For Quick Alerts
  ALLOW NOTIFICATIONS  
  For Daily Alerts

  ಮಕ್ಕಳ ಅನುಮತಿಯೊಂದಿಗೆ ಎರಡನೇ ಮದುವೆಗೆ ತಯಾರಾದ ಗಾಯಕಿ

  |

  ತೆಲುಗು-ತಮಿಳಿನ ಖ್ಯಾತ ಗಾಯಕಿ ಸುನೀತಾ ಉಪದ್ರಸ್ತ ತಮ್ಮ 42ನೇ ವಯಸ್ಸಿನಲ್ಲಿ ಎರಡನೇ ಮದುವೆ ಆಗುತ್ತಿದ್ದಾರೆ. ಈ ಬಗ್ಗೆ ತಮ್ಮ ಭಾವಿ ಪತಿ ಜೊತೆಗೆ ಚಿತ್ರದೊಂದಿಗೆ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ.

  ಮೀಡಿಯಾ ಹೌಸ್‌ ಒಂದರ ಸಿಇಒ ಆಗಿರುವ ರಾಮ್ ವೀರಪನೇನಿ ಅವರೊಂದಿಗೆ ಸುನೀತಾ ಉಪದ್ರಸ್ತ ಮದುವೆ ಆಗಲಿದ್ದಾರೆ. ಸುನೀತಾ ಅವರ ಇಬ್ಬರು ಮಕ್ಕಳು ಹಾಗೂ ಪೋಷಕರ ಸಮ್ಮುಖದಲ್ಲಿ ನಿನ್ನೆ ಇಬ್ಬರ ನಿಶ್ಚಿತಾರ್ಥ ಆಗಿದೆ.

  ಗಾಯಕಿ ಸುನಿತಾ ಗೆ ತಮ್ಮ 19 ನೇ ವಯಸ್ಸಿನಲ್ಲಿಯೇ ಕಿರಣ್ ಗೋಪುರಾಜು ಎಂಬುವರೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ ಒಬ್ಬ ಮಗ, ಒಬ್ಬಳು ಮಗಳು ಇದ್ದರು. ಕೆಲ ವರ್ಷಗಳ ಹಿಂದೆ ಇಬ್ಬರೂ ವಿಚ್ಛೇಧನ ಪಡೆದುಕೊಂಡರು. ಈಗ ಮಕ್ಕಳು ಹಾಗೂ ಪೋಷಕರ ಒಪ್ಪಿಗೆ ಮೇರೆಗೆ ಮತ್ತೆ ಮದುವೆ ಆಗುತ್ತಿದ್ದಾರೆ.

  ರಾಮ್ ವೀರಪನೇನಿ ಡಿಜಿಟಲ್ ಮೀಡಿಯಾ ಸಂಸ್ಥೆಯ ಸಿಇಒ ಆಗಿದ್ದು, 'ನನ್ನ ಬಾಳಿಗೆ ಸ್ನೇಹಿತನಾಗಿ ಬಂದು ಈಗ ನನ್ನ ಜೀವನದ ಭಾಗವೇ ಆಗುತ್ತಿದ್ದಾರೆ ರಾಮ್' ಎಂದು ಹೇಳಿದ್ದಾರೆ ಸುನೀತಾ. ಸುನೀತಾ ಅವರ ಮರು ಮದುವೆ ನಿರ್ಧಾರಕ್ಕೆ ಹಲವಾರು ಮಂದಿ ಶುಭಾಶಯಗಳನ್ನು ತಿಳಿಸಿದ್ದಾರೆ.

  Sanjana ಗೆ ಅನುಮತಿ ಕೊಟ್ಟ ಹೈ ಕೋರ್ಟ್ | Filmibeat Kannada

  ಸುನೀತಾ ತಮ್ಮ 17ನೇ ವಯಸ್ಸಿನಿಂದಲೇ ಸಿನಿಮಾಗಳಿಗೆ ಹಾಡುವುದು ಪ್ರಾರಂಭಿಸಿದ್ದರು. ಈ ವರೆಗೆ ನೂರಾರು ಹಾಡುಗಳನ್ನು ಅವರು ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಹಾಡಿದ್ದಾರೆ. ಅತಿ ಹೆಚ್ಚು ಹಾಡಿರುವುದು ತೆಲುಗಿನಲ್ಲಿ. ಈಗಲೂ ಸಹ ಅವರು ತೆಲುಗಿನ ಬೇಡಿಕೆಯ ಗಾಯಕಿಯರಲ್ಲೊಬ್ಬರು.

  English summary
  Singer Sunitha Upadrasta engaged to Ram Veerappaneni. This is her second marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X