ಮಂಗ್ಲಿ ಸುತ್ತ ಮುತ್ತ ₹150 ಕೋಟಿ ಹಗರಣದ ಹುತ್ತ ; ಹೇಳಿದ್ದೇನು ಗಾಯಕಿ ?

ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ.

ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ಪೀಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಮಂಗ್ಲಿ ಸುತ್ತ ಮುತ್ತ ಎದ್ದಿರುವ 150 ಕೋಟಿ ವಿವಾದದ ಹುತ್ತ.

Singer Mangli Slams Baseless 150 Crore Scam Rumors in Powerful Official Rebuttal

ಹೌದು. ಮಂಗ್ಲಿ.. ಪಕ್ಕದ ಮನೆಯ ಪ್ರಖ್ಯಾತ ಗಾಯಕಿ. ದರ್ಶನ್ ಅಭಿನಯದ ''ರಾಬರ್ಟ್‌'' ಚಿತ್ರದ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ಮಂಗ್ಲಿ ತಮ್ಮ ಹಾಡುಗಳಿಗಿಂತ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು.

ಗ್ರಾಮ ದೇವತೆಗೆ ಅವಮಾನ ಮಾಡಿದ ವಿಚಾರ ಇರಬಹುದು, ಗಾಂಜಾ ಅಥವಾ ಡ್ರಗ್ಸ್ ವಿವಾದ ಇರಬಹುದು, ಇಷ್ಟೆಲ್ಲಾ ಯಾಕೆ ಮೊನ್ನೆ ಮೊನ್ನೆ ಪ್ರೇಮ್ ಅವರ ಕುಖ್ಯಾತ ಹಾಡು 'ಸರ್ಕೆ ಚುನ್ನರ್ ತೇರಿ ಸರ್ಕೆ' ಇರಬಹುದು. ಸದಾ ವಿವಾದ ಕೇಂದ್ರ ಬಿಂದುವಾದ ಮಂಗ್ಲಿಯ ಸುತ್ತ ಸದ್ಯ 150 ಕೋಟಿ ಹಗರಣದ ವಿವಾದದ ಹುತ್ತ ಬೆಳೆದಿದೆ.

ಹೌದು, ಅಸಲಿಗೆ ಮಂಗ್ಲಿಯ ಹೆಸರು ಮೈಕ್ರೋ ಫೈನಾನ್ಸ್ ಕಂಪನಿಯ ಜೊತೆ ತಳುಕು ಹಾಕಿಕೊಂಡಿದೆ. ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಮಂಗ್ಲಿ ತನ್ನ ಸಹೋದರ ಶಿವ ಜೊತೆ ಸೇರಿ ಹಲವಾರು ಜನರಿಗೆ ಪಂಗನಾಮ ಹಾಕಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಆಂಧ್ರದಲ್ಲಿ ಕೆಲ ಯೂಟ್ಯೂಬ್ ವಾಹಿನಿಗಳು ಈ ಕುರಿತು ವರದಿಯನ್ನು ಕೂಡ ಮಾಡಿದ್ದು ಮಂಗ್ಲಿ ಅವರ ಮನೆಯಲ್ಲಿ ರಾಶಿ ರಾಶಿ ಹಣದ ಕಂತೆ ಸಿಕ್ಕಿವೆ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಮಾಡಿವೆ.

ಸದ್ಯ ತಮ್ಮ ಕುರಿತ ಈ ಸುದ್ದಿ ಮತ್ತು ಆರೋಪಗಳಿಗೆ ಮಂಗ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟೀಕರಣ ನೀಡಿರುವ ಮಂಗ್ಲಿ ನನಗೂ ಅಥವಾ ನನ್ನ ಕುಟುಂಬಕ್ಕೂ ಈ ಮೈಕ್ರೋ ಫೈನಾನ್ಸ್ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

Singer Mangli Slams Baseless 150 Crore Scam Rumors in Powerful Official Rebuttal

ನನ್ನ ವೃತ್ತಿಪರ ಕಾರ್ಯಕ್ರಮಗಳಿಗಾಗಿ ಪ್ರತಿದಿನ ಅನೇಕರು ನನ್ನನ್ನು ಮತ್ತು ನನ್ನ ತಮ್ಮನನ್ನು ಸಂಪರ್ಕಿಸುತ್ತಾರೆ. ಅದು ಕೇವಲ ಕಾರ್ಯಕ್ರಮದ ಆಹ್ವಾನ ಮತ್ತು ವಿವರಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೇಳಿರುವ ಮಂಗ್ಲಿ ಬೇರೆ ವ್ಯಕ್ತಿಗಳ ವೈಯಕ್ತಿಕ ಅಥವಾ ಆರ್ಥಿಕ ವ್ಯವಹಾರಗಳ ಬಗ್ಗೆ ನನಗಾಗಲಿ ಅಥವಾ ನನ್ನ ಕುಟುಂಬದವರಿಗಾಗಲಿ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಹೇಳಿದ್ಧಾರೆ.

ಮುಂದುವರೆದು ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಪ್ರಸಾರವಾಗುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದು ಹೇಳಿರುವ ಮಂಗ್ಲಿ ಕೆಲವರು ಉದ್ದೇಶಪೂರ್ವಕವಾಗಿ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ಧಾರೆ. ಸಂಗೀತ ಕಾರ್ಯಕ್ರಮಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ವ್ಯವಹಾರಗಳಿಲ್ಲ. ದಯವಿಟ್ಟು ಯಾರಾದರೂ ನನ್ನ ಹೆಸರು ಹೇಳಿ ದುಡ್ಡು ಕೇಳಿದರೆ ಕೊಡಬೇಡಿ ಎಂದು ಮನವಿಯನ್ನು ಮಾಡಿಕೊಂಡಿರುವ ಮಂಗ್ಲಿ ಯಾರನ್ನೂ ನಂಬಬೇಡಿ ಎಂದು ಹೇಳಿದ್ಧಾರೆ. ನನ್ನ ಹೆಸರಿನಲ್ಲಿ ಮೋಸ ಹೋದವರಿಗೆ ನ್ಯಾಯ ಒದಗಿಸಬೇಕೆಂದು ನಾನು ಪೊಲೀಸ್ ಇಲಾಖೆಯನ್ನು ವಿನಂತಿಸುತ್ತೇನೆ ಎಂದು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದೇ ಸಮಯದಲ್ಲಿ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವ, ವ್ಯೂವ್ಸ್‌ಗಾಗಿ ತಮ್ಮ ಹೆಸರನ್ನು ಬಳಸಿಕೊಂಡವರ ವಿರುದ್ಧ ಕಾನೂನು ಸಮರವನ್ನು ಕೂಡ ಮಂಗ್ಲಿ ಸಾರಲು ಮುಂದಾಗಿದ್ದು ಪುರಾವೆಗಳಿಲ್ಲದೆ ತಮ್ಮ ಹೆಸರನ್ನು ಹಗರಣಕ್ಕೆ ಎಳೆದು ತಂದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

More from Filmibeat

English summary
Looking for the truth about the Singer Mangli fraud controversy? Get the latest updates on the ₹150 Crore microfinance scam allegations and Mangli’s powerful legal response. We break down her official statement and the facts behind the viral rumors.
Read more about: fraud mangli tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X