ಜನಪ್ರಿಯ ಗಾಯಕಿ ತಂದೆ ಅನುಮಾನಾಸ್ಪದ ಸಾವು: ದೂರು ದಾಖಲು

ಹಲವು ತೆಲುಗು ಸಿನಿಮಾ ಹಾಡುಗಳನ್ನು ಹಾಡಿರುವ ಜನಪ್ರಿಯ ಗಾಯಕಿ ಹರಿಣಿ ಅವರ ತಂದೆ ಎ.ಕೆ.ರಾವ್ ಅವರ ಮೃತದೇಹ ಯಲಹಂಕದ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ. ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.

ನವೆಂಬರ್ 23 ರಂದೇ ಶವ ದೊರೆತಿದೆ. ಆದರೆ ಇದು ಆತ್ಮಹತ್ಯೆಯಲ್ಲ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾವ್ ಅವರ ಕುತ್ತಿಗೆಯ ಬಳಿ ಚಾಕುವಿನಿಂದ ತಿವಿದ ಗುರುತು ಇದೆ. ಎಡಗೈ ಮುಂಗೈಗೂ ಚಾಕುವಿನಿಂದ ಇರಿಯಲಾಗಿದೆ.

ಹರಿಣಿ ಹಾಗೂ ಕುಟುಂಬಸ್ಥರು ಹೈದರಾಬಾದ್‌ನಲ್ಲಿ ವಾಸವಿದ್ದರು. ಆದರೆ ಕೆಲವು ದಿನಗಳಿಂದ ಅವರೂ ಸಹ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಇದು ಸಹ ಅನುಮಾನಕ್ಕೆ ಕಾರಣವಾಗಿದೆ.

Singer Harinis Father AK Rao death suspicious

ಮೃತ ದೇಹದ ಬಳಿ ಆಧಾರ್‌ ಕಾರ್ಡ್, ದೂರು ನೀಡಲು ಸಿದ್ಧಪಡಿಸಿಕೊಂಡಿರುವ ಪತ್ರ, ಕೆಲವು ಡಾಕ್ಯುಮೆಂಟ್‌ಗಳು ದೊರೆತಿವೆ. ಮೃತದೇಹದ ಬಳಿ ಚಾಕು ಸಹ ದೊರೆತಿದೆ.

ಮೃತ ಎ.ಕೆ.ರಾವ್ ಅವರ ಪುತ್ರಿ ಶಾಲಿನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಅವರ ಕೊಲೆ ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ ಈಗ ಮೃತಪಟ್ಟಿರುವ ಎಕೆ ರಾವ್ ಅವರ ಕುಟುಂಬ (ಗಾಯಕಿ ಹರಿಣಿ ಸೇರಿದಂತೆ) ಕಳೆದ ಕೆಲ ದಿನಗಳಿಂದಲೂ ನಾಪತ್ತೆಯಾಗಿದ್ದರು. ಅವರ ಫೋನ್‌ ನಂಬರ್‌ಗಳು ಸ್ವಿಚ್ ಆಫ್ ಆಗಿದ್ದವು. ಎಕೆ ರಾವ್ ನಿಧನದ ಸುದ್ದಿಯನ್ನು ತಲುಪಿಸಲು ಯಲಹಂಕ ಪೊಲೀಸರು ಯತ್ನಿಸಿದಾಗಿ ಈ ವಿಷಯ ಬೆಳಕಿಗೆ ಬಂತು. ಆದರೆ ನಂತರ ಕುಟುಂಬ ಸದಸ್ಯರು ಒಟ್ಟಾಗಿ ರೈಲ್ವೆ ಪೊಲೀಸರ ಮುಂದೆ ಹಾಜರಾಗಿ ತಂದೆಯ ಮೃತದೇಹವನ್ನು ಗುರುತಿಸಿದ್ದಾರೆ.

ಎಕೆ ರಾವ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಪಡೆದಿದ್ದು, ವರದಿ ಬಂದ ಬಳಿಕ ಇದು ಆತ್ಮಹತ್ಯೆಯೋ, ಕೊಲೆಯೊ ಗೊತ್ತಾಗುತ್ತದೆ. ಮೃತ ಎಕೆ ರಾವ್ ಅವರು ಸುಜನಾ ಫೌಂಡೇಶನ್ ಸಂಸ್ಥೆಯಲ್ಲಿ ಸಿಇಓ ಆಗಿ ಕೆಲಸ ಮಾಡುತ್ತಿದ್ದರು. ಜನಪ್ರಿಯ ಸುಜನಾ ಚೌಧರಿ ಈ ಸಂಸ್ಥೆಯನ್ನು ನಡೆಸುತ್ತಾರೆ. ಕೌಟುಂಬಿಕ ಕಾರಣ, ಕಚೇರಿ ಕಾರಣ ಅಥವಾ ಇನ್ನಾವ ಕಾರಣಕ್ಕೆ ಎಕೆ ರಾವ್ ಸಾವಾಗಿದೆ ಎಂಬುದು ತನಿಖೆಯಿಂದ ತಿಳಿದು ಬರಲಿದೆ.

ಹರಿಣಿ ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿದ್ದಾರೆ. ನೂರಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಆರಂಭದ ಸಿನಿಮಾಗಳಲ್ಲಿ ಹಲವು ಹಾಡುಗಳನ್ನು ಹಾಡಿರುವ ಹರಿಣಿ, ಮಣಿಶರ್ಮಾ, ಹ್ಯಾರಿಸ್ ಜಯರಾಜ್, ದೇವಿಶ್ರೀಪ್ರಸಾದ್, ಎಸ್ ತಮನ್ ಇನ್ನೂ ಹಲವು ಜನಪ್ರಿಯ ಸಂಗೀತ ನಿರ್ದೇಶಕರಿಗಾಗಿ ಹಾಡುಗಳನ್ನು ಹಾಡಿದ್ದಾರೆ. ತೆಲುಗು ಮಾತ್ರವೇ ಅಲ್ಲದೆ ತಮಿಳಿನಲ್ಲಿಯೂ ನೂರಾರು ಹಿಟ್ ಗೀತೆಗಳನ್ನು ಹರಿಣಿ ನೀಡಿದ್ದಾರೆ.

More from Filmibeat

English summary
Famous singer Harini's father AK Rao's dead body found on railway line near Yelahanka railway station.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X