ್ಲಾ ಎಂಜಾಯ್ ಮಾಡುತ್ತೀವಿ. ಆದರೆ ಅದರ ಫೋಟೊಗಳನ್ನು ಶೇರ್ ಮಾಡಿಲ್ಲ ಅಷ್ಟೆ. ಆಗಾಗ್ಗೆ ನಮ್ಮ ಮನೆಯಲ್ಲಿ ಇಲ್ಲ ಅವರ ಮನೆಯಲ್ಲಿ ಭೇಟಿಯಾಗುತ್ತೀವಿ. ಅದನ್ನೆಲ್ಲಾ ಹೇಳಬೇಕು ಎಂದೇನಿಲ್ಲ, ಇದರಿಂದ ಯಾರಿಗೂ ಉಪಯೋಗವಿಲ್ಲ" ಎಂದು ಕ್ಲಾರಿಟಿ ನೀಡಿದ್ದಾರೆ.

  ಧಿಮಾಕು ತೋರಿಸಿ ಇಂಡಸ್ಟ್ರಿನ ಎದುರಾಕಿಕೊಂಡ್ರಾ ದೇವರಕೊಂಡ? 'ಅರ್ಜುನ್ ರೆಡ್ಡಿ' ಕಥೆ ಮುಗೀತಾ?ಧಿಮಾಕು ತೋರಿಸಿ ಇಂಡಸ್ಟ್ರಿನ ಎದುರಾಕಿಕೊಂಡ್ರಾ ದೇವರಕೊಂಡ? 'ಅರ್ಜುನ್ ರೆಡ್ಡಿ' ಕಥೆ ಮುಗೀತಾ?

  'ಸಮಂತಾ ಜೊತೆ ನನ್ನ ಜರ್ನಿ ಮುಗೀತು'

  'ಸಮಂತಾ ಜೊತೆ ನನ್ನ ಜರ್ನಿ ಮುಗೀತು'

  ಸಮಂತಾ ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳಿಗೆ ಡಬ್ ಮಾಡಿರುವುದು ಚಿನ್ಮಯಿ ಶ್ರೀಪಾದ. ಹಿನ್ನೆಲೆ ಗಾಯಕಿಯಾಗಿದ್ದ ಚಿನ್ಮಯಿ ಜೆಸ್ಸಿ ಪಾತ್ರಕ್ಕೆ ಡಬ್ ಮಾಡಿದ ಮೇಲೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಹೆಚ್ಚು ಪ್ರಚಲಿತಕ್ಕೆ ಬಂದರು. ನಂತರ ಗಾಯಕಿಯಾಗಿಯೂ ಹೆಚ್ಚು ಅವಕಾಶಗಳು ಸಿಕ್ತು. "ಸಮಂತಾ ಬಹಳ ಒಳ್ಳೆಯ ವ್ಯಕ್ತಿ. ಆಕೆಯಿಂದಲೇ ನನಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಹೆಚ್ಚು ಅವಕಾಶಗಳು ಸಿಕ್ತು. ಆದರೆ ಇನ್ನು ಮುಂದೆ ಆಕೆಯ ಜೊತೆ ನನ್ನ ಜರ್ನಿ ಮುಗಿದಿದೆ ಅನ್ನಿಸುತ್ತದೆ. ಕಾರಣ ಆಕೆ ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಲು ಶುರು ಮಾಡಿದ್ದಾರೆ. ಇನ್ನು ಮುಂದೆ ಆಕೆಗೆ ಡಬ್ ಮಾಡುವ ಅವಕಾಶ ಸಿಗುವುದಿಲ್ಲವೇನೋ" ಎಂದು ಚಿನ್ಮಯಿ ಹೇಳಿದ್ದಾರೆ.

  ಒಬ್ಬರಿಗೊಬ್ಬರು ಬೆಂಬಲ

  ಒಬ್ಬರಿಗೊಬ್ಬರು ಬೆಂಬಲ

  ಕೆಲ ದಿನಗಳ ಹಿಂದೆ ಗಾಯಕಿ ಚಿನ್ಮಯಿ ಮೀಟು ಆರೋಪ ಮಾಡಿದ್ದರು. ಆಗ ಸಮಂತಾ ಬಹಿರಂಗವಾಗಿಯೇ ಸ್ನೇಹಿತೆಯ ಬೆಂಬಲಕ್ಕೆ ನಿಂತಿದ್ದರು. ಇನ್ನು 'ಫ್ಯಾಮಿಲಿಮ್ಯಾನ್- 2' ವೆಬ್ ಸೀರಿಸ್‌ನಲ್ಲಿ ಸಮಂತಾ ಬೋಲ್ಡ್ ಆಗಿ ನಟಿಸಿದ್ದರ ಬಗ್ಗೆ ಸಾಕಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದರು. ಆಗ ಸ್ಯಾಮ್ ಬೆಂಬಲಕ್ಕೆ ಚಿನ್ಮಯಿ ಬಂದಿದ್ದರು. ಹೀಗೆ ಇವರಿಬ್ಬರ ನಡುವೆ ಬಹಳ ಗಾಢವಾದ ಸ್ನೇಹ ಇದೆ.

  ಚಿನ್ಮಯಿ ಚಿತ್ರರಂಗದಲ್ಲಿ ಬ್ಯುಸಿ

  ಚಿನ್ಮಯಿ ಚಿತ್ರರಂಗದಲ್ಲಿ ಬ್ಯುಸಿ

  ತೆಲುಗಿನಲ್ಲಿ ಬಹುಬೇಡಿಕೆಯ ಡಬ್ಬಿಂಗ್ ಆರ್ಟಿಸ್ಟ್ ಚಿನ್ಮಯಿ ಶ್ರೀಪಾದ. ಸಾಲು ಸಾಲು ಸಿನಿಮಾಗಳಲ್ಲಿ ಆಕೆ ಕೆಲಸ ಮಾಡಿದ್ದಾರೆ. ಸಮಂತಾ ಮಾತ್ರವಲ್ಲದೇ ಭೂಮಿಕಾ ಚಾವ್ಲಾ, ಕಂಗನಾ ರಾಣಾವತ್, ಕಾಜಲ್ ಅಗರ್‌ವಾಲ್, ತಮನ್ನಾ, ತ್ರಿಷಾ, ಅಮಲಾ ಪೌಲ್, ಅನುಷ್ಕಾ ಶೆಟ್ಟಿ, ಪೂಜಾ ಹೆಗಡೆ ಹೀಗೆ ಸಾಕಷ್ಟು ನಟಿಯರ ಪಾತ್ರಗಳಿಗೆ ಡಬ್ ಮಾಡಿದ್ದಾರೆ. ತೆಲುಗು ಮಾತ್ರವಲ್ಲದೇ ತಮಿಳಿನಲ್ಲೂ ಡಬ್‌ ಮಾಡಿದ್ದಾರೆ. ಸಮಂತಾ ಕೊನೆಯದಾಗಿ ನಟಿಸಿದ 'ಕಾತುವಾಕುಲೆ ರೆಂಡು ಕಾದಲ್' ತೆಲುಗು ವರ್ಷನ್‌ಗೆ ಚಿನ್ಮಯಿ ವಾಯ್ಸ್ ನೀಡಿದ್ದರು.

  English summary
  Singer Chinmayi Sripada Clarity On Differences With Samantha Ruth Prabhu. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X