Cannes 2023: ಒಮ್ಮೆ ಜಲಕನ್ಯೆ.. ಮತ್ತೊಮ್ಮೆ ನವಿಲು.. ಮೃಣಾಲ್ ಚೆಲುವಿಗೆ ರಶ್ಮಿಕಾ ಬಿರುದು ಕಿತ್ತುಕೊಟ್ಟ ಫ್ಯಾನ್ಸ್

'ಸೀತಾ ರಾಮಂ' ಚಿತ್ರದಿಂದ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ ನಟಿ ಮೃಣಾಲ್ ಠಾಕೂರ್. ಸದ್ಯ ದಿನಕ್ಕೊಂದು ಹಾಟ್ ಫೋಟೊಶೂಟ್‌ನಿಂದ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಡುತ್ತಿದ್ದಾರೆ. ಇದೆಲ್ಲದರ ನಡುವೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಆಕೆಯ ರೆಡ್ ಕಾರ್ಪೆಟ್ ಲುಕ್ ಸಖತ್ ವೈರಲ್ ಆಗುತ್ತಿದೆ.

ಅನುಷ್ಕಾ ಶರ್ಮಾ, ಐಶ್ವರ್ಯ ರೈ ಮಾತ್ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುವ ಮಾತುಗಳು ಕೇಳಿಬಂದಿತ್ತು. ಆದರೆ ದಿಢೀರನೇ ಸಾರಾ ಅಲಿಖಾನ್, ಊರ್ವಶಿ ರೌಟೇಲಾ, ಇಶಾ ಗುಪ್ತಾ, ಮಾನುಷಿ ಚಿಲ್ಲಾರ್ ಸೇರಿದಂತೆ ಹಲವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ಸಾಲು ನಿಂತರು. ಈ ಸಾಲಿಗೆ 'ಸೀತಾ ರಾಮಂ' ಬೆಡಗಿ ಕೂಡ ಸೇರಿಕೊಂಡಿದ್ದಾರೆ. 2 ದಿನ 2 ವಿಭಿನ್ನ ಲುಕ್‌ನಲ್ಲಿ ಮೃಣಾಲ್ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

Sita Ramam Actress Mrunal Thakur makes a stunning debut at Cannes Cannes Film Festival 2023

ಫೆಸ್ಟಿವಲ್ 2ನೇ ದಿನ ಕಪ್ಪು ಬಣ್ಣದ ಕಾಸ್ಟ್ಯೂಮ್‌ನಲ್ಲಿ ಮಿಂಚಿದ ಚೆಲುವೆ 3ನೇ ದಿನ ಸೀರೆಯಂತಹ ಗೌನ್‌ನಲ್ಲಿ ಕಾಣಿಸಿಕೊಂಡು ರಂಗೇರಿಸಿದ್ದಾರೆ. ಆಕೆಯ ಹಾಟ್ ಹಾಟ್ ಫೋಟೊಗಳನ್ನು ನೋಡಿ ಅಭಿಮಾನಿಗಳು ಹೊಸ ಬಿರುದು ಕೊಟ್ಟಿದ್ದಾರೆ. ಇದೇ ವಿಚಾರ ಇಘ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಚರ್ಚೆ ಹುಟ್ಟುಹಾಕಿದೆ. ಮೃಣಾ ರೆಡ್ ಕಾರ್ಪೆಟ್ ಲುಕ್‌ ಈಗ ಸಖತ್ ವೈರಲ್ ಆಗುತ್ತಿದೆ.

ಜಲಕನ್ಯೆಯಂತೆ ಮಿಂಚಿದ ಬೆಡಗಿ

ಮೊದಲ ಬಾರಿಗೆ ರೆಡ್ ಕಾರ್ಪೆಟ್ ಮೇಲೆ ಸ್ವಿಮ್ ಸೂಟ್ ಮಾದರಿಯ ಡ್ರೆಸ್‌ನಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದರು. ಅದರ ಮೇಲೆ ಕಪ್ಪು ಬಣ್ಣದ ಬ್ಲೇಸರ್ ಧರಿಸಿ ಮಾದಕ ನಗೆ ಬೀರಿದ್ದರು. ಪ್ಯಾಂಟ್ ಧರಿಸಿದ್ದಾರೋ ಇಲ್ವೋ ಎನ್ನುವಂತೆ ಬಲೆಯ ಮಾದರಿಯ ಪಾರದರ್ಶಕ ಪ್ಯಾಂಟ್‌ನಲ್ಲಿ ಮಿಂಚಿದ್ದರು. ಜಲಕನ್ಯೆಯಂತೆ ಸ್ಟೈಲಿಶ್ ಲುಕ್‌ನಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿದೆ.

Sita Ramam Actress Mrunal Thakur makes a stunning debut at Cannes Cannes Film Festival 2023

ಹೊಸ ನ್ಯಾಷನಲ್ ಕ್ರಶ್

ಮರಾಠಿ ಬೆಡಗಿಯ ಈ ಹೊಸ ಲುಕ್‌ ಬಗ್ಗೆ ಮಿಶ್ರಪ್ರತಿ ವ್ಯಕ್ತವಾಗ್ತಿದೆ. ಕೆಲವರು 'ಸೀತಾ' ಬರ್ತಾ ಬರ್ತಾ ಯಾಕೆ ಹೀಗಾಗ್ತಿದ್ದೀಯಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಹೊಸ ನ್ಯಾಷನಲ್ ಕ್ರಶ್ ಎಂದು ಕರೆಯಲು ಆರಂಭಿಸಿದ್ದಾರೆ. ಇತ್ತೀಚೆಗೆ ಈ ಬಿರುದು ರಶ್ಮಿಕಾ ಹೆಸರಿನಲ್ಲಿ ಇತ್ತು. ಇನ್ನು ಮುಂದೆ ಮೃಣಾಲ್ ಹೊಸ ನ್ಯಾಷನಲ್ ಕ್ರಶ್ ಎನಿಸಿಕೊಳ್ಳುವ ಸಾಧ್ಯತೆಯಿದೆ.

ನವಿಲಿನಂತೆ ಗೌನ್‌ನಲ್ಲಿ ಮೋಡಿ

ಕಾನ್ ಫಿಲ್ಮ್ ಫೆಸ್ಟಿವಲ್‌ನ 2ನೇ ದಿನ ವೆಸ್ಟರ್ನ್ ಲುಕ್‌ನಲ್ಲಿ ಮಿಂಚಿದ ಮೃಣಾಲ್ 3ನೇ ದಿನ ದೇಶಿ ಸ್ಟೈಲ್ ಮೊರೆ ಹೋಗಿದ್ದಾರೆ. ಬಿಳಿ ಬಣ್ಣದ ಸೀರೆಯಂತಹ ಲಾಂಗ್ ಟ್ರೇಲ್ ಗೌನ್‌ ಧರಿಸಿ ಗಮನ ಸೆಳೆದಿದ್ದಾರೆ. ಉದ್ದನೆಯ ಟ್ರೇಲ್‌ನಿಂದ ಮರಾಠಿ ಬೆಡಗಿಯ ಲುಕ್ ನವಿಲಿನಂತೆ ಕಾಣಿಸುತ್ತಿದೆ.

Sita Ramam Actress Mrunal Thakur makes a stunning debut at Cannes Cannes Film Festival 2023

ಸೌತ್‌ನಲ್ಲೂ ಮೃಣಾಲ್ ಬ್ಯುಸಿ

ಮಹಾರಾಷ್ಟ್ರದ ಧುಲೆಯಲ್ಲಿ ಹುಟ್ಟಿ ಬೆಳೆದ ಮೃಣಾಲ್ ಠಾಕೂರ್ ಮೊದಲಿಗೆ ಕಿರಿತೆರೆ ಕಾರ್ಯಕ್ರಮಗಳಲ್ಲಿ ನಟಿಸಲು ಆರಂಭಿಸಿದರು. ನಂತರ ಮರಾಠಿ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು. 'ಲವ್ ಸೋನಿಯಾ' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಹೃತಿಕ್ ರೋಷನ್ ನಟನೆಯ 'ಸೂಪರ್ 30' ಚಿತ್ರದಲ್ಲಿ ಅವಕಾಶ ಪಡೆದರು. ನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ 'ಸೀತಾರಾಮಂ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.

ದುಲ್ಕರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದ ಈ ಚಿತ್ರದಲ್ಲಿ ನೀತಾ ಮಹಾಲಕ್ಷ್ಮಿ ಪಾತ್ರದಲ್ಲಿ ಮೃಣಾಲ್ ಮೋಡಿ ಮಾಡಿದರು. ತಮ್ಮ ಅಂದ ಹಾಗೂ ಅಭಿನಯದಿಂದ ಗಮನ ಸೆಳೆದರು. ಇದೀಗ ನಾನಿ ನಟನೆಯ ಮತ್ತೊಂದು ತೆಲುಗು ಚಿತ್ರದಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.

More from Filmibeat

English summary
Sita Ramam Actress Mrunal Thakur makes a stunning debut at Cannes Cannes Film Festival 2023. After black jacket over a black corset look Marathi actress turns desi look witha saree For day 2. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X