'ಫನ್ ಬಕೆಟ್' ಭಾರ್ಗವ್ ಮುಖವಾಡ ಕಳಚಿದ ಗಾಯಕಿ ಚಿನ್ಮಯಿ ಶ್ರೀಪಾದ್

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ 'ಫನ್ ಬಕೆಟ್' ಭಾರ್ಗವ್ ಅರೆಸ್ಟ್ ಆಗಿದ್ದಾನೆ. ಹದಿಹರೆಯದ ಹುಡುಗಿಯನ್ನು ನಂಬಿಸಿ, ವಂಚಿಸಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದು, ಆಕೆ ಗರ್ಭಿಣಿ ಸಹ ಆಗಿದ್ದಾಳೆ ಎಂದು ಸಂತ್ರಸ್ಥೆಯ ತಾಯಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಫನ್ ಬಕೆಟ್ ಭಾರ್ಗವ್ ಸಿಕ್ಕಾಪಟ್ಟೆ ಫೇಮಸ್. ವಿಶೇಷವಾಗಿ 'ಓ ಮೈ ಗಾಡ್....ಓ ಮೈ ಗಾಡ್' ಎಂಬ ವಿಡಿಯೋಗಳ ಮೂಲಕ ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿಕೊಂಡಿದ್ದ. ಭಾರ್ಗವ್ ಅತ್ಯಾಚಾರ ಪ್ರಕರಣ ಹೊರಬೀಳುತ್ತಿದ್ದಂತೆ ಗಾಯಕಿ ಚಿನ್ಮಯಿ ಶ್ರೀಪಾದ್ ಈ ಕೇಸ್‌ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಭಾರ್ಗವ್ ಓರ್ವ ಕಾಮುಕ, ಆತನ ಬಗ್ಗೆ ಕೆಲವು ಹುಡುಗಿಯರು ಈ ಹಿಂದೆಯೂ ಹೇಳಿದ್ದರು ಎಂದು ಚಿನ್ಮಯಿ ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿ...

ಭಾರ್ಗವ್ ಕುರಿತು ಮೊದಲೇ ಕೇಳಿದ್ದೆ

ಭಾರ್ಗವ್ ಕುರಿತು ಮೊದಲೇ ಕೇಳಿದ್ದೆ

''ಫನ್ ಬಕೆಟ್ ಭಾರ್ಗವ್ ಕುರಿತು ಈ ಹಿಂದೆಯೂ ಕೇಳಿದ್ದೆ. ಆತನೊಬ್ಬ ಸ್ತ್ರೀಲೋಲ ಎಂದು ಹೇಳುತ್ತಿದ್ದರು. ಆತನ ಜೊತೆಯಿದ್ದ ಮಾಜಿ ಗರ್ಲ್‌ ಫ್ರೆಂಡ್‌ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ ಈತನ ಬಗ್ಗೆ ಹೇಳಿದ್ದರು. ಇಂತವರ ಬಳಿ ಬಹಳ ಜಾಗೃತವಾಗಿರಬೇಕು. ಸ್ಮಾರ್ಟ್ ಆಗಿ ಮಾತನಾಡಿ, ನಂಬಿಸಿ ಮೋಸ ಮಾಡ್ತಾರೆ. ಯಾರ ಜೊತೆ ಸ್ನೇಹ ಮಾಡಬೇಕು, ಯಾರ ಜೊತೆ ಎಷ್ಟು ಮುಂದುವರಿಯಬೇಕು ಎನ್ನುವುದರ ಬಗ್ಗೆ ತಿಳಿದುಕೊಂಡು ಎಚ್ಚರ ವಹಿಸಬೇಕು'' ಎಂದು ಚಿನ್ಮಯಿ ಪ್ರತಿಕ್ರಿಯಿಸಿದ್ದಾರೆ.

ಪೋಷಕರದ್ದು ತಪ್ಪು ಎಂದು ಹೇಳಬೇಡಿ

ಪೋಷಕರದ್ದು ತಪ್ಪು ಎಂದು ಹೇಳಬೇಡಿ

''ಇಂತಹ ಪ್ರಕರಣಗಳಲ್ಲಿ ಅಪ್ರಾಪ್ತೆ ಬಾಲಕಿ ಅಥವಾ ಅವರ ಪೋಷಕರದ್ದೇ ತಪ್ಪು ಎನ್ನುವ ರೀತಿ ಬಿಂಬಿಸಲಾಗುತ್ತದೆ. ಮಕ್ಕಳನ್ನು ಹೇಗೆ ಬೆಳೆಸುತ್ತಾರೋ ಅದು ಮುಖ್ಯವಾಗುತ್ತದೆ ಎಂದು ದೂಷಿಸುತ್ತಾರೆ. ಹೌದು, ಅದು ನಿಜ. ಆದರೆ, ಭಾರ್ಗವ್ ಅಂತಹ ವ್ಯಕ್ತಿಗಳ ಬಹಳಷ್ಟು ಜನ ಸಮಾಜದಲ್ಲಿದ್ದಾರೆ. ನಂಬಿಸಿ, ಮೋಸ ಮಾಡ್ತಾರೆ. ಬಾಲಕಿಯರ ಪೋಷಕರು ಬಗ್ಗೆ ದೂರುವಂತೆ ಯುವಕರ ಪೋಷಕರು ತಮ್ಮ ಮಕ್ಕಳಿಗೆ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಿಕೊಡಬೇಕು'' ಎಂದು ಟೀಕಿಸಿದ್ದಾರೆ.

ಹುಡುಗಿಯರು ಎಚ್ಚರದಿಂದಿರಿ

ಹುಡುಗಿಯರು ಎಚ್ಚರದಿಂದಿರಿ

ಭಾರ್ಗವ್ ಪ್ರಕರಣದ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ್ ಯುವತಿಯರಿಗೆ ಹಾಗು ಅಪ್ರಾಪ್ತೆ ಬಾಲಕಿಯರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ. ''ಶಿಕ್ಷಣ ಮುಖ್ಯ, ನಿಮ್ಮ ಜೀವನದ ಕಡೆ ಫೋಕಸ್ ಮಾಡಿ, ಇಂತಹ ಆಮಿಷ, ಆಸೆಗಳಿಂದ ಮೋಸ ಹೋಗಬೇಡಿ. ಮನೆಯಲ್ಲಿ ಆಗಲಿ ಅಥವಾ ಹೊರಗಡೆಯಾಗಲಿ ನಿಮ್ಮ ಮೇಲೆ ದೌರ್ಜನ್ಯವಾದರೆ ಪೋಷಕರಿಗೆ ತಿಳಿಸಿ, ಹಿರಿಯರ ಗಮನಕ್ಕೆ ತನ್ನಿ'' ಎಂದು ಚಿನ್ಮಯಿ ಎಚ್ಚರಿಸಿದ್ದಾರೆ.

Recommended Video

ಅಭಿಮಾನಿಗಳು ಏನೇ ಪ್ರಶ್ಮೆ ಕೇಳಿದ್ರೂ ಉತ್ತರ ಕೊಡ್ತಾರೆ - ರಮ್ಯಾ | Filmibeat Kannada
ವಿಶಾಖಪಟ್ಟಣಂ ಪೊಲೀಸರಿಂದ ಬಂಧನ

ವಿಶಾಖಪಟ್ಟಣಂ ಪೊಲೀಸರಿಂದ ಬಂಧನ

14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ವಿಶಾಖಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರ್ಗವ್ ಅರೆಸ್ಟ್ ಆಗಿದ್ದು, ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ವರದಿಯಾಗಿದೆ.

More from Filmibeat

English summary
Singer Chinmayi Sripada Talks About Fun Bucket Bhargav Case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X